ರು. 37.40 ಲಕ್ಷ ಮೌಲ್ಯದ ಮರಳು ಜಪ್ತಿ

| Published : May 01 2024, 01:21 AM IST

ಸಾರಾಂಶ

1870 ಟ್ರ್ಯಾಕ್ಟರ್‌ನಷ್ಟು ಮರಳು ಸುಮಾರು 37.40 ಲಕ್ಷ ಮೌಲ್ಯದ ಮರಳನ್ನು ಜಪ್ತಿ ಮಾಡಲಾಗಿದ್ದು 15 ಜನರ ಮೇಲೆ 5 ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ: ಪಿಎಸ್‌ಐ ಮಹಿಬೂಬ ಅಲಿ

ಕನ್ನಡಪ್ರಭ ವಾರ್ತೆ ಚವಡಾಪುರ

ಅಫಜಲ್ಪುರ ತಾಲೂಕಿನ ಹಾವಳಗಾ ಹಾಗೂ ಶಿವಪುರ ಗ್ರಾಮಗಳಲ್ಲಿ ಭೀಮಾ ನದಿಯಿಂದ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳನ್ನು ಅಫಜಲ್ಪುರ ಪಿಎಸ್‌ಐ ಸಿಪಿಐ ಚನ್ನಯ್ಯ ಹಿರೇಮಠ, ಪಿಎಸ್‌ಐ ಮಹಿಬೂಬ ಅಲಿ ಹಾಗೂ ಸಿಬ್ಬದಿ ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ.

ಹಾವಳಗಾ ಹಾಗೂ ಶಿವಪುರ ಗ್ರಾಮಗಳ ಖಾಸಗಿ ಹಾಗೂ ಸರ್ಕಾರಿ ಜಾಗಗಳಲ್ಲಿ ಅಂದಾಜು 1870 ಟ್ರ್ಯಾಕ್ಟರ್‌ನಷ್ಟು ಮರಳು ಸುಮಾರು 37.40 ಲಕ್ಷ ಮೌಲ್ಯದ ಮರಳನ್ನು ಜಪ್ತಿ ಮಾಡಲಾಗಿದ್ದು 15 ಜನರ ಮೇಲೆ 5 ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪಿಎಸ್‌ಐ ಮಹಿಬೂಬ ಅಲಿ ತಿಳಿಸಿದ್ದಾರೆ. ತಾಲೂಕಿನಾದ್ಯಂತ ಭೀಮಾ ನದಿಯಿಂದ ಎಲ್ಲೇಲ್ಲಿ ಮರಳು ಧಂದೆ ನಡೆಯುತ್ತಿದೆ ಎಂದು ಖಚಿತ ಮಾಹಿತಿ ಪಡೆದು ಎಲ್ಲಾ ಕಡೆ ದಾಳಿ ಮಾಡಲಾಗುತ್ತಿದೆ. ಅಕ್ರಮ ಮರಳು ಧಂದೆಯಲ್ಲಿ ಯಾರೇ ಭಾಗಿಯಾಗಿದ್ದರು ಬಿಡುವುದಿಲ್ಲ, ಮರಳು ಜಪ್ತಿ ಮಾಡಿ ಮರಳು ಧಂದೆಯಲ್ಲಿ ಭಾಗಿಯಾಗಿದ್ದವರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.