ಶಾಸಕರಾಗಿದ್ದ ಡಾ.ಶಾಮನೂರು ಶಿವಶಂಕರಪ್ಪ, ಹಾಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಸೂಚನೆಯಂತೆ ₹34 ಕೋಟಿ ವೆಚ್ಚದಲ್ಲಿ ದಾವಣಗೆರೆ- ಹರಿಹರದಲ್ಲಿ ಕೇವಲ 2 ವರ್ಷದಲ್ಲಿ ದೂಡಾ ವತಿಯಿಂದ ₹34 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳ ಕೈಗೊಳ್ಳಲಾಗಿದೆ. ಇದೇ ರೀತಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳಾಗುವಂತೆ ನೋಡಿಕೊಳ್ಳಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದ್ದಾರೆ.
- ದಾವಣಗೆರೆ-ಹರಿಹರ ನಗರಗಳಲ್ಲಿ ಉದ್ಯಾನಗಳು, ವೃತ್ತಗಳ ಅಭಿವೃದ್ಧಿಗೆ ಚಾಲನೆ ನೀಡಿದ ಸಂಸದೆ ಡಾ.ಪ್ರಭಾ - - -
ಕನ್ನಡಪ್ರಭ ವಾರ್ತೆ ದಾವಣಗೆರೆಶಾಸಕರಾಗಿದ್ದ ಡಾ.ಶಾಮನೂರು ಶಿವಶಂಕರಪ್ಪ, ಹಾಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಸೂಚನೆಯಂತೆ ₹34 ಕೋಟಿ ವೆಚ್ಚದಲ್ಲಿ ದಾವಣಗೆರೆ- ಹರಿಹರದಲ್ಲಿ ಕೇವಲ 2 ವರ್ಷದಲ್ಲಿ ದೂಡಾ ವತಿಯಿಂದ ₹34 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳ ಕೈಗೊಳ್ಳಲಾಗಿದೆ. ಇದೇ ರೀತಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳಾಗುವಂತೆ ನೋಡಿಕೊಳ್ಳಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.
ಹರಿಹರದ ನಗರದಲ್ಲಿ ಭಾನುವಾರ ದಾವಣಗೆರೆ- ಹರಿಹರ ನಗರಗಳಲ್ಲಿ ವಿವಿಧ ಉದ್ಯಾನವನಗಳು ಮತ್ತು ವೃತ್ತಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಈ ಹಿಂದೆ ದೂಡಾದಿಂದ ಕೆಲಸಗಳಾಗಿದ್ದರೂ, 2 ವರ್ಷದಲ್ಲಿ ದಿನೇಶ ಕೆ. ಶೆಟ್ಟಿ ದೂಡಾ ಅಧ್ಯಕ್ಷರಾದ ನಂತರ ಸಾಕಷ್ಟು ಕೆಲಸಗಳಾಗಿವೆ ಎಂದರು.ಅವಳಿ ನಗರದ ಕಾಮಗಾರಿಗಳು ಸಂಪೂರ್ಣ ಗುಣಮಟ್ಟದಿಂದ ಕೂಡಿರಬೇಕು. ಜಿಲ್ಲಾ ಕೇಂದ್ರದಲ್ಲಿ 2013ರಿಂದ ಪಾರ್ಕ್‌ಗಳು, ಕುಂದುವಾಡ ಕೆರೆ ಏರಿಯ ಮೇರೆ ಪರಿಸರ ಸಂರಕ್ಷಣೆ ಜೊತೆಗೆ ಸಾರ್ವಜನಿಕರಿಗೆ ಆರೋಗ್ಯಕರ ವಾತಾವರಣ ಸೃಷ್ಟಿಸಲಾಗಿದೆ. ಪಾರ್ಕ್‌ಗಳಲ್ಲಿ ಅಳವಡಿಸಿದ ಕ್ರೀಡೋಪಕರಣಗಳನ್ನು ನಿರ್ವಹಿಸಲು ಕ್ರಮ ಕೈಗೊಳ್ಳಬೇಕು. ಪಾರ್ಕ್‌ಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.
ವಿಧಾನ ಪರಿಷತ್ತು ಸದಸ್ಯ ಕೆ.ಅಬ್ದುಲ್ ಜಬ್ಬಾರ್ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ ಹಿಂದೆಲ್ಲಾ ಸಂಸದರು ಇದ್ದರೂ, ಇಲ್ಲದಂತಿದ್ದರು. ಆದರೆ, ಡಾ.ಪ್ರಭಾ ಮಲ್ಲಿಕಾರ್ಜುನ ಸಂಸದರಾಗಿ ಆಯ್ಕೆಯಾದ ಬಳಿಕ ಲೋಕಸಭೆ ಒಳಗೆ ಮತ್ತು ಹೊರಗೂ ಧ್ವನಿ ಎತ್ತುವಂತೆ ಮಾಡಿದ್ದಾರೆ. ಇಂತಹ ಸಂಸದರನ್ನು ಕಂಡ ದಾವಣಗೆರೆ ಜನತೆ ಪುಣ್ಯ ಮಾಡಿದ್ದೇವೆ ಎಂದರು.ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಪ್ರಾಧಿಕಾರದಿಂದ ದಾವಣಗೆರೆ- ಹರಿಹರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಲಿಂಗೈಕ್ಯ ಡಾ.ಶಾಮನೂರು ಶಿವಶಂಕರಪ್ಪ ಮತ್ತು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ಮಾರ್ಗದರ್ಶನ ಕಾರಣವಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ದೂಡಾದಿಂದ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪ್ರಾಧಿಕಾರದ ಆಯುಕ್ತ ಹುಲ್ಮನಿ ತಿಮ್ಮಣ್ಣ, ಸದಸ್ಯರಾದ ವಾಣಿ ಬಕ್ಕೇಶ್ ನ್ಯಾಮತಿ, ಜಬ್ಬಾರ್ ಖಾನ್, ಹರಿಹರ ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್, ಮುಖಂಡರಾದ ಬಸಪ್ಪ, ರೇವಣಸಿದ್ದಪ್ಪ, ಹುಲಿಗೇಶ, ಶಂಕರ್ ಖಟಾವ್‌ಕರ್, ಜಯದೇವಪ್ಪ, ಸನಾವುಲ್ಲಾ, ಬ್ಲಾಕ್ ಅಧ್ಯಕ್ಷರಾದ ಹನುಮಂತಪ್ಪ, ಹಬೀದ್ ಅಲಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಗಳಾದ ಎ.ನಾಗರಾಜ್, ಜಿ.ಎಸ್. ಮಂಜುನಾಥ ಗಡಿಗುಡಾಳ, ಪ್ರಾಧಿಕಾರದ ಇ.ಇ.ಗಳಾದ ಪರಮೇಶ್ವರ ನಾಯ್ಕ, ಶ್ವೇತಾ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.- - -
-22ಕೆಡಿವಿಜಿ8, 9.ಜೆಪಿಜಿ:ಹರಿಹರದಲ್ಲಿ ಭಾನುವಾರ ದೂಡಾ ವತಿಯಿಂದ ಕೈಗೊಂಡ ₹215 ಲಕ್ಷ ವೆಚ್ಚದ ಕಾಮಗಾರಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಭೂಮಿಪೂಜೆ ನೆರವೇರಿಸಿದರು.