ಸಾರಾಂಶ
ವಿಜಯಪುರ: ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು, ವಾಹನ ಸವಾರು, ಪಾದಾಚಾರಿಗಳು ಸಂಚಾರಕ್ಕೆ ಹರಸಾಹಸ ಪಡುತ್ತಿದ್ದಾರೆ. ಈ ಟ್ರಾಫಿಕ್ ತಾಪತ್ರಯ ತಪ್ಪಿಸಲು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಸ್ವತಃ ರಸ್ತೆಗಿಳಿದು ಕಾರ್ಯಾಚರಣೆ ನಡೆಸಿದರು. ನಗರದ ಗಾಂಧಿ ವೃತ್ತ, ಸರಾಫ್ ಬಜಾರ್, ವಾಜಪೇಯಿ ರಸ್ತೆ, ರಾಮ ಮಂದಿರ ರಸ್ತೆ, ಸಿದ್ದೇಶ್ವರ ದೇಗುಲ ರಸ್ತೆಗಳಲ್ಲಿ ಪರಿಶೀಲನೆ ನಡೆಸಿದರು. ಅಲ್ಲಿ ರಸ್ತೆ ಪಕ್ಕದಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ ವಾಹನಗಳಿಗೆ ದಂಡ ಹಾಕಿ ಎಚ್ಚರಿಕೆ ನೀಡಿದ್ದಾರೆ.
ವಿಜಯಪುರ: ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು, ವಾಹನ ಸವಾರು, ಪಾದಾಚಾರಿಗಳು ಸಂಚಾರಕ್ಕೆ ಹರಸಾಹಸ ಪಡುತ್ತಿದ್ದಾರೆ. ಈ ಟ್ರಾಫಿಕ್ ತಾಪತ್ರಯ ತಪ್ಪಿಸಲು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಸ್ವತಃ ರಸ್ತೆಗಿಳಿದು ಕಾರ್ಯಾಚರಣೆ ನಡೆಸಿದರು.
ನಗರದ ಗಾಂಧಿ ವೃತ್ತ, ಸರಾಫ್ ಬಜಾರ್, ವಾಜಪೇಯಿ ರಸ್ತೆ, ರಾಮ ಮಂದಿರ ರಸ್ತೆ, ಸಿದ್ದೇಶ್ವರ ದೇಗುಲ ರಸ್ತೆಗಳಲ್ಲಿ ಪರಿಶೀಲನೆ ನಡೆಸಿದರು. ಅಲ್ಲಿ ರಸ್ತೆ ಪಕ್ಕದಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ ವಾಹನಗಳಿಗೆ ದಂಡ ಹಾಕಿ ಎಚ್ಚರಿಕೆ ನೀಡಿದ್ದಾರೆ. ರಸ್ತೆಯಲ್ಲಿ ಕಾರ್ ನಿಲ್ಲಿಸಿ ಹೋದ ಕಾರುಗಳಿಗೆ ನೋಟಿಸ್ ನೀಡಿ ದಂಡ ಹಾಕಲು ಆದೇಶಿಸಿದ್ದಾರೆ. ಟ್ರಾಫಿಕ್ ಕಿರಿಕಿರಿ ಇದ್ದಲ್ಲಿ ವಾಹನಗಳ ನಿಯಂತ್ರಣಕ್ಕೆ ದಂಡ ಪ್ರಯೋಗಕ್ಕೆ ಆದೇಶಿಸಿದ್ದು, ಬೇಕಾಬಿಟ್ಟಿ ರಸ್ತೆ ಮೇಲೆ ವಾಹನ ನಿಲ್ಲಿಸಿದರೆ ಮುಲಾಜಿಲ್ಲದೆ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಾಹನದ ಮಾಲೀಕ ಸ್ಥಳದಲ್ಲಿ ಇಲ್ಲದಿದ್ದರೆ ಮನೆಗೆ ನೋಟಿಸ್ ರವಾನೆಗೆ ಸೂಚನೆ ನೀಡಿದರು. ಎಎಸ್ಪಿ ಶಂಕರ್ ಮಾರಿಹಾಳ್, ಗಾಂಧಿ ಚೌಕ ಸಿಪಿಐ ತಳಕೇರಿ, ಟ್ರಾಫಿಕ್ ಸಿಪಿಯ ಸಂಗಮೇಶ ಪಾಟೀಲ್ ಇದ್ದರು.