10 ವರ್ಷಗಳಲ್ಲಿ ₹೧೦೦ ಕೋಟಿ ವ್ಯವಹಾರ: ಕೃಷ್ಣಮೂರ್ತಿ

| Published : Jul 06 2025, 01:48 AM IST

10 ವರ್ಷಗಳಲ್ಲಿ ₹೧೦೦ ಕೋಟಿ ವ್ಯವಹಾರ: ಕೃಷ್ಣಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಹಕರ ಸಹಕಾರದಿಂದ ಹಳೇ ಪಿ.ಬಿ. ರಸ್ತೆಯ ಕೆನರಾ ಬ್ಯಾಂಕ್ ಶಾಖೆಯು ಕಳೆದ 10 ವರ್ಷಗಳಲ್ಲಿ ₹೧೦೦ ಕೋಟಿ ವ್ಯವಹಾರ ನಡೆಸುವ ಮೂಲಕ ವಿಶಿಷ್ಟ ಸಾಧನೆ ಮಾಡಿದೆ ಎಂದು ನಗರದ ಕೆನರಾ ಬ್ಯಾಂಕ್‌ ಮುಖ್ಯ ಶಾಖೆ ವಿಭಾಗೀಯ ವ್ಯವಸ್ಥಾಪಕ ಕೆ.ಕೃಷ್ಣಮೂರ್ತಿ ಹೇಳಿದ್ದಾರೆ.

ಹರಿಹರ: ಗ್ರಾಹಕರ ಸಹಕಾರದಿಂದ ಹಳೇ ಪಿ.ಬಿ. ರಸ್ತೆಯ ಕೆನರಾ ಬ್ಯಾಂಕ್ ಶಾಖೆಯು ಕಳೆದ 10 ವರ್ಷಗಳಲ್ಲಿ ₹೧೦೦ ಕೋಟಿ ವ್ಯವಹಾರ ನಡೆಸುವ ಮೂಲಕ ವಿಶಿಷ್ಟ ಸಾಧನೆ ಮಾಡಿದೆ ಎಂದು ನಗರದ ಕೆನರಾ ಬ್ಯಾಂಕ್‌ ಮುಖ್ಯ ಶಾಖೆ ವಿಭಾಗೀಯ ವ್ಯವಸ್ಥಾಪಕ ಕೆ.ಕೃಷ್ಣಮೂರ್ತಿ ಹೇಳಿದರು.

ಕೆನರಾ ಬ್ಯಾಂಕ್ ಶಾಖೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬ್ಯಾಂಕಿನ ೧೨೦ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಪ್ರಮುಖ 3 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದಾಗಿರುವ ಕೆನರಾ ಬ್ಯಾಂಕ್, ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ. ಅವರ ಅಭೂತಪೂರ್ವ ಸಹಕಾರದಿಂದ ಬ್ಯಾಂಕ್ ಹೆಮ್ಮರವಾಗಿ ಬೆಳೆದಿದೆ. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ ಎಂದರು.

ಬ್ಯಾಂಕಿನ ದಾವಣಗೆರೆಯ (ಆರ್‌ಎಎಚ್) ವಿಭಾಗೀಯ ವ್ಯವಸ್ಥಾಪಕ ಶ್ರೀನಾಗ್ ವಿ. ಮಾತನಾಡಿ, ₹೨೫ ಲಕ್ಷದವರೆಗಿನ ಗೃಹಸಾಲ, ಕೃಷಿಕರಿಗೆ ವಾಹನ ಖರೀದಿ ಸಾಲ ಸೌಲಭ್ಯ ಮತ್ತಿತರೆ ವಿಷಯಗಳ ಕುರಿತು ಮಾಹಿತಿ ನೀಡಿದರು. ಗ್ರಾಹಕರೊಂದಿಗೆ ವಿಚಾರ ವಿನಿಮಯ ನಡೆಸಲಾಯಿತು. ಶಾಖೆ ವ್ಯವಸ್ಥಾಪಕ ಚನ್ನಕೇಶವ ವಿ.ಎನ್., ಸಿಬ್ಬಂದಿ ಮತ್ತು ಗ್ರಾಹಕರಿದ್ದರು.

- - -

-೫ಎಚ್‌ಆರ್‌ಆರ್02: