ಚಿತ್ರದುರ್ಗದಲ್ಲಿ ಗುಲಾಬಿ ಆಂದೋಲನ ಜಾಗೃತಿ ಜಾಥಾ

| Published : Feb 09 2024, 01:46 AM IST

ಸಾರಾಂಶ

ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಮತ್ತು ತಂಬಾಕು ಮಾರಾಟಗಾರರಿಗೆ ಗುಲಾಬಿ ನೀಡುವ ಮೂಲಕ ತಂಬಾಕನ್ನು ತ್ಯಜಿಸುವಂತೆ ಮತ್ತು ವಿದ್ಯಾರ್ಥಿಗಳಿಗೆ ತಮ್ಮ-ತಮ್ಮ ಮನೆಗಳಲ್ಲಿ ಯಾರಾದರೂ ತಂಬಾಕು ಉತ್ಪನ್ನಗಳನ್ನು ಸೇವನೆ ಮಾಡುತ್ತಿದ್ದರೆ ಅದನ್ನು ತ್ಯಜಿಸುವಂತೆ ಜಾಗೃತಿ ಮೂಡಿಸಿ ಮನವೊಲಿಸಲು ತಿಳಿಸಿದರು

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಜಿಲ್ಲೆಯಾದ್ಯಂತ ಎಲ್ಲಾ ಶಾಲಾ, ಕಾಲೇಜುಗಳಲ್ಲಿ, ಸಾರ್ವಜನಿಕರಿಗೆ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡದಂತೆ ಮತ್ತು ತಂಬಾಕು ಮಾರಾಟಗಾರರಿಗೆ ಶೈಕ್ಷಣಿಕ ಸಂಸ್ಥೆಗಳ ಹತ್ತಿರ 100 ಯಾರ್ಡ್ ಅಂತರದಲ್ಲಿ ತಂಬಾಕು ಮಾರಾಟ ಮಾಡದಂತೆ ವಿದ್ಯಾರ್ಥಿಗಳಿಂದ ಗುಲಾಬಿ ನೀಡುವ ಮೂಲಕ ಮನವೊಲಿಸಲಾಯಿತು.

ಚಿತ್ರದುರ್ಗ ನಗರದ ವಾಸುದೇವರೆಡ್ಡಿ ಸ್ಮಾರಕ ಪ್ರೌಢಶಾಲೆಯಲ್ಲಿ ಜಿಲ್ಲಾ ಮಟ್ಟದ ಗುಲಾಬಿ ಆಂದೋಲನ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.

ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ.ಚಂದ್ರಶೇಖರ್ ಜಿಲ್ಲಾ ಮಟ್ಟದ ಗುಲಾಬಿ ಆಂದೋಲನ ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಹಾಗೆಯೇ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಮತ್ತು ತಂಬಾಕು ಮಾರಾಟಗಾರರಿಗೆ ಗುಲಾಬಿ ನೀಡುವ ಮೂಲಕ ತಂಬಾಕನ್ನು ತ್ಯಜಿಸುವಂತೆ ಮತ್ತು ವಿದ್ಯಾರ್ಥಿಗಳಿಗೆ ತಮ್ಮ-ತಮ್ಮ ಮನೆಗಳಲ್ಲಿ ಯಾರಾದರೂ ತಂಬಾಕು ಉತ್ಪನ್ನಗಳನ್ನು ಸೇವನೆ ಮಾಡುತ್ತಿದ್ದರೆ ಅದನ್ನು ತ್ಯಜಿಸುವಂತೆ ಜಾಗೃತಿ ಮೂಡಿಸಿ ಮನವೊಲಿಸಲು ತಿಳಿಸಿದರು.

ಸಾರ್ವಜನಿಕರು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡದಂತೆ ಮತ್ತು ತಂಬಾಕು ಮಾರಾಟಗಾರರಿಗೆ ಶೈಕ್ಷಣಿಕ ಸಂಸ್ಥೆಗಳ ಹತ್ತಿರ 100 ಯಾರ್ಡ್ ಅಂತರದಲ್ಲಿ ತಂಬಾಕು ಮಾರಾಟ ಮಾಡದಂತೆ ಕರೆ ನೀಡಿದರು. ಶ್ರೀ ವಾಸುದೇವರೆಡ್ಡಿ ಸ್ಮಾರಕ ಪ್ರೌಢಶಾಲೆಯ ಸುತ್ತ-ಮುತ್ತ ಇರುವಂತಹ ಸಾರ್ವಜನಿಕರಿಗೆ ಮತ್ತು ತಂಬಾಕು ಮಾರಾಟಗಾರರಿಗೆ ಜಾಗೃತಿ ಮೂಡಿಸಿ ಶಾಲೆಗೆ ಮರಳಲಾಯಿತು. ವಾಸುದೇವರೆಡ್ಡಿ ಸ್ಮಾರಕ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಬಿ.ಎ.ಪದ್ಮಾ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಜಿಲ್ಲಾ ಸಲಹೆಗಾರ ಬಿ.ಎಂ.ಪ್ರಭುದೇವ್, ಸಮಾಜ ಕಾರ್ಯಕರ್ತ ಕೆ.ಎಂ.ತಿಪ್ಪೇಸ್ವಾಮಿ, ಶಾಲಾ ಶಿಕ್ಷಕ ವರ್ಗದವರು ಇದ್ದರು.