ಅರೆಸ್ಸೆಸ್. ನಡೆಯುವುದು ಯಾರದ್ದೋ ದುಡ್ಡಿನಿಂದಲ್ಲ, ಅದು ಸಂಘದ ಪ್ರತಿಯೊಬ್ಬ ಸ್ವಯಂಸೇವಕರು ನೀಡಿದ ಗುರುದಕ್ಷಿಣಿಯಿಂದ ನಡೆಯುತ್ತದೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಹುಣಸಗಿ
ಅರೆಸ್ಸೆಸ್. ನಡೆಯುವುದು ಯಾರದ್ದೋ ದುಡ್ಡಿನಿಂದಲ್ಲ, ಅದು ಸಂಘದ ಪ್ರತಿಯೊಬ್ಬ ಸ್ವಯಂಸೇವಕರು ನೀಡಿದ ಗುರುದಕ್ಷಿಣಿಯಿಂದ ನಡೆಯುತ್ತದೆ ಎಂದು ಹೇಳಿದರು.ವಿಜಯದಶಮಿ ಉತ್ಸವದ ಅಂಗವಾಗಿ ಹುಣಸಗಿ ಪಟ್ಟಣದ ಯುಕೆಪಿ ಕ್ಯಾಂಪಿನ ನೀಲಕಂಠೇಶ್ವರ ದೇವಸ್ಥಾನದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಜಯದಶಮಿ ಹಬ್ಬವು ಧರ್ಮ ಮತ್ತು ವಿಜಯದ ಸಂಕೇತವಾಗಿದ್ದು, ಧರ್ಮ ರಕ್ಷಣೆಗಾಗಿ ತಾಯಿ ದುರ್ಗಾಮಾತೆಯಾಗಿ ಅವತರಿಸಿದ್ದು ಪುರಾಣಗಳ ಮೂಲಕ ತಿಳಿದು ಬರುತ್ತದೆ ಎಂದರು.
ಶತಮಾನಗಳಿಂದಲೂ ಭಾರತದ ಮೇಲೆ ದಾಳಿ ನಡೆಯುತ್ತಾ ಬಂದಿದ್ದರೂ ಕೂಡಾ ಭಾರತ ತನ್ನ ಸಂಸ್ಕೃತಿಯ ಮೂಲಕ ಮತ್ತೆ ತಲೆ ಎತ್ತಿ ನಿಲ್ಲುತ್ತಾ ಬಂದಿದೆ. ಆದ್ದರಿಂದ ಹಿಂದಿನ ಇತಿಹಾಸವನ್ನು ನಮ್ಮ ಯುವಕರು ತಿಳಿಸಿಕೊಳ್ಳಬೇಕು. ಎಲ್ಲ ಭಾರತೀಯರಿಗೂ ಭಾರತ ಮಾತೆಯೇ ತಾಯಿಯಾಗಿದ್ದಾಳೆ. ಆ ತಾಯಿಯ ಮಕ್ಕಳು ಎಲ್ಲರೂ ಸಮಾನವಾಗಿದ್ದು, ಈ ದೇಶ ಪ್ರೇಮ ಮೂಡಿಸುವ ಕಾರ್ಯ ಸಂಘದಿಂದ ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ ಎಂದರು.ನಿತ್ಯ ಶಾಖೆಯಲ್ಲಿ ನಡೆಯುವುದು ಭಾರತ ಮಾತೆಯ ಗುಣಗಾನ. ದೇಶದ ಉಳಿವಿಗಾಗಿ ಪ್ರತಿಯೊಬ್ಬ ಭಾರತೀಯರೂ ಸ್ವಚ್ಚ ಸುಂದರ ಮತ್ತು ಪ್ಲಾಷ್ಟಿಕ್ ಮುಕ್ತ ಜೀವನದತ್ತ ಹೆಜ್ಜೆ ಹಾಕಿದಾಗ ಮಾತ್ರ ದೇಶದ ನಾಗರಿಕರು ನೆಮ್ಮದಿಯಿಂದ ಇರಲು ಸಾಧ್ಯ ಎಂದು ಪಂಚ ಸೂತ್ರಗಳ ಕುರಿತು ತಿಳಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಭೀಮಪ್ಪ ನೆಲೋಗಿ ಮಾತನಾಡಿ, ಆರ್ಎಸ್ಎಸ್ ಸಂಘದ ಸಂಪರ್ಕಕ್ಕೆ ಬಂದವರೆಲ್ಲರೂ ಒಳ್ಳೆಯ ವಿಚಾರಗಳ ಅಳವಡಿಸಿಕೊಂಡು ಉತ್ತಮ ನಾಗರಿಕರಾಗುವುದರಲ್ಲಿ ಸಂದೇಹವೇ ಇಲ್ಲ. ಉದಾತ್ತ ವಿಚಾರ ದೇಶ ಪ್ರೇಮ ಮತ್ತು ಸಂಸ್ಕಾರ ಕಲಿಸುವ ಸಂಘದ ಕಾರ್ಯ ಶ್ಲಾಘನೀಯ ಎಂದರು.ಕಾರ್ಯಕ್ರಮ ಆರಂಭಕ್ಕೂ ಮುನ್ನ ಪಟ್ಟಣದ ಮಹಾಂತಸ್ವಾಮಿ ವೃತ್ತದಿಂದ ಯುಕೆಪಿ ಕ್ಯಾಂಪಿನ ನಿಲಕಂಠೇಶ್ವರ ದೇವಸ್ಥಾನದವರೆಗೂ ಪಥಸಂಚಲನ ನಡೆಯಿತು. ಮಾರ್ಗದಲ್ಲಿ ವರ್ತಕರು ಹೂ ಹಾಕಿದರು. ಪ್ರಮುಖ ವೃತ್ತಗಳಲ್ಲಿ ರಂಗೋಲಿ ಬಿಡಿಸಿ ನಾಯಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗಿತ್ತು.
ಪ್ರಾರ್ಥನೆಯ ಬಳಿಕ ಕಾರ್ಯಕ್ರಮ ಮುಕ್ತಾಯವಾಯಿತು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ, ಬಿಜೆಪಿ ಮಂಡಲ ಅಧ್ಯಕ್ಷ ಸಂಗಣ್ಣ ವೈಲಿ, ಮೇಲಪ್ಪ ಗುಳಗಿ, ವೀರಭದ್ರಗೌಡ ಹೊಸಮನಿ, ಪ್ರಾಣೇಶ ಕುಲಕರ್ಣಿ, ಬಸವರಾಜ ಮೇಲಿನಮನಿ ಸಹಿತ ಇತರರು ಇದ್ದರು.