ಸಾರಾಂಶ
ಪ್ರೀಮಿಯರ್ ಪಬ್ಲಿಕ್ ಸ್ಕೂಲ್ ನಲ್ಲಿ ಶಾಲೆ ಶೈಕ್ಷಣಿಕ ವರ್ಷ ಪುನರಾರಂಭ: ಆಕ್ಷರಾಭ್ಯಾಸ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಮಕ್ಕಳ ವಿದ್ಯಾಭ್ಯಾಸದಲ್ಲಿ ಪೋಷಕರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಶಾಸಕ ಜಿ. ಎಚ್.ಶ್ರೀನಿವಾಸ್ ಹೇಳಿದ್ದಾರೆ.ಬುಧವಾರ, ತುಂಗಭದ್ರ ವಿದ್ಯಾ ಸಂಸ್ಥೆಯ ಪ್ರೀಮಿಯರ್ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಿದ್ದ 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲೆ ಪುನರಾರಂಭ ಮತ್ತು ಅಕ್ಷರಾಭ್ಯಾಸ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.ಹಿಂದಿನ ವಿದ್ಯಾಭ್ಯಾಸಕ್ಕೂ ಇಂದಿನ ವಿದ್ಯಾಭ್ಯಾಸಕ್ಕೂ ತುಂಬಾ ವ್ಯತ್ಯಾಸ ಇದೆ, ಮಕ್ಕಳು ಚೆನ್ನಾಗಿ ಓದಬೇಕು, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಅವರು ಈ ವಿದ್ಯಾ ಸಂಸ್ಥೆಯನ್ನು ಬಹಳ ಕಷ್ಟಪಟ್ಟು ಬೆಳೆಸಿದ್ದಾರೆ ಎಂದು ಹೇಳಿದರು.ತುಂಗಭದ್ರ ವಿದ್ಯಾ ಸಂಸ್ಥೆ ಸಂಸ್ಥಾಪಕರಾದ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ ತುಂಗಭದ್ರ ವಿದ್ಯಾ ಸಂಸ್ಥೆ ಅನೇಕ ಶಿಕ್ಷಕರಿಗೆ ತರಬೇತಿ ನೀಡಿ ಅವರ ಜೀವನ ರೂಪಿಸಿಕೊಳ್ಳಲು ಸಹಾಯ ಮಾಡಿದೆ. ಮಕ್ಕಳ ವಿದ್ಯಾಭ್ಯಾಸದ ಬೆಳವಣಿಗೆಯಲ್ಲಿ ಶಿಕ್ಷಕರ ಜೊತೆಗೆ ಪೋಷಕರ ಪಾತ್ರ ಬಹಳ ಪರಿಣಾಮಕಾರಿ. ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸ
ಪಡೆಯುತ್ತಿರುವ ಮಕ್ಕಳ ಜವಾಬ್ದಾರಿ ನಮ್ಮದು ಎಂದು ಹೇಳಿದರು. ಶಾಲೆ ಮುಖ್ಯೋಪಾಧ್ಯಾಯಿನಿ ಕೆ.ಎಲ್.ಜಯಂತಿ ಮಾತನಾಡಿ ಶಾಲೆಗೆ ಎಲ್ಲ ಪೋಷಕರ ಸಹಕಾರ ಇದೆ, ಶಾಲೆಯಲ್ಲಿ ಹೊಸತನ ಇರಬೇಕು, ಶಾಲೆ ಹೊಸ ಚಟುವಟಿಕೆಗಳನ್ನು ಹೊಂದಿರಬೇಕು, ತಂದೆ ತಾಯಿಗಳು ಮಕ್ಕಳ ಜೊತೆಗೆ ಸಮಯ ಕಳೆಯಬೇಕು, ಮಕ್ಕಳ ಪ್ರತಿಭೆ ಹೊರತರಬೇಕು ಮಕ್ಕಳಿಗೆ ಹೆಚ್ಚು ಪ್ರೋತ್ಸಾಹ ಕೊಡಬೇಕು ಎಂದು ಹೇಳಿದರು.ರಾಜ್ಯ ಆಹಾರ ಇಲಾಖೆ ನಿವೃತ್ತ ಕಮೀಷನರ್ ಬಿ.ಎನ್.ಕೃಷ್ಣಮೂರ್ತಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಪೆನ್ಸಿಲ್ ಮತ್ತು ನೋಟ್ ಬುಕ್.ಗಳನ್ನು ವಿತರಿಸಲಾಯಿತು.ಸಂಸ್ಥೆ ಕಾರ್ಯದರ್ಶಿ ಉತ್ಸವ್ ಚಂದ್ರಪ್ಪ, ತಾ.ಪಂ.ಮಾಜಿ ಸದಸ್ಯರಾದ ಕೆಂಪೇಗೌಡರು, ಭಾವಿಕೆರೆ ಗ್ರಾಪಂ ಮಾಜಿ ಅಧ್ಯಕ್ಷ ವೆಂಕಟೇಶ್, ಶಿವಕುಮಾರ್, ಗುರುಮೂರ್ತಿ, ಜಿ.ಆರ್. ಪ್ರೇಮ, ಚೈತ್ರ, ಕವಿತಾ ಟಿ.ಜಿ, ಶಿಕ್ಷಕರು, ತಿಪ್ಪೇಸ್ವಾಮಿ, ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
22ಕೆಟಿಆರ್.ಕೆ.4ಃತರೀಕೆರೆಯಲ್ಲಿ ತುಂಗಭದ್ರ ವಿದ್ಯಾ ಸಂಸ್ಥೆ ಪ್ರೀಮಿಯರ್ ಪಬ್ಲಿಕ್ ಶಾಲೆ ಶೈಕ್ಷಣಿಕ ವರ್ಷ ಪುನರಾರಂಭ ಮತ್ತು ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ಉದ್ಘಾಟಿಸಿದರು. ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಆಹಾರ ಇಲಾಖೆ ನಿವೃತ್ತ ಕಮೀಷನರ್ .ಎನ್.ಕೃಷ್ಣಮೂರ್ತಿ, ಭಾವಿಕೆರೆ ಗ್ರಾಪಂ ಮಾಜಿ ಅಧ್ಯಕ್ಷ ವೆಂಕಟೇಶ್. ಶಾಲೆ ಮುಖ್ಯೋಪಾಧ್ಯಾಯಿನಿ ಕೆ.ಎಲ್.ಜಯಂತಿ ಮತ್ತಿತರರು ಇದ್ದರು.