ಬಂಡೆ ಸಂತೆ ಸ್ಥಳಾಂತರ ಸದ್ಯಕ್ಕೆ ಬೇಡ ಸಮಯ ಬದಲಾಯಿಸಿ

| Published : Oct 11 2025, 12:02 AM IST

ಬಂಡೆ ಸಂತೆ ಸ್ಥಳಾಂತರ ಸದ್ಯಕ್ಕೆ ಬೇಡ ಸಮಯ ಬದಲಾಯಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸದುರ್ಗದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ರಾಜೇಶ್ವರಿ ಅವರ ಅಧ್ಯಕ್ಷತೆಯಲ್ಲಿ ಮುಂದುವರೆದ ಸಾಮಾನ್ಯ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಅಧ್ಯಕ್ಷೆ ರಾಜೇಶ್ವರಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಮುಂದುವರೆದ ಸಾಮಾನ್ಯ ಸಭೆಯಲ್ಲಿಯೂ ಅಕ್ರಮಗಳ ಆರೋಪವೇ ಪ್ರತಿಧ್ವನಿಸಿತು.

ಸದಸ್ಯ ದಾಳಿಂಬೆ ಗೀರೀಶ್‌ ಮಾತನಾಡಿ, ಪುರಸಭೆ ನಿಧಿಯಿಂದ ನಮ್ಮ ಕ್ಲಿನಿಕ್ ಗೆ ಎರಡು ಕಂಪ್ಯೂಟರ್ ನಿಗದಿಯಾಗಿದೆ. ಆದರೆ ಒಂದು ಕಂಪ್ಯೂಟರ್ ಮಾತ್ರ ಅಲ್ಲಿದೆ‌. ಮತ್ತೊಂದು ಕಂಪ್ಯೂಟರ್ ಬಗ್ಗೆ ಮಾಹಿತಿಯಿಲ್ಲ. ಏನೋ ಅವ್ಯವಹಾರ ಆಗಿರಬಹುದು. ಅಧಿಕಾರಿಗಳು ಹಾರಿಕೆ ಉತ್ತರ ನೀಡದೆ ಈ ಬಗ್ಗೆ ಜವಾಬ್ದಾರಿ ವಹಿಸಿ ತನಿಖೆ ಮಾಡಿ ಮೂರು ದಿನಗಳೊಳಗೆ ಉತ್ತರ ನೀಡಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿ ನಾಗಭೂಷಣ್, ಈ ಬಗ್ಗೆ ತನಿಖೆ ನಡೆಸಲಾಗುವುದು. ತಪ್ಪಿತಸ್ಥರ ವಿರುದ್ಧ ನೊಟೀಸ್ ಜಾರಿ ಮಾಡಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಗೆ ತಿಳಿಸಿದರು.

ಬಂಡೆ ಸಂತೆಯನ್ನು ಈಗಿರುವ ಸ್ಥಳದಿಂದ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರ ಮಾಡುವಂತೆ ಕೆಲವರಿಂದ ಸಲಹೆ ಬಂದಿದ್ದು ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು ಸಂತೆ ನಡೆಸಲು ಮಾರುಕಟ್ಟೆ ಸಮಿತಿಗೆ ಪ್ರಸ್ತಾವನೆ ಸಲ್ಲಿಸಿ ಅಲ್ಲಿಂದ ಅನುಮೋದನೆ ಸಿಕ್ಕರೆ ನೋಡೋಣ ಆದರೆ ಬಂಡೆ ಸಂತೆಗೆ ಅದರದೆ ಆದ ಅತಿಹ್ಯವಿದೆ ಇದನ್ನು ಏಕಾಏಕೀ ಸ್ಥಳಾಂತಿರಿಸಲು ಸಾಧ್ಯವಿಲ್ಲ ಹಾಗಾಗಿ ರಾತ್ರಿ 8 ಗಂಟೆಯಿಂದಲೇ ಪ್ರಾರಂಭವಾಗುತ್ತಿದ್ದ ಸಂತೆಯ ಸಮಯವನ್ನು ಕಡ್ಡಾಯವಾಗಿ ಬೆಳಿಗಿನ ಜಾವ 4ಗಂಟೆಯಿಂದ ಪ್ರಾರಂಭಿಸುವಂತೆ ಸದಸ್ಯರು ಸಲಹೆ ನೀಡಿದರು.

ಇದಕ್ಕೆ ಪುರಸಭೆ ಮುಖ್ಯಾಧಿಕಾರಿ ನಾಗಭೂಷಣ್ ಪ್ರತಿಕ್ರಿಯಿಸಿ ಕಳೆದ 2 ದಿನಗಳಿಂದಲೇ ಪುರಸಭೆ ಸಿಬ್ಬಂದಿ ಹೊರ ತಾಲೂಕುಗಳಿಂದ ಬರುವ ರೈತರು ಸೇರಿದಂತೆ ದಲ್ಲಾಳಿಗಳಿಗೆ ಈಗಾಗಲೇ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.

ಪಟ್ಟಣದಲ್ಲಿ ಫುಡ್ ಗಾಡಿಗಳು ಹೆಚ್ಚಾಗಿದ್ದು, ಫುಟ್‌ಪಾತ್‌ನ್ನು ಆಕ್ರಮಿಸಿಕೊಂಡಿವೆ. ವ್ಯಾಪಾರಸ್ಥರ ಬಳಿ ಕೆಲವರು ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಕೆಲ ಅಂಗಡಿಗಳ ಮಾಲೀಕರು ಉಪ್ಪಿನ ಚೀಲಗಳನ್ನಿಟ್ಟು ತಿಂಗಳುಗಳೇ ಕಳೆದಿವೆ. ಹೀಗಾದರೆ ಫುಟ್ ಪಾತ್ ಹಾಳಾಗುವುದರ ಜೊತೆಗೆ ಜನಸಾಮಾನ್ಯರ ಓಡಾಟಕ್ಕೂ ತೊಂದರೆಯಾಗಿದೆ. ಕೂಡಲೇ ಇದನ್ನು ತೆರವುಗೊಳಿಸಬೇಕು ಎಂದು ಪುರಸಭೆ ಸದಸ್ಯ ನಾಗರಾಜ್ ಒತ್ತಾಯಿಸಿದರು.

ಬೀದಿ ದೀಪಗಳಿಲ್ಲದೆ ಪಟ್ಟಣದಲ್ಲಿ ಕತ್ತಲು ಆವರಿಸಿದೆ. ಹಾಗಾಗಿ ಪಟ್ಟಣದಲ್ಲಿ ಕಳ್ಳತನ ಹೆಚ್ಚಾಗಿದೆ. ಸೋಲಾರ್ ಬ್ಯಾಟರಿ ಕಳ್ಳತನ ಆಗುತ್ತಿದೆ. ಈ ಬಗ್ಗೆ ಗಮನಹರಿಸಿ. ಟ್ಯಾಂಕರ್ ಹತ್ತಿರ ದೀಪಗಳನ್ನು ಅಳವಡಿಸಬೇಕು. ಕೂಡಲೇ ಪಟ್ಟಣದ ಎಲ್ಲಾ ವಿದ್ಯುತ್ ದೀಪಗಳ ದುರಸ್ತಿ ಕಾರ್ಯ ಶೀಘ್ರ ಆಗಬೇಕು ಎಂದು ಸದಸ್ಯ ಜಾಫರ್ ಸಾದೀಕ್ ತಿಳಿಸಿದರು.

ಪಟ್ಟಣದ ಎಲ್ಲಾ ವಾರ್ಡ್ ಗಳಲ್ಲಿ ಹಸಿ ಕಸ, ಒಣ ಕಸದ ಬುಟ್ಟಿ ಅಳವಡಿಸಿದರೆ ಕುಸದ ವಿಂಗಡಣೆ ಸುಲಭವಾಗುತ್ತದೆ ಎಂದು ಸದಸ್ಯ ಮಂಜುನಾಥ್ ಸಲಹೆ ನೀಡಿದರು. ಶಾಂತಿನಗರದಲ್ಲಿನ ಅಂಬೇಡ್ಕರ್ ಭವನ ಸಂಪೂರ್ಣವಾಗಿ ಹದಗೆಟ್ಟಿದೆ. ಕಾಂಪೌಂಡ್ ಸೇರಿದಂತೆ ಯಾವುದೇ ಮೂಲ ಸೌಕರ್ಯ ಇಲ್ಲಿಲ್ಲ.ಕುಡುಕರ ತಾಣವಾಗಿದೆ‌. ಹಿರಿಯೂರು ರಸ್ತೆ ದುರಸ್ತಿ ಮಾಡಿಸುವ ಬಗ್ಗೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಯಿತು.