ಕಾಯಕವೇ ಕೈಲಾಸ ಎಂಬ ತತ್ವವನ್ನು ಅಳವಡಿಸಿಕೊಂಡು ಸಮಾಜಕ್ಕಾಗಿ ನಿರಂತರವಾಗಿ ದುಡಿಯುವವರಿಗೆ ರೋಟರಿಯಲ್ಲಿ ಸ್ಥಾನ ದೊರೆಯುತ್ತದೆ.

ಗದಗ: ವಿಶ್ವದ ಮೊದಲ ಹಾಗೂ ಅತಿದೊಡ್ಡ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾಗಿರುವ ರೋಟರಿ ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗೆ ತನ್ನ ಸೇವೆ ನೀಡುತ್ತಿದೆ ಎಂದು ರಾಜ್ಯ ಐಎಂಎ ನಿಕಟಪೂರ್ವ ಅಧ್ಯಕ್ಷ, ಹಿರಿಯ ರೋಟೇರಿಯನ್ ಡಾ. ರಾಜಶೇಖರ ಬಳ್ಳಾರಿ ತಿಳಿಸಿದರು.ನಗರದ ಉಷಾದೇವಿ ಕುಷ್ಟಗಿ ರೋಟರಿ ಕಮ್ಯುನಿಟಿ ಕೇರ್ ಸೆಂಟರ್‌ನಲ್ಲಿ ನಡೆದ ರೋಟರಿ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿ, ಕಾಯಕವೇ ಕೈಲಾಸ ಎಂಬ ತತ್ವವನ್ನು ಅಳವಡಿಸಿಕೊಂಡು ಸಮಾಜಕ್ಕಾಗಿ ನಿರಂತರವಾಗಿ ದುಡಿಯುವವರಿಗೆ ರೋಟರಿಯಲ್ಲಿ ಸ್ಥಾನ ದೊರೆಯುತ್ತದೆ ಎಂದರು.ರೋಟರಿ ಕ್ಲಬ್‌ನ ನೂತನ ಅಧ್ಯಕ್ಷ ಡಾ. ಪ್ರದೀಪ ಉಗಲಾಟ ಮಾತನಾಡಿ, ರೋಟರಿ ಸಂಸ್ಥೆಯು ವಿಶ್ವದ ಅತಿದೊಡ್ಡ ಸ್ವಯಂ ಸೇವಾ ಸಂಸ್ಥೆಯಾಗಿದ್ದು, ಸಮಾಜಸೇವೆ ಹಾಗೂ ಮಾನವೀಯ ಕಾರ್ಯಗಳ ಯೋಜನೆಯನ್ನು ರೂಪಿಸಿ ಅವುಗಳನ್ನು ಅನುಷ್ಠಾನಗೊಳಿಸಲು ಕ್ಲಬ್ ಮುಂದಾಗಲಿದೆ ಎಂದರು.ಪತ್ರಕರ್ತ ಶಿವಕುಮಾರ ಕುಷ್ಟಗಿ ಮಾತನಾಡಿ, ರೋಟರಿ ಕ್ಲಬ್ ಸೇವಾ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದಿದ್ದು, ಪ್ರಚಲಿತ ಸಮಸ್ಯೆಗಳ ಕುರಿತು ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸುತ್ತಿದೆ. ಪತ್ರಿಕಾ ರಂಗವು ಸಮಾಜವನ್ನು ತಿದ್ದಿ ತೀಡುವ ಸಾಧನವಾಗಿದೆ ಎಂದರು.ಈ ವೇಳೆ ಪತ್ರಕರ್ತ ಶಿವಕುಮಾರ ಕುಷ್ಟಗಿ, ಲೆಕ್ಕ ಪರಿಶೋಧಕ ಆರ್.ಆರ್. ಜೋಶಿ, ವೈದ್ಯ ಡಾ. ಶ್ರೀಕಾಂತ ಕಾಟೇವಾಲ್ ಅವರನ್ನು ಪತ್ರಿಕಾ, ವೈದ್ಯರ ಹಾಗೂ ಲೆಕ್ಕಪರಿಶೋಧಕರ ದಿನಾಚರಣೆ ಅಂಗವಾಗಿ ಸನ್ಮಾನಿಸಿ ಗೌರವಿಸಲಾಯಿತು. ರೋಟರಿ ಕ್ಲಬ್‌ನ ನೂತನ ಪದಾಧಿಕಾರಿಗಳು ಪ್ರಮಾಣವಚನ ಸ್ವೀಕರಿಸಿದರು.

ಅಸಿಸ್ಟಂಟ್ ಗವರ್ನರ ಶ್ರೀಧರಗೌಡ ಧರ್ಮಾಯತ, ಮಹೇಶ ಹಿಂಡಿ, ಡಾ. ಯು.ಬಿ. ಪುರದ, ಡಾ. ಆರ್.ಬಿ. ಉಪ್ಪಿನ, ಅಶೋಕ ಅಕ್ಕಿ, ಮಹಾಂತೇಶ ಬಾತಾಖಾನಿ, ವಿಶ್ವನಾಥ ಯಳಮಲಿ, ಶಿವಾಚಾರ್ಯ ಹೊಸಳ್ಳಿಮಠ, ರಾಜು ಕುರಡಗಿ, ಮಂಜುನಾಥ ಚನ್ನಪ್ಪನವರ, ಶಶಿಧರ ದಿಂಡೂರ, ಅಶ್ವಿನಿ ಜಗತಾಪ, ಶಿವಲೀಲಾ ಅಕ್ಕಿ, ಜಯಶ್ರೀ ಉಗಲಾಟ, ಸಂಧ್ಯಾ ಕೋಟಿ, ವೀಣಾ ಕಾವೇರಿ, ನೀಲಾಂಬಿಕಾ ಉಗಲಾಟದ, ಸುಶೀಲಾ ಕೋಟಿ, ಜ್ಯೋತಿ ದಾನಪ್ಪಗೌಡ್ರ, ಪೂಜಾ ಭೂಮಾ, ಪುಷ್ಪಾ ಬಂಡಾರಿ, ಆಶಾ ಪಟ್ಟಣಶೆಟ್ಟಿ, ಶಾಂತಾ ಗೌಡರ, ಜಯಶ್ರೀ ಗುಗ್ಗರಿ, ಮಂಜುಳಾ ಅಕ್ಕಿ ಮುಂತಾದವರು ಇದ್ದರು.

ಡಾ. ಆರ್.ಜಿ. ಗಚ್ಚಿನಮಠ ಸ್ವಾಗತಿಸಿದರು. ಎಸ್‌.ವಿ. ಕುಂಬಾರ ವರದಿ ವಾಚಿಸಿದರು. ಡಾ. ಶೇಖರ ಸಜ್ಜನರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ ಅಕ್ಕಿ ಹಾಗೂ ಕಮಲಾಕ್ಷಿ ಅಂಗಡಿ ಪರಿಚಯಿಸಿದರು. ಶ್ರೀಧರ ಸುಲ್ತಾನಪೂರ ಹಾಗೂ ಬಾಲಕೃಷ್ಣ ಕಾಮತ ನಿರೂಪಿಸಿದರು. ಅಕ್ಷಯಶೆಟ್ಟಿ ವಂದಿಸಿದರು.