ಭಾರಿ ಮಳೆಗೆ ಮುಳುಗಿದ ರಸ್ತೆ-ತೋಟಗಳು

| Published : Oct 25 2025, 01:00 AM IST

ಸಾರಾಂಶ

ತರೀಕೆರೆ: ಲಿಂಗದಹಳ್ಳಿ ಹೋಬಳಿಯಾದ್ಯಂತ ಕಳೆದ ಕೆಲ ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ಲಿಂಗದಹಳ್ಳಿಯಿಂದ ಕೆಮ್ಮಣ್ಣುಗುಂಡಿ ಗಿರಿಧಾಮಕ್ಕೆ ಸಂಪರ್ಕ ಕಲ್ಪಿಸುವ ಲೋಕೋಪಯೋಗಿ ಇಲಾಖಾ ರಸ್ತೆ ಮೇಲೆ ಕೆಸರು ನೀರು ಹರಿಯುತ್ತಿದೆ.

ತರೀಕೆರೆ: ಲಿಂಗದಹಳ್ಳಿ ಹೋಬಳಿಯಾದ್ಯಂತ ಕಳೆದ ಕೆಲ ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ಲಿಂಗದಹಳ್ಳಿಯಿಂದ ಕೆಮ್ಮಣ್ಣುಗುಂಡಿ ಗಿರಿಧಾಮಕ್ಕೆ ಸಂಪರ್ಕ ಕಲ್ಪಿಸುವ ಲೋಕೋಪಯೋಗಿ ಇಲಾಖಾ ರಸ್ತೆ ಮೇಲೆ ಕೆಸರು ನೀರು ಹರಿಯುತ್ತಿದೆ.

ಕೆಮ್ಮಣ್ಣುಗುಂಡಿ, ಕಲ್ಲತ್ತಿಗಿರಿ, ಹೆಬ್ಬೆಪಾಲ್ಸ್‌ಗಳಿಗೆ ತೆರಳುವ ಪ್ರವಾಸಿಗರು ಮತ್ತು ತಣಿಗೆಬೈಲು ನಂದಿ ಬಟ್ಟಲು ಧೂಪದಖಾನ್ ಗ್ರಾಮಗಳು ಸೇರಿದಂತೆ ಅನೇಕ ಕಾಫಿ ತೋಟಗಳಿಗೆ ಸಂಚರಿಸುವ ಪ್ರಯಾಣಿಕರಿಗೂ ತೊಂದರೆಯಾಗುತ್ತಿದೆ. ಎಡಬಿಡದೆ ಸುರಿದ ಬಾರೀ ಮಳೆಗೆ ಅಡಕೆ ತೆಂಗಿನ ತೋಟಗಳು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದ ಜಮೀನುಗಳಲ್ಲಿ ನೀರು ತುಂಬಿ 3-4 ದಿನಗಳವರೆಗೆ ಮಳೆಯ ನೀರು ನಿಂತ ಪರಿಣಾಮ ಮುಸುಕಿನ ಜೋಳ, ರಾಗಿ ಸೇರಿದಂತೆ ಬೆಳೆಗಳು ನೀರು ಪಾಲಾಗಿದೆ. ಅಡಕೆ ತೋಟಗಳಿಗೆ ಕೊಳೆ ರೋಗ, ಆವರಿಸಿಕೊಂಡು ಗೊನೆಗಳು ನೆಲಕ್ಕೆ ಉದುರಿಹೋಗುತ್ತಿರುವುದರಿಂದ ಈ ಭಾಗದ ತೋಟದ ಬೆಳೆಗಾರರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

ಸಂಬಂಧಟ್ಟ ಇಲಾಖಾ ಅಧಿಕಾರಿಗಳು ಕೂಡಲೇ ಜಮೀನುಗಳಿಗೆ ತೆರಳಿ ಅಡಕೆ ಸೇರಿದಂತೆ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ತಿಗಡ ಗ್ರಾಮ ಪಂಚಾಯಿತಿ ಸದಸ್ಯ ತಣಿಗೆಬೈಲು ರಮೇಶ್ ಗೋವಿಂದೇಗೌಡ ಮನವಿ ಮಾಡಿದ್ದಾರೆ.-ಬಾಕ್ಸ್--

ಶೃಂಗೇರಿ ನಿಲ್ಲದ ಮಳೆ: ಕೃಷಿಕರಲ್ಲಿ ಆತಂಕಶೃಂಗೇರಿ: ತಾಲೂಕಿನಾದ್ಯಂತ ಕಳೆದ ಕೆಲ ದಿನಗಳಿಂದ ಹಿಂಗಾರು ಮಳೆ ಸುರಿಯುತ್ತಿದ್ದು ಶುಕ್ರವಾರವೂ ತಾಲೂಕಿನೆಲ್ಲೆಡೆ ಎಡೆಬಿಡದೆ ಮಳೆಯಾಗಿದೆ.ಗುರುವಾರ ಶೃಂಗೇರಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ವಿವಿಧೆಡೆ ಉತ್ತಮ ಮಳೆಯಾದರೂ ನೆಮ್ಮಾರು, ಕೆರೆಕಟ್ಟೆ ಸುತ್ತಮುತ್ತಲ ಪ್ರದೇಶಗಳಲ್ಲೂ ಗಾಳಿ ಸಹಿತ ರಾತ್ರಿಯಿಡೀ ಮಳೆ ಬಂದಿದೆ.ಶಕ್ರವಾರ ಬೆಳಿಗ್ಗೆಯಿಂದಲೂ ಮುಂದುವರಿದ ಮಳೆ ಮಧ್ಯಾಹ್ನದ ವರೆಗೆ ಸುರಿಯಿತು. ಸತತ ಮಳೆ ಸುರಿಯುತ್ತಿರುವುದರಿಂದ ತುಂಗಾ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. ದೀಪಾವಳಿಯ ಮೂರ್ನಾಲ್ಕು ದಿನಗಳಲ್ಲಿ ಬಿಡುವು ನೀಡದ ಮಳೆ, ಈಗ ಅಡಕೆ ಕೊಯಿಲಿಗೂ ಅಡ್ಡಿಯಾಗುತ್ತಿದೆ. ಅಡಕೆ, ಕಾಳು ಮೆಣಸು, ಕಾಫಿ ಬೆಳೆಗಳಿಗೆ ಕೊಳೆ ರೋಗ ತಗುಲಿದ್ದು ರೈತರಲ್ಲಿ ಆತಂಕ ಹೆಚ್ಚಿಸಿದೆ. ಅಳಿದುಳಿದ ಫಸಲುಗಳು ರೈತರ ಕೈಸೇರಲು ಬಿಡದೇ ಅಡ್ಡಿಯಾಗಿದೆ. ಮಳೆಯಿಂದ ತೋಟಗಳಲ್ಲಿ ವ್ಯಾಪಕ ಹಾನಿಯಾಗುತ್ತಿದೆ.24ಕೆಟಿಆರ್.ಕೆ.4ಃ

ಲಿಂಗದಹಳ್ಳಿಯಿಂದ ಕೆಮ್ಮಣ್ಣುಗುಂಡಿಗೆ ಸಂಪರ್ಕ ಕಲ್ಪಿಸುವ ಲೋಕೋಪಯೋಗಿ ಇಲಾಖಾ ರಸ್ತೆಯ ಮೇಲೆ ಮಳೆ ನೀರು ನಿಂತಿರುವುದು. 24ಕೆಟಿಆರ್.ಕೆ.5ಃ

ಬಾರಿ ಮಳೆಯ ನೀರಿನಿಂದ ಅಡಿಕೆ ತೋಟದ ತುಂಬೆಲ್ಲಾ ಮಳೆಯ ನೀರು ತುಂಬಿ ನಿಂತಿರುವುದು.