ರಸ್ತೆ, ಸೇತುವೆ ಗ್ರಾಮೀಣ ಭಾಗದ ಜೀವನಾಡಿ: ಶಾಸಕ ಶೈಲೇಂದ್ರ ಬೆಲ್ದಾಳೆ

| Published : Mar 17 2024, 01:46 AM IST

ರಸ್ತೆ, ಸೇತುವೆ ಗ್ರಾಮೀಣ ಭಾಗದ ಜೀವನಾಡಿ: ಶಾಸಕ ಶೈಲೇಂದ್ರ ಬೆಲ್ದಾಳೆ
Share this Article
  • FB
  • TW
  • Linkdin
  • Email

ಸಾರಾಂಶ

ಸಿಂಧೋಲ ಗ್ರಾಮದಲ್ಲಿನ ರಸ್ತೆಯ ಹಲವು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 7 ಕೋಟಿ ವೆಚ್ಚದ ಸೇತುವೆ ಕಾಮಗಾರಿ ಹಾಗೂ ಸಿಂಧೋಲ ಗ್ರಾಮದ ರೈತರ ಜಮೀನಿಗೆ ತೆರಳುವ ಬ್ಯಾರೇಜ್ ಕೆಳ ದಂಡೆಯಲ್ಲಿ 87 ಲಕ್ಷ ರು. ವೆಚ್ಚದ ಸಿಡಿ ನಿರ್ಮಾಣ ಕಾಮಗಾರಿಗೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೀದರ್‌

ರಸ್ತೆ ಮತ್ತು ಸೇತುವೆಗಳ ನಿರ್ಮಾಣ ಗ್ರಾಮೀಣ ಭಾಗದ ಜೀವನಾಡಿನಾಡಿಯಾಗಿದ್ದು, ಸಂಚಾರಕ್ಕೆ ರಸ್ತೆಗಳ ಅಭಿವೃದ್ಧಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.

ಬೀದರ್ ದಕ್ಷಿಣ ಕ್ಷೇತ್ರದ ಸಿಂಧೋಲ ಗ್ರಾಮದಲ್ಲಿನ ರಸ್ತೆಯ ಹಲವು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 7 ಕೋಟಿ ವೆಚ್ಚದ ಸೇತುವೆ ಕಾಮಗಾರಿ ಹಾಗೂ ಸಿಂಧೋಲ ಗ್ರಾಮದ ರೈತರ ಜಮೀನಿಗೆ ತೆರಳುವ ಬ್ಯಾರೇಜ್ ಕೆಳ ದಂಡೆಯಲ್ಲಿ 87 ಲಕ್ಷ ರು. ವೆಚ್ಚದ ಸಿಡಿ ನಿರ್ಮಾಣ ಕಾಮಗಾರಿಗೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಸೇತುವೆ ನಿರ್ಮಾಣ ಕಾಮಗಾರಿ ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆಯಾಗಿತ್ತು. ಹಾಗಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಸುಮಾರು 7 ಕೋಟಿ ವೆಚ್ಚದಲ್ಲಿ ಈ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. 40ಕ್ಕೂ ಹೆಚ್ಚು ಹಳ್ಳಿಯ ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ. ಹೀಗಾಗಿ ಬ್ಯಾರೇಜ್ ಕೆಳ ದಂಡೆಯಲ್ಲಿ 87 ಲಕ್ಷ ರು. ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಗೆ ಸಹ ಚಾಲನೆ ನೀಡಿದ್ದೇನೆ ಎಂದರು.

ಚುನಾವಣೆ ಸಂದರ್ಭದಲ್ಲಿ ಮಾತು ನೀಡಿದಂತೆ ಒಂದೊಂದಾಗಿ ಕಾಮಗಾರಿ ಪ್ರಾರಂಭಿಸುತ್ತಿದ್ದೇನೆ. ಗ್ರಾಮೀಣ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚು ಶ್ರಮಿಸುತ್ತಿದ್ದೇನೆ. ಗುಣಮಟ್ಟದ ಸೇತುವೆ ನಿರ್ಮಾಣವನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಸ್ಥಳದಲ್ಲಿದ್ದ ಎಂಜಿನಿಯರ್‌ಗಳಿಗೆ ಗುತ್ತಿಗೆದಾರರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಸುಭದ್ರಾ ಬಾಯಿ, ಉಪಾಧ್ಯಕ್ಷ ಸುಧಾಕರ ರಾಜಗೀರಾ, ಮುಖಂಡರಾದ ಸುರೇಶ ಮಾಶೆಟ್ಟಿ, ಮಾಣಿಕಪ್ಪ ಖಾಶೆಂಪುರ, ಚಂದ್ರಯ್ಯ ಸ್ವಾಮಿ, ಓಂಕಾರ ಮಜಗೆ, ಶಂಕರಪ್ಪ ಬಾಪುರ, ಸಂಗಯ್ಯಾ ಸ್ವಾಮಿ, ಭಗವಂತಪ್ಪ, ಮಸ್ತಾನ, ಶಿವಕುಮಾರ ಪಾಟೀಲ, ಧುಳಪ್ಪ ಮಾಳಗಿ ಅಧಿಕಾರಿಗಳು ಗುತ್ತಿಗೆದಾರರು ಮತ್ತಿತರರು ಉಪಸ್ಥಿತರಿದ್ದರು.ಚಿತ್ರ 16ಬಿಡಿಆರ್50