ಸಾರಾಂಶ
ಮನುಕುಲದ ಸೇವೆಯಲ್ಲಿ ಮುಂಚೂಣಿಯಲ್ಲಿ ಸಂಸ್ಥೆ ರೋಟರಿ. ವಿಶ್ವಾದ್ಯಂತ 206 ದೇಶಗಳಲ್ಲಿ ಜಾತಿ, ಮತ, ಧರ್ಮ ಬೇಧವಿಲ್ಲದೇ ಸೇವಾ ಕಾರ್ಯಗಳನ್ನು ನಡೆಸುತ್ತಿದೆ ಎಂದು ನಿಯೋಜಿತ ಜಿಲ್ಲಾ ಗವರ್ನರ್ ರವಿಶಂಕರ್ ದಾಕೋಜು ಹೇಳಿದರು.
ಶಿವಮೊಗ್ಗ: ಮನುಕುಲದ ಸೇವೆಯಲ್ಲಿ ಮುಂಚೂಣಿಯಲ್ಲಿ ಸಂಸ್ಥೆ ರೋಟರಿ. ವಿಶ್ವಾದ್ಯಂತ 206 ದೇಶಗಳಲ್ಲಿ ಜಾತಿ, ಮತ, ಧರ್ಮ ಬೇಧವಿಲ್ಲದೇ ಸೇವಾ ಕಾರ್ಯಗಳನ್ನು ನಡೆಸುತ್ತಿದೆ ಎಂದು ನಿಯೋಜಿತ ಜಿಲ್ಲಾ ಗವರ್ನರ್ ರವಿಶಂಕರ್ ದಾಕೋಜು ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆ ಸಾರಥ್ಯದಲ್ಲಿ ನಗರದ ಶಿವಮೊಗ್ಗ ಅರೆಕಾನಟ್ ಮರ್ಚೆಂಟ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ರೋಟರಿ ದತ್ತಿನಿಧಿ ಮತ್ತು ಪೊಲಿಯೋ ಪ್ಲಸ್ ಕುರಿತ ಸಮೃದ್ಧಿ 2025 ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ರೋಟರಿ ಫೌಂಡೇಷನ್‌ಗೆ ನೀಡಿದ ದೇಣಿಗೆಯು ವಿಶ್ವದ ಮನುಕುಲದ ಸೇವೆಗೆ ವಿನಿಯೋಗಿಸಲಾಗುತ್ತದೆ. ಪಾರದರ್ಶಕತೆಯಿಂದ ಹಣದ ಉಪಯೋಗ ಮಾಡಲಾಗುತ್ತದೆ. ದೇಣಿಗೆ ನೀಡಿದ ಹಣ ಕೆಲ ವರ್ಷಗಳಲ್ಲಿ ಪುನಃ ಸಮುದಾಯ ಯೋಜನೆಗಳಿಗೆ ಸಿಗುತ್ತದೆ. ರೋಟರಿ ಫೌಂಡೇಷನ್‌ಗೆ ಕೋಟ್ಯಂತರ ರು. ದೇಣಿಗೆ ನೀಡಲಾಗಿದೆ ಎಂದು ತಿಳಿಸಿದರು.ಬಡತನದಲ್ಲಿರುವ ಸಮುದಾಯದ ಮಕ್ಕಳ ವಿದ್ಯಾಭ್ಯಾಸ ಮತ್ತು ಪರಿಸರ ಸಂರಕ್ಷಣೆ ಸೇರಿದಂತೆ ಸಮಾಜಮುಖಿ ಕಾರ್ಯಗಳಿಗೆ ದೇಣಿಗೆ ಬಳಸಲಾಗುತ್ತಿದೆ. ಸಿದ್ದಾರ್ಥ ಸ್ಮರಣಾರ್ಥ ದತ್ತಿನಿಧಿ ಸ್ಥಾಪಿಸಿ 45 ಲಕ್ಷ ರು. ಹೊಂದಿಸಲಾಗಿದೆ ಎಂದು ತಿಳಿಸಿದರು.
ನಿಯೋಜಿತ ಜಿಲ್ಲಾ ಗವರ್ನರ್ ರವಿಶಂಕರ್ ದಾಕೋಜು ಅವರು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, 100 ಕೋಟಿ ರು. ದೇಣಿಗೆ ನೀಡಿದ್ದು, ಪ್ರಸ್ತುತ ವಾಸದ ಮನೆ ಹೊಂದಿದ್ದೇನೆ. ಈವರೆಗೂ ಗಳಿಸಿದ ಹಣವನ್ನು ಉತ್ತಮ ಉದ್ದೇಶಕ್ಕೆ ನೀಡಿದ್ದೇನೆ ಎಂದು ತಿಳಿಸಿದರು.ರೋಟರಿ 3182ರ ಜಿಲ್ಲೆಯಿಂದ ಸಮುದಾಯ ಸೇವೆಗೆ 5 ಕೋಟಿ ರು. ನೀಡುವ ಸಂಕಲ್ಪ ಮಾಡಿದ್ದು, ಈವರೆಗೂ ಸಂಗ್ರಹವಾದ 1 ಕೋಟಿ ರು.ವರೆಗೆ ದೇಣಿಗೆ ನೀಡಿದ ರೋಟರಿ ಸದಸ್ಯರನ್ನು ಸನ್ಮಾನಿಸಲಾಯಿತು. ರೋಟರಿ ಜಿಲ್ಲೆ 3182ರ ವ್ಯಾಪ್ತಿಯ ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು ಮತ್ತು ಹಾಸನ ಭಾಗದ 700ಕ್ಕೂ ಹೆಚ್ಚು ಸದಸ್ಯರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಗವರ್ನರ್ ಕೆ.ಪಾಲಾಕ್ಷ, ಸಮಾವೇಶದ ಅಧ್ಯಕ್ಷ ಚಂದ್ರಹಾಸ್ ಪಿ ರಾಯ್ಕರ್, ಮಾಜಿ ಜಿಲ್ಲಾ ಗವರ್ನರ್ ಸಾಂಬಶಿವ ರಾವ್ ಪತಿಬಂದ್ಲ, ಡಾ. ನಾರಾಯಣ್, ಡಾ.ವಿನಯಕುಮಾರ್, ರಾಜಾರಾಮ್ ಭಟ್ ಬಿ., ಡಿ.ಎಸ್.ರವಿ, ಬಿ.ಎನ್.ರಮೇಶ್, ನಿಯೋಜಿತ ಜಿಲ್ಲಾ ಗವರ್ನರ್ ಬಿ.ಎಂ.ಭಟ್, ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ವಲಯ 11ರ ಸಹಾಯಕ ಗವರ್ನರ್ ಲಕ್ಷ್ಮಣಗೌಡ ಬಿ., ವಲಯ 10ರ ಸಹಾಯಕ ಗವರ್ನರ್ ಕೆ.ಪಿ.ಶೆಟ್ಟಿ, ಪ್ರಮೋಷನ್ ಚೇರ್ಮನ್ ಜಿ.ವಿಜಯಕುಮಾರ್, ರೇಖಾ ಪಾಲಾಕ್ಷ, ಪದ್ಮಿನಿ ವಸಂತ ಇದ್ದರು.;Resize=(128,128))
;Resize=(128,128))
;Resize=(128,128))