ಸಂಸ್ಕೃತ ಸಂಸ್ಕೃತಿಯ ಬೇರು: ಪೂರ್ಣಿಮಾ ಶೆಟ್ಟಿ

| Published : Feb 08 2024, 01:34 AM IST

ಸಾರಾಂಶ

ಉಡುಪಿ ಸಂಸ್ಕೃತ ಭಾರತಿ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಹತ್ತು ದಿನಗಳ ಉಚಿತ ಸಂಸ್ಕೃತ ಸಂಭಾಷಣ ಶಿಬಿರ ಸಂಪನ್ನಗೊಂಡಿತು. ಸಮಾರೋಪ ಸಮಾರಂಭದಲ್ಲಿ ಮಾನವ ಹಕ್ಕುಗಳು ಮತ್ತು ಮಹಿಳೆ ಮಕ್ಕಳ ಕಲ್ಯಾಣ ಸಂಘದ ರಾಜ್ಯ ಕಾರ್ಯದರ್ಶಿ ಪೂರ್ಣಿಮಾ ಶೆಟ್ಟಿ ಮಾತನಾಡಿ, ಸಂಸ್ಕೃತ ಭಾಷೆಯು ನಮ್ಮ ಸಂಸ್ಕೃತಿಯ ಬೇರಾಗಿದೆ. ಇದನ್ನು ಎಲ್ಲರೂ ಕಲಿಯಬೇಕು ಹಾಗೂ ಮಾತನಾಡಬೇಕು. ನಮಗೆ ಬಾಲ್ಯದಲ್ಲಿ ಸಂಸ್ಕೃತ ಕಲಿಯಲು ಅನುಕೂಲತೆ ಇರಲಿಲ್ಲ. ಈಗ ಸಂಸ್ಕೃತ ಭಾರತಿಯು ಜನ ಸಾಮಾನ್ಯರಿಗೆ ಸಂಭಾಷಣಾ ಶಿಬಿರಗಳ ಮುಖಾಂತರ ಉಚಿತವಾಗಿ ಸಂಸ್ಕೃತ ಕಲಿಸುವುದು ಅತ್ಯಂತ ಶ್ಲಾಘನೀಯ ಎಂದರು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ತೆಂಕಪೇಟೆಯಲ್ಲಿರುವ ಸಂಸ್ಕೃತ ಭಾರತಿ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಹತ್ತು ದಿನಗಳ ಉಚಿತ ಸಂಸ್ಕೃತ ಸಂಭಾಷಣ ಶಿಬಿರ ಸಂಪನ್ನಗೊಂಡಿತು.

ಸಮಾರೋಪ ಸಮಾರಂಭದಲ್ಲಿ ಮಾನವ ಹಕ್ಕುಗಳು ಮತ್ತು ಮಹಿಳೆ ಮಕ್ಕಳ ಕಲ್ಯಾಣ ಸಂಘದ ರಾಜ್ಯ ಕಾರ್ಯದರ್ಶಿ ಪೂರ್ಣಿಮಾ ಶೆಟ್ಟಿ ಮಾತನಾಡಿ, ಸಂಸ್ಕೃತ ಭಾಷೆಯು ನಮ್ಮ ಸಂಸ್ಕೃತಿಯ ಬೇರಾಗಿದೆ. ಇದನ್ನು ಎಲ್ಲರೂ ಕಲಿಯಬೇಕು ಹಾಗೂ ಮಾತನಾಡಬೇಕು. ನಮಗೆ ಬಾಲ್ಯದಲ್ಲಿ ಸಂಸ್ಕೃತ ಕಲಿಯಲು ಅನುಕೂಲತೆ ಇರಲಿಲ್ಲ. ಈಗ ಸಂಸ್ಕೃತ ಭಾರತಿಯು ಜನ ಸಾಮಾನ್ಯರಿಗೆ ಸಂಭಾಷಣಾ ಶಿಬಿರಗಳ ಮುಖಾಂತರ ಉಚಿತವಾಗಿ ಸಂಸ್ಕೃತ ಕಲಿಸುವುದು ಅತ್ಯಂತ ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಕೃತ ಭಾರತೀಯ ಉಡುಪಿ ಜನಪದ ಸಾಹಿತ್ಯ ಪ್ರಮುಖರಾದ ಶಕುಂತಲಾ ಶೆಣೈ ಮಾತನಾಡಿ. ಶಿಬಿರಾರ್ಥಿಗಳೆಲ್ಲರೂ ಸಂಸ್ಕೃತ ಅಧ್ಯಯನವನ್ನು ಮುಂದುವರಿಸಬೇಕು ಎಂದು ಕರೆ ನೀಡಿದರು. ಶಿಬಿರಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.

ಸಂಸ್ಕೃತ ಭಾರತಿಯ ಮಂಗಳೂರು ವಿಭಾಗ ಸಂಯೋಜಕ ನಟೇಶ್ ವೈ. ಆರ್. ಶಿಬಿರ ನಡೆಸಿಕೊಟ್ಟರು. ಪ್ರಮುಖರಾದ ದೀಪಾ ಶೆಣೈ ಸಹಕರಿಸಿದರು. ಯಕ್ಷಗಾನ ಕಲಾವಿದ ಆದಿತ್ಯ ಹೆಗಡೆ ಯಡೂರು ನಿರ್ವಹಿಸಿದರು. ಸ್ವಾತಿ ಸ್ವಾಗತಿಸಿದರು. ಉಷಾ ಉಡುಪಿ ವಂದಿಸಿದರು.

ರಾಗಧನ ಪಲ್ಲವಿ ಪ್ರಶಸ್ತಿ ಪ್ರದಾನಖ್ಯಾತ ಜನಪದ ಸಂಶೋಧಕಿ ಡಾ.ಸುಶೀಲಾ ಉಪಾಧ್ಯಾಯ ಅವರ ಸ್ಮರಣಾರ್ಥ ಅವರ ಪತಿ ಡಾ. ಯು.ಪಿ. ಉಪಾಧ್ಯಾಯರಿಂದ ಸ್ಥಾಪಿಸಲ್ಪಟ್ಟ, ಉಡುಪಿಯ ರಾಗ ಧನ ಸಂಸ್ಥೆ ಕೊಡಮಾಡುವ ರಾಗ ಧನ ಪಲ್ಲವಿ ಪ್ರಶಸ್ತಿ-2024ನ್ನು ದಿವ್ಯಶ್ರೀ ಭಟ್ ಅವರಿಗೆ ಪ್ರದಾನ ಮಾಡಲಾಯಿತು.ಮುಖ್ಯ ಅಭ್ಯಾಗತರಾಗಿದ್ದ ಕಲಾಪೋಷಕ ದಿನೇಶ್ ಕೆ. ಅಮ್ಮಣ್ಣಾಯ ಪ್ರಶಸ್ತಿ ಪ್ರದಾನ ಮಾಡಿದರು. ನಂತರ ಅವರು ಮಾತನಾಡಿ, ಮಕ್ಕಳ ಕಲಾಸಕ್ತಿ ಹಾಗೂ ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಪ್ರಧಾನವಾಗಿರುತ್ತದೆ ಎಂದರು.ಪ್ರಶಸ್ತಿ ಆಯ್ಕೆ ಸಮಿತಿಯ ಪ್ರೊ.ಅರವಿಂದ ಹೆಬ್ಬಾರ್ ಮತ್ತು ಸರೋಜಾ ಆರ್. ಆಚಾರ್ಯ, ಸಂಸ್ಥೆಯ ಅಧ್ಯಕ್ಷ ಡಾ.ಶ್ರೀಕಿರಣ್ ಹೆಬ್ಬಾರ್, ಪ್ರಧಾನ ಕಾರ್ಯದರ್ಶಿ ಉಮಾಶಂಕರಿ ವೇದಿಕೆಯಲ್ಲಿದ್ದರು.ಸುರೇಖಾ ಭಟ್ ಅವರು ಪ್ರಾರ್ಥಿಸಿದರು. ಸಂಸ್ಥೆಯ ಖಜಾಂಚಿ ಪ್ರೊ.ಕೆ. ಸದಾಶಿವ ರಾವ್ ಸ್ವಾಗತಿಸಿದರು. ಉಪ್ಪಂಗಳ ಶಂಕರಿ ಭಟ್ ಪ್ರಶಸ್ತಿ ಪತ್ರ ವಾಚಿಸಿದರು. ಕೆ.ಆರ್. ರಾಘವೇಂದ್ರ ಆಚಾರ್ಯ ನಿರ್ವಹಿಸಿ, ವಂದಿಸಿದರು.