ಸಾರಾಂಶ
ನಿಯಮಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಸರಾಗವಾಗಿ ಸಾಗಲು ಅನುಕೂಲ ಮಾಡಿಕೊಡಬೇಕು
ಮುಳಗುಂದ: ನಾಗಾವಿ ಕ್ರಾಸ್, ಹರ್ತಿಯಿಂದ ಮುಳಗುಂದ ಪಟ್ಟಣದವರೆಗಿನ ರಸ್ತೆ ಕಾಮಗಾರಿ ಉತ್ತಮ ಗುಣಮಟ್ಟದಿಂದ ಕೂಡಿರಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಸಮೀಪದ ಹರ್ತಿ ಗ್ರಾಮದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಪಂ, ಲೋಕೋಪಯೋಗಿ ಇಲಾಖೆ ಸಹಯೋಗದಲ್ಲಿ ಲೆಕ್ಕ ಶೀರ್ಷಿಕೆ ಎಸ್.ಎಚ್.ಡಿ.ಪಿ 2023-24ನೇ ಸಾಲಿನ ಅಂದಾಜು ₹25 ಕೋಟಿ ಅನುದಾನದಲ್ಲಿ ರಸ್ತೆ ಸುಧಾರಣೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ಉತ್ತಮ ರಸ್ತೆಯಿಂದ ಗ್ರಾಮಗಳು ಅಭಿವೃದ್ಧಿ ಹೊಂದುತ್ತವೆ, ವ್ಯಾಪಾರ ವಹಿವಾಟು ಹೆಚ್ಚಾಗುತ್ತದೆ, ಹೀಗಾಗಿ ನಾಗಾವಿ ಕ್ರಾಸ್ ನಿಂದ ಮುಳಗುಂದ ಪಟ್ಟಣದವರೆಗೆ ನಿರ್ಮಾಣವಾಗುವ ರಸ್ತೆಯೂ ಉತ್ತಮ ಗುಣಮಟ್ಟದಿಂದ ಇರಬೇಕು ಮತ್ತು ನಿಯಮಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಸರಾಗವಾಗಿ ಸಾಗಲು ಅನುಕೂಲ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಚಿ, ಅಶೋಕ ಮಂದಾಲಿ, ಎಸ್.ಎಸ್. ಪಾಟೀಲ, ಪ್ರಭು ಹುಡೇದ, ಬಸವರಾಜ ಬಂದಕ್ಕನವರ, ಬಿ.ಟಿ. ಸೋಮರಡ್ಡಿ, ಮಹೇಶ ಪಟ್ಟಣಶೆಟ್ಟಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ರಮೇಶ ಪಾಟೀಲ, ಕೆ.ವಿ. ಹಂಚಿನಾಳ ಸೇರಿದಂತೆ ಗ್ರಾಪಂ ಸದಸ್ಯರು ಗಣ್ಯರು ಇದ್ದರು.