ವಡ್ಡರಹಳ್ಳಿ ಕೃಷಿ ಪತ್ತಿನ ಸಂಘಕ್ಕೆ ರೋಹಿತ್ ಗೌಡ ಅಧ್ಯಕ್ಷರಾಗಿ ಆಯ್ಕೆ

| Published : Feb 12 2025, 12:31 AM IST

ವಡ್ಡರಹಳ್ಳಿ ಕೃಷಿ ಪತ್ತಿನ ಸಂಘಕ್ಕೆ ರೋಹಿತ್ ಗೌಡ ಅಧ್ಯಕ್ಷರಾಗಿ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಮಳವಳ್ಳಿ ತಾಲೂಕಿನ ವಡ್ಡರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ರೋಹಿತ್‌ಗೌಡ (ದೀಪು) ಹಾಗೂ ಉಪಾಧ್ಯಕ್ಷರಾಗಿ ಕೆಂಪೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಾಮಕೃಷ್ಣ ಘೋಷಣೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ತಾಲೂಕಿನ ವಡ್ಡರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ರೋಹಿತ್‌ಗೌಡ (ದೀಪು) ಹಾಗೂ ಉಪಾಧ್ಯಕ್ಷರಾಗಿ ಕೆಂಪೇಗೌಡ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಸಭಾಂಗಣದಲ್ಲಿ ಐದು ವರ್ಷದ ಅವಧಿಗೆ ನಡೆದ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರೋಹಿತ್‌ಗೌಡ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕೆಂಪೇಗೌಡ ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವ ಬಗ್ಗೆ ಚುನಾವಣಾಧಿಕಾರಿ ರಾಮಕೃಷ್ಣ ಘೋಷಣೆ ಮಾಡಿದರು.

ನೂತನ ಅಧ್ಯಕ್ಷ ರೋಹಿತ್‌ಗೌಡ ಮಾತನಾಡಿ, ಅಧ್ಯಕ್ಷರಾಗಿ ಆಯ್ಕೆ ಮಾಡಿದ ನಿರ್ದೇಶಕರು ಹಾಗೂ ಷೇರುದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ ಸಹಕಾರದೊಂದಿಗೆ ಸಂಘವನ್ನು ಮಾದರಿಯಾಗಿ ಅಭಿವೃದ್ಧಿ ಪಡಿಸುತ್ತೇನೆ ಎಂದರು.

ಸರ್ಕಾರದಿಂದ ಬಂದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ನಿರ್ದೇಶಕರ ಜೊತೆಗೆ ಚರ್ಚೆ ನಡೆಸಿ ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲಾಗುವುದು, ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸಂಘವನ್ನು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ನೂತನ ಅಧ್ಯಕ್ಷರಾಗಿ ಉಪಾಧ್ಯಕ್ಷರನ್ನು ಅಭಿನಂದಿಸಿ ಗೌರವಿಸಿದರು. ಇದೇ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ಜಿಪಂ ಮಾಜಿ ಸದಸ್ಯೆ ಸುಷ್ಮಾರಾಜು, ಕೆಪಿಸಿಸಿ ಸದಸ್ಯ ಪುಟ್ಟಸ್ವಾಮಿ, ಮುಖಂಡರಾದ ಬಿಬಿಎಂಪಿ ನಂಜುಂಡಪ್ಪ, ಸುಂದರ್, ಜಗದೀಶ್, ಬಂಕ್ ಮಹದೇವ್, ಶ್ರೀಕಾಂತ್, ಚೇತನ್ ನಾಯಕ್, ಮಹೇಶ್ ನಿರ್ದೇಶಕರಾದ ಮಹದೇವಮ್ಮ, ಎನ್. ಜವರಯ್ಯ, ಮನು, ರುದ್ರಮ್ಮ, ನಂಜುಂಡೇಗೌಡ, ಶಿವಮಲ್ಲು, ನಂದೀಶ್ ಸೇರಿದಂತೆ ಇತರರು ಇದ್ದರು.