ಸಾರಾಂಶ
ಜೇವರ್ಗಿಯ ಆಂದೋಲಾ ಗ್ರಾಮದ ಕರುಣೇಶ್ವರ ಮಠದ ಪೀಠಾಧಿಪತಿಗಳು ಹಾಗೂ ಶ್ರೀ ರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಆಂದೋಲಾ ಸಿದ್ದಲಿಂಗ ಶ್ರೀಗಳು ಜಾತ್ರೆ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಬೆಳಗಾವಿ ಮತ್ತು ಸೊಲ್ಲಾಪುರಕ್ಕೆ ತಮಗೆ ಹೋಗೋದಿದೆ, ಕಲಬುರಗಿ ಜಿಲ್ಲೆಯಿಂದ ಹೊರಹೋಗಲು ಅನಮತಿ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕಲಬುರಗಿ ಜೆಎಮ್ ಎಫ್ ಸಿ ಪ್ರಿನ್ಸಿಪಲ್ ನ್ಯಾಯಾಲಯ ತಿರಸ್ಕರಿದೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿ ಜಿಲ್ಲೆ ಬಿಟ್ಟು ತೆರಳದಂತೆ ನ್ಯಾಯಾಲಯದಿಂದ ನಿರ್ಬಂಧಕ್ಕೊಳಗಾಗಿರುವ ಜೇವರ್ಗಿಯ ಆಂದೋಲಾ ಗ್ರಾಮದ ಕರುಣೇಶ್ವರ ಮಠದ ಪೀಠಾಧಿಪತಿಗಳು ಹಾಗೂ ಶ್ರೀ ರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಆಂದೋಲಾ ಸಿದ್ದಲಿಂಗ ಶ್ರೀಗಳು ಜಾತ್ರೆ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಬೆಳಗಾವಿ ಮತ್ತು ಸೊಲ್ಲಾಪುರಕ್ಕೆ ತಮಗೆ ಹೋಗೋದಿದೆ, ಕಲಬುರಗಿ ಜಿಲ್ಲೆಯಿಂದ ಹೊರಹೋಗಲು ಅನಮತಿ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕಲಬುರಗಿ ಜೆಎಮ್ ಎಫ್ ಸಿ ಪ್ರಿನ್ಸಿಪಲ್ ನ್ಯಾಯಾಲಯ ತಿರಸ್ಕರಿದೆ.ಕಳೆದ ಏ. 3 ರಂದು ಕಲಬುರಗಿ ನಗರದ ಪಟೇಲ ವೃತ್ತದಲ್ಲಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ನಡೆದ ಹೋರಾಟದಲ್ಲಿ ಅಕ್ರಮ ಗುಂಪು ಕಟ್ಟಿ ಕೊಂಡು ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂದು ಆಂದೋಲದ ಕರುಣೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ, ವಿಜಯಪುರ ಸಾಸಕ ಬಸನಗೌಡ ಯತ್ನಾಳ ಹಾಗೂ ಆಗ ಸಂಸದರಾಗಿದ್ದ ಉಮೇಶ್ ಜಾಧವ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಇದಾದ ನಂತರ ನ್ಯಾಯಾಲಯ ಸ್ವಾಮೀಜಿಗೆ ನ್ಯಾಯಪೀಠದ ಪರವಾನಿಗೆ ಯಿಲ್ಲದೆ ಜಿಲ್ಲೆ ತೊರೆಯದಂತೆ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿತ್ತು .ಇದೇ ಜೂನ್ 21ರಿಂದ ಮೂರು ದಿನಗಳ ಕಾಲ ಬೆಳಗಾವಿ ಮತ್ತು ಸೋಲಾಪುರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತೆರಳಲು ಪರವಾನಿಗೆ ನೀಡಬೇಕು ಮತ್ತು ನಿರ್ಬಂಧ ಸಡಿಲಿಕೆಗೆ ಅನುಮತಿ ಕೋರಿ ಆಂದೋಲಾ ಶ್ರೀಗಳು ಅರ್ಜಿ ಸಲ್ಲಿಸಿದ್ದರು.
ಅದರೆ ನ್ಯಾಯಾಲಯ ಚಾರ್ಶಿಟ್ ಕೋರ್ಟಿಗೆ ಸಲ್ಲಿಸದ ಕಾರಣ ಮತ್ತು ಸಭೆಯಲ್ಲಿ ಭಾಗವಹಿಸಿ ಮತ್ತೆ ಪ್ರಚೋದನಾಕಾರಿ ಭಾಷಣ ಮಾಡುವ ಸಂಭವ ಇದ್ದ ಕಾರಣ ಆಂದೋಲಾ ಸ್ವಾಮೀಜಿ ಪರ ವಕೀಲರು ಸಲ್ಲಿಸಿದ ಮನವಿ ಅರ್ಜಿಯನ್ನು ತಿರಸ್ಕರಿಸಿದೆ.ತಮ್ಮ ಅರ್ಜಿ ವಿಚಾರಣೆ ನಡೆಸಿ ಜಿಲ್ಲೆ ಬಿಡಲು ತಮಗೆ ಅನುಮತಿ ನೀಡದ ಜಿಲ್ಲಾ ನ್ಲಾಯಾಲಯದ ಈ ಆದೇಶ ಪ್ರಶ್ನಿಸಿ ಆಂದೋಲಾ ಶ್ರೀಗಳು ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದಾರೆ.