ಅರಸೀಕೆರೆ: ತಾಲೂಕಿನ ಬಾಣಾವರ ಹೋಬಳಿಯ ಭೈರಗೊಂಡನಹಳ್ಳಿ ಭೋವಿ ಕಾಲೋನಿಯ ನಿವಾಸಿ ಸ್ವಾಮಿ, ನಾಗಮ್ಮ ದಂಪತಿ ಪುತ್ರ ರೋಹಿತ್ ಬಿ.ಎಸ್. ರಾಷ್ಟ್ರಮಟ್ಟದ 46ನೇ ಸಬ್ ಜೂನಿಯರ್‌ ವಾಲಿಬಾಲ್ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ.ಪ್ರಸ್ತುತ ಬೆಂಗಳೂರಿನ ಗವರ್ನ್ಮೆಂಟ್ ಸ್ಪೋರ್ಟ್ಸ್ ಹೈ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ರೋಹಿತ್‌ಗೆ ತರಬೇತಿದಾರರಾದ ಗೀತಾ ಮಾರ್ಗದರ್ಶನ ನೀಡುತ್ತಿದ್ದಾರೆ. ಫೆಬ್ರವರಿ 24ರಿಂದ ಮಾರ್ಚ್ 1ರವರೆಗೆ ಪಶ್ಚಿಮ ಬಂಗಾಳದಲ್ಲಿ ನಡೆಯುವ ಈ ಕ್ರೀಡಾಕೂಟದಲ್ಲಿ ರಾಜ್ಯ ಪರ ಆಡಲಿದ್ದಾರೆ.ರೋಹಿತ್ ಅವರ ಆಯ್ಕೆಗೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಸೇರಿದಂತೆ ಹಲವು ಗಣ್ಯರು, ಕ್ರೀಡಾಭಿಮಾನಿಗಳು ಹಾಗೂ ಸಂಘಸಂಸ್ಥೆಗಳ ಪದಾಧಿಕಾರಿಗಳು ಶುಭಾಶಯ ಕೋರಿದ್ದಾರೆ. ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಗಮನಾರ್ಹ ಸಾಧನೆ ತೋರಿರುವ ರೋಹಿತ್, ಈ ಬಾರಿ ಕೂಡ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತವಾಗಿದೆ.