ಸಾರಾಂಶ
ರೋಟರಿ ಹಿಲ್ಸ್ ಸೋಮವಾರಪೇಟೆ ನೂತನ ಅಧ್ಯಕ್ಷರಾಗಿ ವೀಣಾ ಮನೋಹರ್ ಮತ್ತು ಕಾರ್ಯದರ್ಶಿಯಾಗಿ ಡಿ. ಪಿ. ರಮೇಶ್ ಆಯ್ಕೆಯಾದರು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ರೋಟರಿ ಹಿಲ್ಸ್ ಸೋಮವಾರಪೇಟೆ ನೂತನ ಅಧ್ಯಕ್ಷರಾಗಿ ವೀಣಾ ಮನೋಹರ್ ಹಾಗು ಕಾರ್ಯದರ್ಶಿಯಾಗಿ ಡಿ.ಪಿ.ರಮೇಶ್ ಆಯ್ಕೆಯಾದರು.ಮಂಗಳವಾರ ರಾತ್ರಿ ರೋಟರಿ ಭವನದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ 3181 ರೋಟರಿ ನಿಯೋಜಿತ ಜಿಲ್ಲಾ ರಾಜ್ಯಪಾಲ ಸತೀಶ್ ಬೋಳಾರ್ ನೂತನ ಆಡಳಿತ ಮಂಡಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ಸರ್ಕಾರ ಮಾಡಬೇಕಾದ ಕೆಲಸಗಳನ್ನು ರೋಟರಿ ಸಂಸ್ಥೆ ಮಾಡುತ್ತಿದೆ. ಸಮಾಜಸೇವೆಯಲ್ಲಿ ರೋಟರಿ ಸದಸ್ಯರ ನಿಸ್ವಾರ್ಥ ಸೇವೆ ಶ್ಲಾಘನೀಯವಾದುದು. ಸಮಾಜಸೇವಕರು ಈ ದೇಶದ ಸಂಪತ್ತಾಗಿದ್ದು ಸಮಾಜವೂ ಅವರನ್ನು ಗೌರವಿಸುತ್ತದೆ ಎಂದು ಹೇಳಿದರು. ಪ್ರಪಂಚದಲ್ಲಿ ಪೊಲೀಯೋ ನಿರ್ಮೂಲನೆಯಲ್ಲಿ ರೋಟರಿ ಸಂಸ್ಥೆಯ ಕೊಡುಗೆ ಅಪಾರವಾದುದು ಎಂದು ಹೇಳಿದರು.ರೋಟರಿ ಮಾಜಿ ಅಧ್ಯಕ್ಷ ಜೆ.ಕೆ.ಪೊನ್ನಪ್ಪ, ಕಾರ್ಯದರ್ಶಿ ಬಿದ್ದಪ್ಪ, ಸಹಾಯಕ ರಾಜ್ಯಪಾಲರಾದ ಹರಿ ಎ ಶೆಟ್ಟಿ, ಉಲ್ಲಾಸ್ ಕೃಷ್ಣ, ವಲಯ ಸೇನಾನಿಗಳಾದ ಪ್ರಕಾಶ್ ಕುಮಾರ್, ಡಾ.ರಾಕೇಶ್ ಪಟೇಲ್ ಇದ್ದರು.