ಕ್ರೀಡಾ ಸಾಧಕಿ ರಿಂಕಾ ಚೌದರಿಗೆ ರೋಟರಿ ಗೌರವ

| Published : Sep 13 2024, 01:34 AM IST

ಸಾರಾಂಶ

ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3182 ಜಿಲ್ಲಾ ಗವರ್ನರ್‌ ದೇವಾನಂದ್‌ ರೋಟರಿ ಜಿಲ್ಲಾ ಪ್ರಥಮ ಮಹಿಳೆ ರೇಖಾ ದೇವಾನಂದ್‌ ಕ್ರೀಡಾ ಪ್ರತಿಭೆಯನ್ನು ಅಭಿನಂದಿಸಿದರು. ವಲಯ 5 ರ ಸಹಾಯಕ ಗವರ್ನರ್‌ ಅನಿಲ್‌ ಡೇಸಾ ಕ್ಲಬ್‌ ಪತ್ರಿಕೆ ಮಾಣಿಕ್ಯವನ್ನು ಬಿಡುಗಡೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಕಾಪು

ಇಲ್ಲಿನ ಮಣಿಪುರ ಗ್ರಾಮದ ಸಂಯುಕ್ತ ಪ್ರೌಢ ಶಾಲಾ 8ನೇ ತರಗತಿ ವಿದ್ಯಾರ್ಥಿನಿ ರಿಂಕಾ ಚೌದರಿ ಎಚ್‌.ಸಿ.ಎಲ್. ಕಂಪೆನಿಯವರು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಕ್ರೀಡಾ ಸ್ಫರ್ಧೆಯಲ್ಲಿ ಲಾಂಗ್ ಜಂಪ್ ವಿಭಾಗದಲ್ಲಿ ಪ್ರತಿನಿಧಿಸಿ ತಾಲೂಕು ಮಟ್ಟದಿಂದ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದವರೆಗೂ ಅರ್ಹತೆಯನ್ನು ಗಳಿಸಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿದ್ದಾಳೆ. ಅಲ್ಲದೇ ಸಾರ್ವಜನಿಕ ಶಿಕ್ಷಣ ಇಲಾಖೆ ಏರ್ಪಡಿಸಿದ ಕ್ರೀಡಾಕೂಟದಲ್ಲಿಯೂ ರಾಜ್ಯಮಟ್ಟದಲ್ಲಿ ನಾಲ್ಕನೇ ಸ್ಥಾನಗಳಿಸಿದ್ದಾಳೆ.

ಈ ಉದಯೋನ್ಮುಖ ಕ್ರೀಡಾ ಸಾಧಕಿಯನ್ನು ಮಂಗಳವಾರ ಮಣಿಪುರ ರೋಟರಿ ಭವನದಲ್ಲಿ ಜರುಗಿದ ಜಿಲ್ಲಾ ಗವರ್ನರ್ ಅವರ ಅಧಿಕೃತ ಸಂದರ್ಶನದ ಸಾರ್ವಜನಿಕ ಸಮಾರಂಭದಲ್ಲಿ ಕ್ರೀಡಾಪಟುವಿನ ಮಾತಾಪಿತರ ಸಮ್ಮುಖದಲ್ಲಿ ರೋಟರಿ ಗೌರವ ನೀಡಿ ಸನ್ಮಾನಿಸಲಾಯಿತು.

ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3182 ಇದರ ಜಿಲ್ಲಾ ಗವರ್ನರ್ ದೇವಾನಂದ್, ರೋಟರಿ ಜಿಲ್ಲಾ ಪ್ರಥಮ ಮಹಿಳೆ ರೇಖಾ ದೇವಾನಂದ್ ಕ್ರೀಡಾ ಪ್ರತಿಭೆಯನ್ನು ಅಭಿನಂದಿಸಿ ಭವಿಷ್ಯದಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವ ಕ್ರೀಡಾಪಟುವಾಗಿ ಬೆಳೆಯಲಿ ಎಂದು ಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ರೋಟರಿ ಅಧ್ಯಕ್ಷ ಸುಧೀರ್ ಕುಮಾರ್ ವಹಿಸಿ ಸ್ವಾಗತಿಸಿದರು. ವಲಯ 5ರ ಸಹಾಯಕ ಗವರ್ನರ್ ಅನಿಲ್ ಡೇಸಾ ಕ್ಲಬ್ ಪತ್ರಿಕೆ ‘ಮಾಣಿಕ್ಯ’ವನ್ನು ಬಿಡುಗಡೆಗೊಳಿಸಿದರು. ವಲಯ ಸೇನಾನಿ ಜೋನ್ ಸಿಕ್ವೇರಾ ಇದ್ದರು. ಕಾರ್ಯದರ್ಶಿ ಗುರುರಾಜ್ ಭಟ್ ವರದಿ ಓದಿದರು. ಸ್ಥಾಪಕ ಅಧ್ಯಕ್ಷ ಜೋಸೆಫ್ ಕುಂದರ್, ವಿನ್ಸೆಂಟ್ ಡಿಸೋಜ, ಸ್ಟ್ಯಾನಿ ಡಿಸೋಜ, ರಾಜೇಶ್ ನಾಯ್ಕ್ ಪರಿಚಯಿಸಿದರು. ಚಂದ್ರಶೇಖರ ಸಾಲಿಯಾನ ನಿರೂಪಿಸಿದರು. ಲಾರೆನ್ಸ್ ಸಿಕ್ವೇರಾ ಸಹಕರಿಸಿದರು. ಗುರುರಾಜ್ ಧನ್ಯವಾದವಿತ್ತರು.