ರೋಟರಿಯ ಸಮಾಜ ಸೇವಾ ಕಾರ್ಯ ಪ್ರಶಂಸನೀಯ: ಡಾ. ವಿ.ಎಸ್‌.ವಿ. ಪ್ರಸಾದ

| Published : Jul 22 2024, 01:21 AM IST

ರೋಟರಿಯ ಸಮಾಜ ಸೇವಾ ಕಾರ್ಯ ಪ್ರಶಂಸನೀಯ: ಡಾ. ವಿ.ಎಸ್‌.ವಿ. ಪ್ರಸಾದ
Share this Article
  • FB
  • TW
  • Linkdin
  • Email

ಸಾರಾಂಶ

ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಎಲೈಟ್ನಿ ಸಮಾಜ ಸೇವಾ ಕಾರ್ಯಗಳು ಪ್ರಶಂಸನೀಯ ಹಾಗೂ ಇತರ ಸಂಘ- ಸಂಸ್ಥೆಗಳಿಗೆ ಮಾದರಿಯಾಗುವ ಕಾರ್ಯಗಳಾಗಿವೆ ಎಂದು ಸ್ವರ್ಣಾ ಗ್ರೂಫ್ ಆಫ್ ಕಂಪನೀಸ್‌ನ ಮುಖ್ಯಸ್ಥ ಡಾ. ವಿ.ಎಸ್.ವಿ. ಪ್ರಸಾದ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಎಲೈಟ್‍ನ ಸಮಾಜ ಸೇವಾ ಕಾರ್ಯಗಳು ಪ್ರಶಂಸನೀಯ ಹಾಗೂ ಇತರ ಸಂಘ- ಸಂಸ್ಥೆಗಳಿಗೆ ಮಾದರಿಯಾಗುವ ಕಾರ್ಯಗಳಾಗಿವೆ ಎಂದು ಸ್ವರ್ಣಾ ಗ್ರೂಫ್ ಆಫ್ ಕಂಪನೀಸ್‌ನ ಮುಖ್ಯಸ್ಥ ಡಾ. ವಿ.ಎಸ್.ವಿ. ಪ್ರಸಾದ ಹೇಳಿದರು.

ಸ್ಥಳೀಯ ವಿದ್ಯಾನಗರದ ತತ್ವದರ್ಶ ಆಸ್ಪತ್ರೆಯ ಬಳಿಯ ಖಾಸಗಿ ಹೊಟೇಲ್‌ನಲ್ಲಿ ಜರುಗಿದ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಎಲೈಟ್‍ನ ನೂತನ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಖಚಾಂಚಿಯ ಪದಗ್ರಹಣ ಸಮಾರಂಭದ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ನಾನು ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಎಲೈಟ್‍ನ ಕಾರ್ಯ ಚಟುವಟಿಕೆಗಳನ್ನು ಗಮನಿಸುತ್ತಲೇ ಬಂದಿದ್ದೇನೆ, ಈ ಕ್ಲಬ್ ಹುಬ್ಬಳ್ಳಿ-ಧಾರವಾಡ ಮಹಾನಗರವಷ್ಟೇ ಅಲ್ಲದೆ, ಧಾರವಾಡ ಜಿಲ್ಲೆಯ ವಿವಿಧೆಡೆ ಸದಾ ನಿರ್ಲಕ್ಷಿತ ಹಾಗೂ ಆರ್ಥಿಕ ಮತ್ತು ಸಾಮಾಜಿಕವಾಗಿ ತೀರಾ ಹಿಂದುಳಿದ ವ್ಯಕ್ತಿಗಳು ಮತ್ತು ಕ್ಷೇತ್ರಗಳನ್ನು ಗುರುತಿಸಿ ಅತೀ ಉಪಯುಕ್ತವಾಗುವ ಸೇವಾ ಕಾರ್ಯಗಳನ್ನು ಮಾಡುತ್ತ ಬಂದಿದೆ. ಇಂತಹ ಸೇವಾ ಕಾರ್ಯಗಳಿಂದಲೇ ಈ ಕ್ಲಬ್ ಸರ್ವರೂ ಗುರುತಿಸುವಂತಾಗಿದೆ, ಕ್ಲಬ್ ಸಮಾಜಮುಖಿ ಕಾರ್ಯಗಳಿಗೆ ತಾವೂ ಮುಂದಿನ ದಿನಗಳಲ್ಲಿ ಅಗತ್ಯ ಸಹಕಾರ, ನೆರವು ನೀಡಲು ಸಿದ್ಧವಿರುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಸ್ವರ್ಣಾ ಗ್ರೂಫ್ ಆಫ್ ಕಂಪನೀಸ್‌ನಿಂದ ದೇಣಿಗೆಯಾಗಿ ನೀಡಿದ 6 ಹೊಲಿಗೆ ಯಂತ್ರಗಳನ್ನು ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಎಲೈಟ್ ವತಿಯಿಂದ ಅರ್ಹಬಡ ಮಹಿಳೆಯರಿಗೆ ವಿತರಿಸಲಾಯಿತು.

ಈ ಮಧ್ಯೆ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಎಲೈಟ್‍ನ 2024-25ರ ಸಾಲಿನ ನೂತನ ಅಧ್ಯಕ್ಷೆಯಾಗಿ ರಿತು ಸರಾಫ್, ಕಾರ್ಯದರ್ಶಿಯಾಗಿ ರವಿ ಮೂಲಿಮನಿ ಹಾಗೂ ಖಜಾಂಚಿಯಾಗಿ ಅಮಿತ ಸರಾಫ್ ಪದಗ್ರಹಣ ಮೂಲಕ ಅಧಿಕಾರ ಸ್ವೀಕರಿಸಿದರು.ಡಾ. ಪ್ರಾಣೇಶ ಜಹಗೀದಾರ ನೂತನ ಅಧ್ಯಕ್ಷ, ಕಾರ್ಯದರ್ಶಿ ಖಚಾಂಚಿ ಅವರಿಗೆ ಪದಗ್ರಹಣ ಬೋಧಿಸಿ ಅಧಿಕಾರ ಹಸ್ತಾಂತರಿಸಿದರು. ದೀಪಕ ಪಾಟೀಲ, ಶಂಕರ ಹಿರೇಮಠ, ನಿರ್ಗಮಿತ ಅಧ್ಯಕ್ಷ ಅನೀಶ ಖೋಜೆ, ವೀರು ಉಪ್ಪಿನ, ರೋಟೆರಿಯನ್‍ಗಳಾದ ಅವಿನಾಶ ಕುರ್ತುಕೊಟಿ, ಅರು ಗೌತಮಿ, ದೇವಕಿ ಜಿ, ಡಾ. ಎಚ್.ವಿ. ಬೆಳಗಲಿ, ಶರತ್ ಜಾದವ, ಬಿನಿತಾ ಮೂಲಿಮನಿ, ಕೆ.ಬಿ. ಶಿವಕುಮಾರ, ಪ್ರಶಾಂತ ಕುರಹಟ್ಟಿ, ಶೋಭಾ ಜಿಗಳೂರು, ರೇಖಾ ನಾಯ್ಕ, ಹರ್ಷಕುಮಾರ ಶೆಟ್ಟಿ, ರವಿ ಜಿಗಳೂರು ಪ್ರದೀಪ ಹಬೀಬ, ಮೋಹನ ಘೋಡಕೆ ಸೇರಿದಂತೆ ಹಲವರಿದ್ದರು.