ರಾಮನಗರ: ಕಾರಿಗೆ ಡೀಸೆಲ್ ಹಾಕಿಸಿಕೊಂಡು ಅಪರಿಚಿತನೊಬ್ಬ ಬಂಕಿನ ಅಟೆಂಡರ್‌ನಿಂದ 13 ಸಾವಿರ ಕಸಿದು ಪರಾರಿಯಾಗಿರುವ ಘಟನೆ ಬಿಡದಿ ಬಳಿಯ ಕಾಡುಮನೆ ಕ್ರಾಸ್‌ನಲ್ಲಿರುವ ಕೋಕೋ ಬಿಡದಿ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ನಲ್ಲಿ ನಡೆದಿದೆ
ರಾಮನಗರ: ಕಾರಿಗೆ ಡೀಸೆಲ್ ಹಾಕಿಸಿಕೊಂಡು ಅಪರಿಚಿತನೊಬ್ಬ ಬಂಕಿನ ಅಟೆಂಡರ್‌ನಿಂದ 13 ಸಾವಿರ ಕಸಿದು ಪರಾರಿಯಾಗಿರುವ ಘಟನೆ ಬಿಡದಿ ಬಳಿಯ ಕಾಡುಮನೆ ಕ್ರಾಸ್‌ನಲ್ಲಿರುವ ಕೋಕೋ ಬಿಡದಿ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ನಲ್ಲಿ ನಡೆದಿದೆ.
ಪೆಟ್ರೋಲ್ ಬಂಕ್‌ನಲ್ಲಿ ಅಟೆಂಡರ್ ಆಗಿರುವ ಕಾರ್ಯನಿರ್ವಹಿಸುತ್ತಿರುವ ಉಷಾ ಹಣ ಕಳೆದುಕೊಂಡವರು. ಬಂಕಿನ ಅಟೆಂಡರ್ ಆಗಿರುವ ಉಷಾ ಮತ್ತು ಜ್ಯೋತಿ ಬೆಳಗ್ಗೆಯಿಂದಲು ವಾಹನಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ಹಾಕುತ್ತಿದ್ದರು. ಸಂಜೆ 4.50 ಸಮಯದಲ್ಲಿ ಕೆಂಪು ಬಣ್ಣದ ಸ್ವಿಫ್ಟ್ ಕಾಲಿನಲ್ಲಿ ಬಂದ ವ್ಯಕ್ತಿಯೊಬ್ಬ ಪಂಪ್ ಬಳಿ ಕಾರು ನಿಲ್ಲಿಸಿ ವಾಶ್‌ರೂಮಿಗೆ ಹೋಗಿದ್ದಾನೆ. ಅಲ್ಲಿಂದ ಬಂದ ಆತ ಕಾರಿಗೆ 2 ಸಾವಿರ ರುಪಾಯಿ ಡೀಸೆಲ್ ಹಾಕುವಂತೆ ಹೇಳಿದ್ದಾನೆ.ಅದರಂತೆ ಉಷಾ ಡೀಸೆಲ್ ಹಾಕಿ ಹಣ ಕೇಳಿದಾಗ ಫೋನ್ ಪೇ ಎಂದು ಹೇಳಿದಾಗ ಸ್ಕ್ಯಾನರ್ ಕೊಟ್ಟಾಗ ಆತನ ಮೊಬೈಲ್ ನಿಂದ ಆಗದ ಕಾರಣ ಸ್ನೇಹಿತನಿಂದ ಹಾಕಿಸುವುದಾಗಿ ಸ್ಕ್ಯಾನರ್ ಫೋಟೋ ತೆಗೆದುಕೊಂಡಿದ್ದಾನೆ.
ಆಗ ಕಾರ್ ಅನ್ನು ಆನ್ ಮಾಡಿಕೊಂಡು ಕ್ಯಾಶ್ ಕೊಡುವುದಾಗಿ ಹೇಳಿದಾಗ ಉಷಾ ಜೇಬಿನಲ್ಲಿದ್ದ ಹಣವನ್ನು ಕೈಯಲ್ಲಿ ಹಿಡಿದುಕೊಂಡು ನಿಂತಿದ್ದು, ಆ ಅಪರಿಚಿತ ವ್ಯಕ್ತಿ ಡೀಸೆಲ್ ನ 2 ಸಾವಿರ ಹಣವನ್ನೂ ಕೊಡದೆ ಉಷಾ ಕೈಯಲ್ಲಿದ್ದ 13 ಸಾವಿರ ರು.ನಗದನ್ನು ಕಸಿದುಕೊಂಡು ಕಾರಿನೊಂದಿಗೆ ಪರಾರಿಯಾಗಿದ್ದಾನೆ. ಉಷಾ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.