ಹಾಸನಾಂಬೆ ಹಾಗೂ ಶ್ರೀ ಸಿದ್ಧೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ದೇವಾಲಯಕ್ಕೆ ವಿವಿಧ ಮೂಲಗಳಿಂದ ಒಟ್ಟು 29.55 ಕೋಟಿ ರುಪಾಯಿ ಆದಾಯ ಬಂದಿದೆ ಎಂದು ಹಾಸನ ಉಪವಿಭಾಗಾಧಿಕಾರಿ ಹಾಗೂ ದೇವಾಲಯದ ಆಡಳಿತಾಧಿಕಾರಿ ಜಗದೀಶ್ ಗಂಗಣ್ಣನವರ್ ತಿಳಿಸಿದ್ದಾರೆ. 2025ರಲ್ಲಿ ದೇವಾಲಯಕ್ಕೆ 25.59 ಕೋಟಿ ರು. ಆದಾಯ ಬಂದಿತ್ತು. 1 ಸಾವಿರ ರು. ವಿಶೇಷ ದರ್ಶನ ಟಿಕೆಟ್ ಮಾರಾಟದಿಂದ 16.98 ಕೋಟಿ ರು., 300 ರು. ಟಿಕೆಟ್ನಿಂದ 7.24 ಕೋಟಿ ರು., ಲಾಡು ಮಾರಾಟದಿಂದ 1.35 ಕೋಟಿ ರು., ದೇಣಿಗೆ ಹಾಗೂ ಜಾಹೀರಾತುಗಳಿಂದಲೂ ಆದಾಯ ಬಂದಿದೆ.
ಹಾಸನ: ಈ ಬಾರಿಯ ಹಾಸನಾಂಬೆ ಹಾಗೂ ಶ್ರೀ ಸಿದ್ಧೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ದೇವಾಲಯಕ್ಕೆ ವಿವಿಧ ಮೂಲಗಳಿಂದ ಒಟ್ಟು 29.55 ಕೋಟಿ ರುಪಾಯಿ ಆದಾಯ ಬಂದಿದೆ ಎಂದು ಹಾಸನ ಉಪವಿಭಾಗಾಧಿಕಾರಿ ಹಾಗೂ ದೇವಾಲಯದ ಆಡಳಿತಾಧಿಕಾರಿ ಜಗದೀಶ್ ಗಂಗಣ್ಣನವರ್ ತಿಳಿಸಿದ್ದಾರೆ.
ನಗರದ ತೇರಾಪಂಥ್ ಭವನದಲ್ಲಿ ಗುರುವಾರ ನಡೆದ ಹುಂಡಿ ಏಣಿಕೆ ಮುಕ್ತಾಯಗೊಂಡ ನಂತರ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, 2025ರಲ್ಲಿ ದೇವಾಲಯಕ್ಕೆ 25.59 ಕೋಟಿ ರು. ಆದಾಯ ಬಂದಿತ್ತು. 1 ಸಾವಿರ ರು. ವಿಶೇಷ ದರ್ಶನ ಟಿಕೆಟ್ ಮಾರಾಟದಿಂದ 16.98 ಕೋಟಿ ರು., 300 ರು. ಟಿಕೆಟ್ನಿಂದ 7.24 ಕೋಟಿ ರು., ಲಾಡು ಮಾರಾಟದಿಂದ 1.35 ಕೋಟಿ ರು., ದೇಣಿಗೆ ಹಾಗೂ ಜಾಹೀರಾತುಗಳಿಂದಲೂ ಆದಾಯ ಬಂದಿದೆ. ಹುಂಡಿ ಎಣಿಕೆಯಿಂದ 3.71 ಕೋಟಿ ರು. ಸಂಗ್ರಹವಾಗಿದೆ. ಈ ಬಾರಿ ಹುಂಡಿಯಲ್ಲಿ 42.170 ಗ್ರಾಂ ಚಿನ್ನ ಹಾಗೂ 1 ಕೆ.ಜಿ. 255 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಮುಜರಾಯಿ ಇಲಾಖೆಯ ನಿರ್ದೇಶನದಂತೆ ದೇವಾಲಯದ ಆಭರಣಗಳನ್ನೂ ತೂಕದ ಆಧಾರದಲ್ಲಿ ದಾಖಲಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಾತ್ರೆಯ ಯಶಸ್ಸಿಗೆ ಸಹಕರಿಸಿದ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಪೌರಕಾರ್ಮಿಕರು, ವೈದ್ಯಕೀಯ ತಂಡಗಳು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಜಿಲ್ಲಾಡಳಿತದ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.ಈ ಬಾರಿ ಸುಮಾರು 30 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದು, ಐದು ಕಿಲೋಮೀಟರ್ವರೆಗೆ ಸರತಿ ಸಾಲು ವಿಸ್ತರಿಸಿತ್ತು. ಭಕ್ತರಿಗೆ ಕಾಯುವಿಕೆಯ ಬೇಸರವಾಗದಂತೆ 24 ಗಂಟೆಗಳ ಕಾಲ ಸುಗಮ ಸಂಗೀತ, ಭಕ್ತಿಗೀತೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಜಾತ್ರೆಯ ಯಶಸ್ವಿ ನಿರ್ವಹಣೆಗಾಗಿ 27 ವಿವಿಧ ಸಮಿತಿಗಳನ್ನು ರಚಿಸಲಾಗಿತ್ತು. ಕಂದಾಯ, ಪೊಲೀಸ್, ಆರೋಗ್ಯ, ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆಗಳ 8 ಸಾವಿರಕ್ಕೂ ಅಧಿಕ ಸಿಬ್ಬಂದಿ ಎರಡು ಪಾಳಿಗಳಲ್ಲಿ ಹಗಲು-ರಾತ್ರಿ ಕರ್ತವ್ಯ ನಿರ್ವಹಿಸಿದ್ದಾರೆ. 2,500 ಪೊಲೀಸ್ ಸಿಬ್ಬಂದಿ, 1 ಸಾವಿರ೦ ಹೋಂ ಗಾರ್ಡ್ಗಳು, 3 ಸಾವಿರ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಹಾಗೂ 700೦ ಆರೋಗ್ಯ ಸಿಬ್ಬಂದಿ ಸೇವೆ ಸಲ್ಲಿಸಿದ್ದಾರೆ. ಭಕ್ತರ ಆರೋಗ್ಯದ ದೃಷ್ಟಿಯಿಂದ ಐದು ಕ್ಲಿನಿಕ್ಗಳು ಹಾಗೂ 17 ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿತ್ತು. ಈ ಅವಧಿಯಲ್ಲಿ 50 ಸಾವಿರಕ್ಕೂ ಅಧಿಕ ಭಕ್ತರು ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.