ಉತ್ತಮ ಸೇವೆ ಸಲ್ಲಿಸುವಲ್ಲಿ ಅಂಚೆ ಇಲಾಖೆ ಪಾತ್ರ ಪ್ರಮುಖ: ರಮೇಶ್

| Published : Oct 23 2023, 12:16 AM IST

ಉತ್ತಮ ಸೇವೆ ಸಲ್ಲಿಸುವಲ್ಲಿ ಅಂಚೆ ಇಲಾಖೆ ಪಾತ್ರ ಪ್ರಮುಖ: ರಮೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತಮ ಸೇವೆ ಸಲ್ಲಿಸುವಲ್ಲಿ ಅಂಚೆ ಇಲಾಖೆ ಪಾತ್ರ ಪ್ರಮುಖ: ರಮೇಶ್
ಶಾರದಾ ನಗರ ಪ್ರಥಾನ ಅಂಚೆ ಕಚೇರಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಜಿಲ್ಲಾ ಅಂಚೆ ಇಲಾಖೆ ಅಧೀಕ್ಷಕ ಕನ್ನಡಪ್ರಭ ವಾರ್ತೆ, ಶೃಂಗೇರಿ ಇಂದಿನ ವಾಟ್ಸಾಪ್‌, ಇಂಟರ್‌ನೆಟ್‌, ಫೇಸ್‌ಬುಕ್‌ ಯುಗದ ನಡುವೆಯೂ ಅಂಚೆ ಇಲಾಖೆ ನಿರಂತರವಾಗಿ ತನ್ನದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿದೆ. ಜನರಿಗೆ ಉತ್ತಮ ಸೇವೆ ನೀಡುವಲ್ಲಿ ಅಂಚೆ ಇಲಾಖೆ ಪಾತ್ರ ಮಹತ್ತರವಾಗಿದೆ ಎಂದು ಚಿಕ್ಕಮಗಳೂರು ಅಂಚೆ ಅಧೀಕ್ಷಕ ರಮೇಶ್‌ ಹೇಳಿದರು. ಪಟ್ಟಣದ ಶಾರದಾ ನಗರ ಪ್ರಥಾನ ಅಂಚೆ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಅಂಚೆ ಇಲಾಖೆ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು. ಬ್ರಿಟೀಷರ ಕಾಲದಿಂದಲೂ ಭಾರತದಲ್ಲಿ ಅಂಚೆ ಇಲಾಖೆ ಕಾರ್ಯವೈಖರಿ ನಡೆದುಕೊಂಡು ಬಂದಿದ್ದು, ಇತ್ತೀಚಿನ ವರ್ಷಗಳಲ್ಲಿ ಅಂಚೆ ಇಲಾಖೆ ಸಾಕಷ್ಟು ಆಧುನೀಕರಣಗೊಂಡಿದೆ. ಅಂಚೆ ಪತ್ರಗಳ ಬಟವಾಡೆ ಜೊತೆ ಬ್ಯಾಂಕುಗಳಂತೆ ಉಳಿತಾಯ ಖಾತೆ, ವಿಮೆ, ಸೇರಿದಂತೆ ಜನರಿಗೆ ವಿವಿಧ ರೀತಿ ಸೌಲಭ್ಯಗಳು ಜನರಿಗೆ ಇಲಾಖೆಯಿಂದ ಸಿಗುತ್ತಿದೆ. ಅಂಚೆ ಇಲಾಖೆ ರಶೀದಿಯಿಂದ ಹಿಡಿದು ಸ್ವೀಕೃತಿ ಪತ್ರ ಎಲ್ಲವೂ ಕೆಲವೊಮ್ಮೆ ಉತ್ತಮ ದಾಖಲೆಗಳಾಗಿವೆ. ಅಂಚೆ ಇಲಾಖೆ ವ್ವವಸ್ಥೆಯಲ್ಲಿ ಎಲ್ಲವೂ ಭದ್ರವಾಗಿರುತ್ತದೆ. ಆರ್ಥಿಕವಾಗಿ ಖಾತೆದಾರರ ಹಣ ಸಂಗ್ರಹಣೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಪ್ಪ ಅಂಚೆ ನಿರೀಕ್ಷಕ ಕುಮಾರ್‌ ಅಂಚೆ ಇಲಾಖೆಯಲ್ಲಿ ಲಭ್ಯವಿರುವ ಉಳಿತಾಯ ಯೋಜನೆಗಳು, ವಿಮೆಗಳು, ಆದಾರ್‌ ತಿದ್ದುಪಡಿ ಸೇರಿದಂತೆ ಎಲ್ಲಾ ಯೋಜನೆಗಳನ್ನು ಜನರು ಸಮರ್ಪಕವಾಗಿ ಸದ್ಭಳಕೆ ಮಾಡಬೇಕು ಎಂದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮೆಣಸೆ ಶಾಲೆ ಮುಖ್ಯ ಶಿಕ್ಷಕ ಡಾ.ಬಿ.ಆರ್.ಗಂಗಾಧರಪ್ಪ ಮಾತನಾಡಿ ಅಂಚೆ ಇಲಾಖೆ ಸರ್ಕಾರಿ ವ್ಯವಸ್ಥೆ ಅಡಿಯಲ್ಲಿ ಬರುವ ಇಲಾಖೆ. ಈ ಇಲಾಖೆಯಲ್ಲಿ ಸಾರ್ವಜನಿಕ ಸರಕು ಸೇವೆಗಳು ಮತ್ತು ಉಳಿತಾಯ ಯೋಜನೆಗಳು ಮತ್ತು ಪತ್ರ ವ್ಯವಹಾರ ಮಾಡಬಹುದು.ಇಲ್ಲಿ ಸಾರ್ವಜನಿಕರಿಗೆ ಸಾಕಷ್ಟು ಭದ್ರತೆ ಸಿಗುತ್ತದೆ. ಪತ್ರಗಳು, ದಾಖಲೆಗಳು, ಹಣ ಎಲ್ಲವೂ ಭದ್ರವಾಗಿರುತ್ತದೆ. ಸಾರ್ವಜನಿಕರು ನಿಶ್ಚಿಂತೆಯಿಂದ ಸೇವೆಗಳಗಳಲ್ಲಿ ತೊಡಗಿಸಿ ಕೊಳ್ಳಬಹುದಾಗಿದೆ ಎಂದರು. ಕಾರ್ಯಕ್ರಮದಲ್ಲಿ ಅಂಚೆ ಇಲಾಖೆಯ ಬಾಲಕೃಷ್ಣ, ಸಂತೋಷ್‌, ಸಾವಿತ್ರಿ ಮತ್ತಿತರರು ಇದ್ದರು. 22 ಶ್ರೀ ಚಿತ್ರ 2- ಶೃಂಗೇರಿ ಪಟ್ಟಣದ ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ನಡೆದ ಅಂಚೆ ಇಲಾಖೆ ಜನಸಂಪರ್ಕ ಸಭೆಯನ್ನು ಕುಮಾರ್‌ ಉದ್ಘಾಟಿಸಿದರು.ರಮೇಶ್‌,ಗಂಗಾಧರಪ್ಪ ಮತ್ತಿತರರು ಇದ್ದರು.