ರಸ್ತೆಗಳನ್ನು ಮಾಡುವುದು ಸರ್ಕಾರ ಮತ್ತು ನಮ್ಮೆಲ್ಲರ ಜವಾಬ್ದಾರಿ. ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಗುಡ್ಡಗಾಡು ಪ್ರದೇಶವಾಗಿದ್ದು ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ. ರಸ್ತೆ ಎಷ್ಟು ಮಾಡಿದರೂ ಹಾಳಾಗುತ್ತಾ ಇರುತ್ತದೆ. ರಸ್ತೆ ಕೆಲಸ ನಿರಂತರ ನಡೆಯುತ್ತಲೇ ಇರಬೇ ಎಂದು ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹೇಳಿದರು.

ಪೊನ್ನಂಪೇಟೆ: ರಸ್ತೆಗಳನ್ನು ಮಾಡುವುದು ಸರ್ಕಾರ ಮತ್ತು ನಮ್ಮೆಲ್ಲರ ಜವಾಬ್ದಾರಿ. ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಗುಡ್ಡಗಾಡು ಪ್ರದೇಶವಾಗಿದ್ದು ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ. ರಸ್ತೆ ಎಷ್ಟು ಮಾಡಿದರೂ ಹಾಳಾಗುತ್ತಾ ಇರುತ್ತದೆ. ರಸ್ತೆ ಕೆಲಸ ನಿರಂತರ ನಡೆಯುತ್ತಲೇ ಇರಬೇ ಎಂದು ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹೇಳಿದರು.

ಅವರು ಪೊನ್ನಂಪೇಟೆ ತಾಲೂಕಿನ ಕಾನೂರಿನಲ್ಲಿ ಬೆಕ್ಕೆ ಸುಡ್ಲೂರು ಕಾನೂರು ಬ್ರಹ್ಮಗಿರಿ ನಿಟ್ಟೂರು ಸಂಪರ್ಕಿಸುವ ರು.5.30 ಕೋಟಿ ಅನುದಾನದ ರಸ್ತೆಯನ್ನು ಉದ್ಘಾಟನೆ ಮಾಡಿ ಮಾತನಾಡಿದರು.

ಅನೇಕ ಟೀಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಎದುರಿಸುತ್ತಿದ್ದೇವೆ. ನಾವು ರಸ್ತೆಗಳನ್ನು ಉದ್ದೇಶಪೂರ್ವಕವಾಗಿ ಗುಂಡಿಗಳನ್ನು ಮಾಡುತ್ತಿಲ್ಲ. ಗುಂಡಿಯಾಗಿರುವ ರಸ್ತೆಯನ್ನು ಸರಿ ಮಾಡುವುದು ಬೇಡ ಎನ್ನುತ್ತಿಲ್ಲ. ರಾಜಕೀಯ ಎಂಬುದು 2023ರ ಚುನಾವಣೆ ನಂತರ ಮುಗಿದು ಹೋಗಿದೆ. 20023ರ ನಂತರ ನಿಮ್ಮೆಲ್ಲರ ಆಶೀರ್ವಾದದಿಂದ ನನಗೆ ಅವಕಾಶ ನೀಡಿದ್ದು ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾ ಬರಲಾಗುತ್ತಿದೆ ಎಂದು ಹೇಳಿದರು. ಪಿಡಬ್ಲ್ಯೂಡಿ ಇಲಾಖೆಯ ಮುಖ್ಯ ಇಂಜಿನಿಯರ್ ಗಳು ಸಹಾಯಕ ಇಂಜಿನಿಯರ್ ಗಳು ಉಪಸ್ಥಿತಿಯಲ್ಲಿ ಪರಿಷ್ಕರಣೆ ಸಭೆ ನಡೆಸಲಾಯಿತು, ಕ್ಷೇತ್ರಕ್ಕೆ ಮೂರು ವರ್ಷಗಳಲ್ಲಿ ರು. 228 ಕೋಟಿ ಅನುದಾನವನ್ನು ತಂದು ಮೇಜರ್ ಡಿಸ್ಟ್ರಿಕ್ಟ್ ರೋಡ್, ಸ್ಟೇಟ್ ಹೈವೇ ಕಾಮಗಾರಿಗಳನ್ನು ವಿರಾಜಪೇಟೆ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿದೆ. ಇದಲ್ಲದೆ ಮಳೆಯ ನಂತರ 75 -80 ಕೋಟಿ ಅನುದಾನದ ಕಾಮಗಾರಿ ಟೆಂಡರ್ ಆಗಿರುವಂತಹದ್ದು, ಈ ಕೆಲಸ ಆದರೆ ವಿರಾಜಪೇಟೆ ಮೂರ್ನಾಡು ಮಡಿಕೇರಿ, ನಾಪೋಕ್ಲು ಭಾಗದ ಕೆಲವು ರಸ್ತೆಗಳು, ಹುದಿಕೇರಿ ಭಾಗದ ರಸ್ತೆಗಳು ಸಹ ಪೂರ್ಣಗೊಳ್ಳುತ್ತದೆ. ಮುಂದಿನ ಅನುದಾನದಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿ ಮಾಡಿಯೇ ಮಾಡುತ್ತೇವೆ ಎಂದರು.ಹುದಿಕೇರಿ ಸಮೀಪ ಪೋಕಳೆತೋಡು ಹೊಸ ಸೇತುವೆ ಕಾಮಗಾರಿಯಾಗುತ್ತಿದೆ. ನಾವು ಅಧಿಕಾರಕ್ಕೆ ಬಂದು ಸೇತುವೆ ಕಟ್ಟುತ್ತಿದ್ದೇವೆ. ಬೈಪಾಸ್ ತಾತ್ಕಾಲಿಕ ಮಣ್ಣಿನ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಅದನ್ನು ಕಾಂಕ್ರೀಟ್ ಮಾಡಲು ಆಗುವುದಿಲ್ಲ. ಸೇತುವೆ ಪೂರ್ಣವಾಗಿದೆ ಆದರೆ ಬೈಪಾಸ್ ಮಾಡಿದ ಮಣ್ಣಿನ ರಸ್ತೆಯ ಫೋಟೋ ತೆಗೆದು ಬಿಜೆಪಿ ಪಕ್ಷದವರು ಟೀಕೆ ಮಾಡುತ್ತಾರೆ. ಕಳೆದ ಮೂರು ವರ್ಷಗಳಲ್ಲಿ 30ಕ್ಕೂ ಹೆಚ್ಚು ಸೇತುವೆಗಳನ್ನು ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನಮ್ಮ ವಿರಾಜಪೇಟೆ ಕ್ಷೇತ್ರದ ರಸ್ತೆಯ ಅವ್ಯವಸ್ಥೆ ಎಂದು ಹೊರ ದೇಶದ ರಸ್ತೆಯನ್ನು ಬಳಸಿಕೊಳ್ಳಲಾಗಿದೆ ಎಂದು ಅವರು ಕಿಡಿ ಕಾರಿದರು. ಚೆಪ್ಪುಡಿರ ಸೋಮಯ್ಯ ಅವರು ಮಾತನಾಡಿ ಈ ವ್ಯಾಪ್ತಿಯಲ್ಲಿ 7 ಕಿ.ಮೀ ರಸ್ತೆ, ಗುಂಡಿ ಬಿದ್ದು ಕಳೆದ ಹಲವಾರು ವರ್ಷಗಳಿಂದ ಜನರಿಗೆ ತೀವ್ರ ಸಂಕಷ್ಟವಾಗಿತ್ತು ಇದನ್ನು ಉತ್ತಮವಾಗಿ ನಿರ್ಮಿಸಿಕೊಟ್ಟ ಶಾಸಕರ ಬಗ್ಗೆ ಪ್ರಸಂಸೆ ವ್ಯಕ್ತಪಡಿಸಿ ಗ್ರಾಮಸ್ಥರ ಪರವಾಗಿ ಶಾಸಕರನ್ನು ಸನ್ಮಾನಿಸಿದರು.

ಶಾಸಕರ ಪತ್ನಿ ಕಾಂಚನ್ ಪೊನ್ನಣ್ಣ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಹಿರಿಯರಾದ ಮೂಕಳೇರ ಕುಶಾಲಪ್ಪ, ಚಿರಿಯಪಂಡ ನಾಣಯ್ಯ, ರುಕ್ಮಿಣಿ ನಾಣಯ್ಯ, ಚೆಪ್ಪುಡೀರ ಸೋಮಯ್ಯ,ಚೆಪ್ಪುಡೀರ ಟ್ಯಾಗೂ ಮೊಣ್ಣಪ್ಪ,ವಲಯ ಅಧ್ಯಕ್ಷ ರಮೇಶ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಮಾಜಿ ಜಿ. ಪಂ. ಸದಸ್ಯ ಬಾನಂಡ ಪ್ರತ್ಯು,ಎರ್ಮು ಹಾಜಿ,ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷ ಪದವಿ ಧನ್ಯ, ಪಂಚಾಯಿತಿ ಸದಸ್ಯ ಬೋಪಣ್ಣ, ಪಕ್ಷದ ಮುಖಂಡರು ಕೇಚಮಾಡ ಸಿದ್ದು ನಾಚಪ್ಪ, ಮಾಚಮಾಡ ಮನು, ತಾಣಚ್ಚಿರ ನಿಖಿಲ್, ಸೋಮಯ್ಯ ಹಾಗೂ ಪ್ರಮುಖರು ಇದ್ದರು.