ರೋಟರಿ ಕ್ಲಬ್‌ನಿಂದ ಪೋಲಿಯೊ ಜಾಥಾ

| Published : Oct 26 2025, 02:00 AM IST

ಸಾರಾಂಶ

ಬ್ರೈಟ್ ಪಿಯು ಕಾಲೇಜಿನ ವಿದ್ಯಾರ್ಥಿಗಳು, ರೋಟರಿ ಸಮುದಾಯ ದಳ ಮತ್ತು ರೋಟರಾಕ್ಟ್ ಸದಸ್ಯರೊಂದಿ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರಪಟ್ಟಣದ ರೋಟರಿ ಕ್ಲಬ್ ನಿಂದ ವಿಶ್ವ ಪೋಲಿಯೊ ದಿನಾಚರಣೆ ಅಂಗವಾಗಿ ಪೋಲಿಯೊ ಜಾಥಾ ನಡೆಯಿತು.ಬ್ರೈಟ್ ಪಿಯು ಕಾಲೇಜಿನ ವಿದ್ಯಾರ್ಥಿಗಳು, ರೋಟರಿ ಸಮುದಾಯ ದಳ ಮತ್ತು ರೋಟರಾಕ್ಟ್ ಸದಸ್ಯರೊಂದಿಗೆ ವಿವಿ ರಸ್ತೆ, ಸಿಎಂ ರಸ್ತೆ ಹಾಗೂ ಬಜಾರ್ ರಸ್ತೆಗಳಲ್ಲಿ ಜಾಥಾ ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು.ಆನಂತರ ಪುರಸಭೆ ಬಯಲು ರಂಗ ಮಂದಿರದ ಆವರಣದಲ್ಲಿ ಪೋಲಿಯೊ ಅರಿವಿನ ಕಾರ್ಯಕ್ರಮನಡೆಸಿ ಪೋಲಿಯೊ ನಿರ್ಮೂಲನೆಗಾಗಿ ರೋಟರಿ ಸದಸ್ಯರಿಂದ ವಿಶ್ವಾದ್ಯಂತ ಪೋಲಿಯೊ ಹನಿಗೆ 2.90 ಲಕ್ಷ ಕೋಟಿ ಗೇಣಿಗೆ ನೀಡುವ ಮುಖಾಂತರ ಅದರ ನಿರ್ಮೂಲನೆಗೆ ಶ್ರಮಿಸಿರುವುದು ಹಾಗೂ ಅಂತಾ ರಾಷ್ಟ್ರೀಯ ರೋಟರಿ ಸಂಸ್ಥೆಯ ಮಹತ್ವವನ್ನು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.ಕೆ.ಆರ್. ನಗರ ರೋಟರಿ ಸಂಸ್ಥೆಯ ಅಧ್ಯಕ್ಷ ಟಿ.ಎನ್. ದಯಾನಂದ , ಕಾರ್ಯದರ್ಶಿ ಕೆ.ಆರ್. ಪುರುಷೋತ್ತಮ, ಖಜಾಂಚಿ ಅಶೋಕ್ ಕುಮಾರ್, ನಿರ್ದೇಶಕರಾದ ವೈ.ಬಿ. ಶಶಿಭೂಷಣ್, ಸಿ.ವಿ. ಮೋಹನ್ ಕುಮಾರ್, ರಾಘವೇಂದ್ರ, ಸದಸ್ಯರಾದ ಎಂ.ಎನ್. ರವಿಕುಮಾರ್, ಎಂಜಿನಿಯರ್ ಕುಮಾರ್, ರೋಟರಿ ಸಮುದಾಯದಳದ ಅಧ್ಯಕ್ಷ ಗೋಪಾಲರಾಜು, ಸದಸ್ಯರಾದ ಶ್ರೀಧರ, ರೋಟರಾಕ್ಟ್ ಅಧ್ಯಕ್ಷರಾದ ಹರೀಶ್ ರಾಘವೇಂದ್ರ, ಕಾರ್ಯದರ್ಶಿ ಸಿ.ಎಂ. ಸುಹಾಸ್, ಮತ್ತು ಬ್ರೈಟ್ ಪಿಯು ಕಾಲೇಜಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.