ಸಾರಾಂಶ
ಸತ್ತಿರಸ್ತೆ ಬಳಿಯಿಂದ ಕರಿನಂಜನಪುರ ರಸ್ತೆ ಮತ್ತು ನ್ಯಾಯಾಲಯದವರೆಗಿನ ರಸ್ತೆ ಕಾಮಗಾರಿ ಅತ್ಯಂತ ಕಳಪೆಯಾಗಿದ್ದು ಇದರಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಕಾಡಾ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ನಿಜಗುಣರಾಜು ಅರೋಪಿಸಿದರು. ಚಾಮರಾನಗರದಲ್ಲಿನ ರಸ್ತೆ ಕಾಮಗಾರಿ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಡಾ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ನಿಜಗುಣರಾಜು ಲೋಕಾಯುಕ್ತಕ್ಕೆ ದೂರುಕನ್ನಡಪ್ರಭ ವಾರ್ತೆ ಚಾಮರಾಜನಗರ
ಸತ್ತಿರಸ್ತೆ ಬಳಿಯಿಂದ ಕರಿನಂಜನಪುರ ರಸ್ತೆ ಮತ್ತು ನ್ಯಾಯಾಲಯದವರೆಗಿನ ರಸ್ತೆ ಕಾಮಗಾರಿ ಅತ್ಯಂತ ಕಳಪೆಯಾಗಿದ್ದು ಇದರಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಕಾಡಾ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ನಿಜಗುಣರಾಜು ಅರೋಪಿಸಿದರು.ನಗರದಲ್ಲಿ ಈ ರಸ್ತೆ ಕಾಮಗಾರಿಯ ಬಗ್ಗೆ ಸುದ್ದಿಗಾರರಿಗೆ ಸ್ಥಳದಲ್ಲೇ ಕಳಪೆ ಕಾಮಗಾರಿಯ ಬಗ್ಗೆ ತೋರಿಸಿ ಅವರು ಮಾತನಾಡಿ ಇಲ್ಲಿ ನಡೆದಿರುವ ಅವ್ಯವಹಾರಕ್ಕೆ ನಗರಸಭೆಯ ಪೌರಾಯುಕ್ತರೇ ಕಾರಣ ಎಂದರು.2017ರಲ್ಲೇ ನಗರದ ನಗರಸಭೆಗೆ ಬಂದ ಮುಖ್ಯಮಂತ್ರಿಗಳ ವಿಶೇಷ 50 ಕೋಟಿ ರು. ಅನುದಾನದಲ್ಲಿ ಈ ರಸ್ತೆಗೆ 8 ಕೋಟಿ ಮೀಸಲಿಟ್ಟು ಕಾಮಗಾರಿಗೆ ಜು. 2ರಂದು ಗುದ್ದಲಿ ಪೂಜೆ ನೆರವೇರಿಸಲಾಯಿತು. ಅಂದುಕೊಂಡಂತೆ ಆಗಿದ್ದರೆ ಇಲ್ಲಿವರೆಗೆ ಒಂದು ಸುಂದರರಸ್ತೆ ನಿರ್ಮಾಣವಾಗಬೇಕಿತ್ತು ಎಂದರು.ಇಲ್ಲಿವರೆಗೆ 8 ಕೋಟಿ ಮುಗಿದು ಪುನ: 3 ಕೋಟಿ 80 ಲಕ್ಷ ಹಣ ಬಿಡುಗಡೆಯಾಗಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಮಾಡಿರುವ ಕಾಮಗಾರಿಯು ಅತ್ಯಂತ ಕಳಪೆಯಾಗಿ ಕಬ್ಬಿಣಗಳೇ ಕಿತ್ತು ಮೇಲಕ್ಕೆ ಬಂದಿವೆ, ಇಲ್ಲು ಸುಮಾರು 5 ರಿಂದ 6 ಕೋಟಿ ಅವ್ಯವಹಾರ ನಡೆದಿದೆ ಎಂದರು.ರಸ್ತೆ ಕಾಮಗಾರಿ ಪ್ರಾರಂಭಿಸುವ ಮೊದಲು ರಸ್ತೆಗೆ ಬೇಕಾಗುವ ಜಾಗವನ್ನು ಹೊಂದಿಸಿಕೊಳ್ಳಬೇಕು, ಮತ್ತು ಜಾಗ ಕೊಡುವವರಿಗೆ ಪರಿಹಾರವನ್ನು ಮೀಸಲಿಡಬೇಕು, ಆದರ ಇಲ್ಲಿ ಯಾವ ನಿಯಮವನ್ನು ಪಾಲಿಸಿಲ್ಲ, ಜೊತೆಗೆ ಕ್ರಿಯಾಯೋಜನೆಯಂತೆ 60 ಅಡಿ ರಸ್ತೆಯ ಎರಡು ರಸ್ತೆಯ ಎರಡು ಬದಿಯಲ್ಲಿ ಚರಂಡಿ ನಿರ್ಮಿಸಿ, ನೀರು ಮತ್ತು ಮಳೆಯ ನೀರು ಸಲೀಸಾಗಿ ಹೋಗುವಂತೆ ಮಾಡಬೇಕು, ವಿದ್ಯುತ್ ದ್ವೀಪಗಳನ್ನು ಅಳವಡಿಸಬೇಕು, ಇಲ್ಲಿ 700 ಮೀಟರ್ ಮಾತ್ರ ಮಾಡಿ ಇನ್ನು 300 ಮೀಟರ್ ರಸ್ತೆಯನ್ನುಅತ್ಯಂತ ಕಳಪೆಯಾಗಿ ಮಾಡಲಾಗಿದೆ. ಚರಂಡಿ ಮಾಡದೇ ಚರಂಡಿ ನೀರೆಲ್ಲ ರಸ್ತೆಯ ಮೇಲೆ ಹರಿಯತ್ತದೆ ಎಂದರು.ಇದ್ದ ಚರಂಡಿಯೆಲ್ಲಾ ಮುಚ್ಚಲಾಗಿದೆ. ಇತ್ತೀಚೆಗೆ ನ್ಯಾಯಾಲಯವು ಪರಿಹಾರ ನೀಡಿ ಕಾಮಗಾರಿ ಪ್ರಾರಂಭಿಸಿ ಎಂದು ಆದೇಶ ನೀಡಿದ್ದರೂ ಪಾಲಿಸದೇ ತರಾತುರಿ ಅರ್ಧಂಬದ್ದ ಕಾಮಗಾರಿ ಮಾಡಿ ಸಾರ್ವಜನಿಕರಿಗೆ ಓಡಾಡಲು ತುಂಬಾ ತೊಂದರೆಯಾಗಿದೆ. ಇದಕ್ಕೆಲ್ಲಾ ನಗರಸಭೆಯೇ ಕಾರಣ ಎಂದರು.ಇಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಮತ್ತು ನಗರಸಭೆಯಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ದಾಖಲೆ ಸಮೇತ ಲೋಕಾಯುಕ್ತಕ್ಕೆ ದೂರು ಸಲ್ಲಿಸುವುದಾಗಿ ತಿಳಿಸಿದರು.ಇದರ ಮೂಲ ಗುತ್ತಿಗೆದಾರ ವಿರೇಂದ್ರ ಪಾಟೀಲ್, ಸಬ್ ಗುತ್ತಿಗೆದಾರ ನಾಗಭೂಷಣ್ ಇವರು ಕಾಮಗಾರಿ ನಡೆಯುವ ಸ್ಥಳಕ್ಕೆ ಬಂದೇ ಇಲ್ಲ, ಇಲ್ಲಿ ನಗರಸಭೆ ಇಂಜಿನಿಯರ್ ಪಾತ್ರ ಬಹಳ ಮಹತ್ವವಾದದ್ದು, ಆದರೆ ಗುತ್ತಿಗೆದಾರರು ತಮಗೆ ಇಷ್ಟ ಬಂದಂತೆ, ತಮಗೆ ಬೇಕಾದವರನ್ನು ಓಲೈಸುವ ಕೆಲದ ಮಾಡಿದ್ದಾರೆ. ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಮಾಡಿದ್ದಾರೆ ಎಂದು ಆರೋಪಿಸಿದರು.ಈ ರಸ್ತೆಯ ಕಾಮಗಾರಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ತನಿಖೆ ಆಗಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಚಾಮುಲ್ ಅಧ್ಯಕ್ಷ ನಾಗೇಂದ್ರು, ಮುಖಂಡರಾದ ಕಿಲಗೆರೆ ಬಸವರಾಜು, ಮನೋಜ್ ಪಟೇಲ್, ಮುತ್ತಿಗೆ ಮೂರ್ತಿ ಇತರರು ಇದ್ದರು.