ಸಾರಾಂಶ
ರಾಜ್ಯ ಸರ್ಕಾರದ ನಿರಂತರ ಪ್ರಯತ್ನದಿಂದ ಉತ್ತರ ಕನ್ನಡ ಜಿಲ್ಲೆ ರೈತರಿಗೆ ಸುಮಾರು ₹71 ಕೋಟಿ ವಿಮಾ ಮೊತ್ತ ಸಂದಾಯವಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
- ಉತ್ತರ ಕನ್ನಡ ಜಿಲ್ಲೆ ರೈತರಿಗೆ ತೋಟಗಾರಿಕಾ ಸಚಿವರಿಂದ ಶುಭ ಸುದ್ದಿ- - - ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯ ಸರ್ಕಾರದ ನಿರಂತರ ಪ್ರಯತ್ನದಿಂದ ಉತ್ತರ ಕನ್ನಡ ಜಿಲ್ಲೆ ರೈತರಿಗೆ ಸುಮಾರು ₹71 ಕೋಟಿ ವಿಮಾ ಮೊತ್ತ ಸಂದಾಯವಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.ಉತ್ತರ ಕನ್ನಡ ಜಿಲ್ಲೆ 195 ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಒಟ್ಟು 18,896 ಹೆಕ್ಟೇರ್ ಪ್ರದೇಶಕ್ಕೆ, 41,694 ಪ್ರಸ್ತಾವನೆಗಳಿಗೆ ವಿಮಾ ಚಂದಾದಾರಿಕೆ ಆಗಿದೆ. ರೈತರು ₹12.03 ಕೋಟಿಗಳ ಪ್ರೀಮಿಯಂ ಹಣ ಭರಿಸಿದ್ದರು. ಆದರೆ, ಕ್ಷೇಮಾ ಜನರಲ್ ಇನ್ಸೂರೆನ್ಸ್ ಕಂಪನಿಯವರು 136 ಗ್ರಾಮ ಪಂಚಾಯಿತಿಗಳಲ್ಲಿ ಹವಾಮಾನ ದತ್ತಾಂಶ ಕೊರತೆಯನ್ನು ತೋರಿಸಿ, ಕೇವಲ 59 ಗ್ರಾಮ ಪಂಚಾಯಿತಿಗಳಲ್ಲಿ 12,296 ಪ್ರಸ್ತಾವನೆಗಳಿಗೆ 2,846 ಹೆಕ್ಟೇರ್ ಪ್ರದೇಶಕ್ಕೆ ಮಾತ್ರ ₹11.62 ಕೋಟಿ ವಿಮಾ ಮೊತ್ತ ಪಾವತಿಸಿ ಕೈ ಚೆಲ್ಲಿದ್ದರು ಎಂದಿದ್ದಾರೆ.
ವಿಮಾ ಕಂಪನಿಯವರ ಸಮರ್ಥ ಸಮೀಕ್ಷೆಯಿಂದ ರೈತರು ತೊಂದರೆಗೆ ಸಿಲುಕಿದ್ದಾರೆ ಎಂದು ತೋಟಗಾರಿಕಾ ಅಧಿಕಾರಿಗಳು ಗಮನಕ್ಕೆ ಬಂದಿದ್ದರು. ರೈತರಿಗೆ ನ್ಯಾಯ ಒದಗಿಸಲು ರಾಜ್ಯ ಸರ್ಕಾರವು ನಿರಂತರ ಪ್ರಯತ್ನ ಮಾಡಿತ್ತು. ಅನಿವಾರ್ಯ ಕಾರಣಗಳಿಂದ ಕೇಂದ್ರದ ಮೊರೆಹೋಗಿದೆ. ದಾಖಲೆಗಳ ಮೂಲಕ ಸ್ಪಷ್ಟೀಕರಣವನ್ನು ರಾಜ್ಯ ತೋಟಗಾರಿಕಾ ಇಲಾಖೆಯಿಂದ ಮಾಹಿತಿ ನೀಡಿದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಮಂತ್ರಾಲಯವು ವಿಮಾ ಕಂಪನಿಗೆ ಏಳು ದಿನಗಳಲ್ಲಿ ಬಾಕಿ ಇರುವ 136 ಗ್ರಾಮ ಪಂಚಾಯಿತಿಗಳಿಗೆ ವಿಮಾ ಪರಿಹಾರ ರೈತರ ಖಾತೆಗೆ ಜಮಾ ಮಾಡಲು ಸೂಚಿಸಿದೆ ಎಂದು ಹೇಳಿದ್ದಾರೆ.ಈ ಆದೇಶದಿಂದ ಶೀಘ್ರದಲ್ಲಿಯೇ ಅಂದಾಜು ₹71 ಕೋಟಿ ವಿಮಾ ಪರಿಹಾರ ಮೊತ್ತವು ರೈತರ ಖಾತೆಗಳಿಗೆ ಜಮಾ ಆಗಲಿದೆ. ರೈತರೊಂದಿಗೆ ಕಾಂಗ್ರೆಸ್ ಸರ್ಕಾರ ಸದಾ ಜೊತೆಯಲ್ಲಿ ಇರಲಿದೆ ಎಂಬುದು ಇದರಿಂದ ಖಚಿತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
- - - -8ಕೆಡಿವಿಜಿ39: ಎಸ್.ಎಸ್.ಮಲ್ಲಿಕಾರ್ಜುನ್