ಬುದ್ದಿ, ಮನಸ್ಸು ಹಾಗೂ ಶರೀರವನ್ನು ಹಿಡಿತದಲ್ಲಿಟ್ಟಿಕೊಳ್ಳಲು ಅಷ್ಟಾಂಗ ಯೋಗ ಸಾಧಿಸಿದ ಅಪರೂಪದ ಯೋಗ ಸಾಧಕ ಆರ್‌ಎಸ್‌ಎಸ್‌ನ ಹಿರಿಯ ಪ್ರಚಾರಕ ದಿ,ಅಜಿತ್‌ಕುಮಾರ್ ಎಂದು ಆರ್‌ಎಸ್‌ಎಸ್‌ನ ಶಿವಮೊಗ್ಗ ವಿಭಾಗ ಕಾರ್ಯವಾಹ ಗಿರೀಶ್ ಕಾರಂತ್ ಹೇಳಿದರು.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಬುದ್ದಿ, ಮನಸ್ಸು ಹಾಗೂ ಶರೀರವನ್ನು ಹಿಡಿತದಲ್ಲಿಟ್ಟಿಕೊಳ್ಳಲು ಅಷ್ಟಾಂಗ ಯೋಗ ಸಾಧಿಸಿದ ಅಪರೂಪದ ಯೋಗ ಸಾಧಕ ಆರ್‌ಎಸ್‌ಎಸ್‌ನ ಹಿರಿಯ ಪ್ರಚಾರಕ ದಿ,ಅಜಿತ್‌ಕುಮಾರ್ ಎಂದು ಆರ್‌ಎಸ್‌ಎಸ್‌ನ ಶಿವಮೊಗ್ಗ ವಿಭಾಗ ಕಾರ್ಯವಾಹ ಗಿರೀಶ್ ಕಾರಂತ್ ಹೇಳಿದರು.ಸಂಘದ ಜೇಷ್ಠ ಪ್ರಚಾರಕರಾಗಿದ್ದ ದಿ,ಅಜಿತಕುಮಾರ್ ಸ್ಮರಣೆ ಹಿನ್ನೆಲೆಯಲ್ಲಿ ಸೇವಾದಿನ ಹಾಗೂ ಮತ್ತೊಬ್ಬಆರ್‌ಎಸ್‌ಎಸ್ ಪ್ರಚಾರಕ, ಮಾಜಿ ಪ್ರಧಾನಿ ವಾಜಪೇಯಿ ಅವರ 101ನೇ ಜನ್ಮ ದಿನ ಅಂಗವಾಗಿ ಪಟ್ಟಣದ ಶ್ರೀ ರಾಘವೇಂದ್ರ ಸೇವಾ ಟ್ರಸ್ಟ್, ಚೇತನಾ ಟ್ರಸ್ಟ್ ವತಿಯಿಂದ ಶಿವಮೊಗ್ಗದ ರೋಟರಿ ರಕ್ತ ಕೇಂದ್ರದಿಂದ ನಡೆದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಶಿಕ್ಷಣ,ಸಂಸ್ಕಾರ ಹಾಗೂ ಆರೋಗ್ಯವನ್ನು ಗಮನದಲಿಟ್ಟುಕೊಂಡು ಅಜಿತ್‌ಕುಮಾರ್ ಅವರು ಹಿಂದೂ ಸೇವಾ ಪ್ರತಿಷ್ಠಾನದ ಮೂಲಕ ಆಯ್ದ ಸೇವಾವೃತಿಗಳ ಮೂಲಕ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಲು ಯೋಗ ಪ್ರಾರಂಭಿಸದವರಲ್ಲಿ ಕನಾಟಕದಲ್ಲಿ ಅಜಿತರು ಮೊದಲಿಗರು ಎಂದರು,ಹಿಂದೂ ಸೇವಾ ಪ್ರತಿಷ್ಠಾನದ ಮೂಲಕ ಸೇವಾದಿನಗಳಲ್ಲಿ ಮಕ್ಕಳಿಗೆ ಮನೆಪಾಠ, ಬಾಲಗೋಕುಲ ಹಾಗೂ ಮಾತೃಮಂಡಳಿಯನ್ನು ಪ್ರಾರಂಭಿಸಿ ಮಕ್ಕಳಿಗೆ ಹಾಗೂ ಮಾತೆಯರಿಗೆ ಮತ್ತಷ್ಟು ಸಂಸ್ಕಾರ ನೀಡುವುದಕ್ಕೆ ಪ್ರೇರಣೆ ನೀಡಿ ಮನೆ ಮತಾಗಿದ್ದ ಅವರ ಸ್ಮರಣಾರ್ಥ ದಿನವೇ ಹಿಂದೂ ಸೇವಾ ಪ್ರತಿಷ್ಠಾನ ಇಡೀ ರಾಜ್ಯದಲ್ಲಿ ಎಲ್ಲಾ ಸೇವಾ ಬಸದಿ,ದೇವಾಲಯ ಹಾಗೂ ಪ್ರಮುಖ ಕೇಂದ್ರಗಳಲ್ಲಿ ಸೇವಾ ದಿನವನ್ನು ಆಚರಿಸುತ್ತ ಬಂದಿದೆ ಎಂದರು.
ಅಟಲ್ ಅವರ ಆಡಳಿತದಲ್ಲಿ ನದಿ ಜೋಡಣೆ ಯೋಜನೆ, ದೇಶದ ಎಲ್ಲಾ ದಿಕ್ಕುಗಳಿಗೂ ಹೆದ್ದಾರಿಗಳನ್ನು ನಿರ್ಮಾಣ ಮಾಡಿದ ಕೀರ್ತಿ ವಾಜಪೇಯಿ ಅವರಿಗೆ ಸಲ್ಲುತ್ತದೆ,ಇಂತಹ ಶ್ರೇಷ್ಠ ವ್ಯಕ್ತಿಗಳು ಆರ್‌ಎಸ್‌ಎಸ್‌ನಿಂದ ಸಂಸ್ಕಾರ ಪಡೆದ ಧೀಮಂತ ವ್ಯಕ್ತಿಗಳು ನಮ್ಮ ಸಂಘದ ಸ್ವಯಂಸೇವಕರಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಯಶಸ್ವಿಯಾದವರ ಸ್ಮರಣೆ ಮಾಡಿಕೊಳ್ಳುತ್ತಿರುವುದು ನಮ್ಮ ಹೆಮ್ಮೆ ಎಂದರು.105 ಬಾರಿ ರಕ್ತದಾನ:
ಆರ್‌ಎಸ್‌ಎಸ್‌ನ ಶಿವಮೊಗ್ಗ ವಿಭಾಗ ಕಾರ್ಯವಾಹ ಗಿರೀಶ್ ಕಾರಂತ್ ಮೂಲತಃ ಶಿವಮೊಗ್ಗದವರು, ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವ ಇವರು ತಮ್ಮ 18ನೇ ವಯಸ್ಸಿನಿಂದ ಇಲ್ಲಿಯವರೆವಿಗೂ 105 ಭಾರಿ ರಕ್ತದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.ಶ್ರೀ ರಾಘವೇಂದ್ರ ಸೇವಾ ಟ್ರಸ್ಟ್ ಅಧ್ಯಕ್ಷ ವಕೀಲರಾದ ಶ್ರೀನಿವಾಸ್‌ಮೂರ್ತಿ, ಶಿವಮೊಗ್ಗದ ರೋಟರಿ ರಕ್ತ ಕೇಂದ್ರದ ಪಿಆರ್‌ಓ ಸತೀಶ್, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ. ಬಿಜೆಪಿ ತಾಲೂಕು ಅಧ್ಯಕ್ಷ ನಾಗರಾಜ್, ಮಾಜಿ ಅಧ್ಯಕ್ಷ ಸುರೇಶ್, ಮುಖಂಡರಾದ ನೆಲಹೊನ್ನೆ ಮಂಜುನಾಥ್, ಎ.ಬಿ.ಹನುಮಂತಪ್ಪ, ಶಾಂತರಾಜ್ ಪಾಟೀಲ್, ಎಂ.ಆರ್.ಮಹೇಶ್, ಲಿಂಗರಾಜ್,ಶೀವಾನಂದ್, ಮಂಜುನಾಥ್, ಕುಬೇರಪ್ಪ, ಜಗದೀಶ್, ದೇವರಾಜ್ ನೆಲಹೊನ್ನೆ, ಪ್ರವೀಣ್‌ರಾಂಪುರ, ಬಿಸಾಟಿ ಸುರೇಶ್, ಶ್ರೀರಾಘವೇಂದ್ರ ಸೇವಾ ಟ್ರಸ್ಟ್ ಕಾರ್ಯದರ್ಶಿ ವಾದಿರಾಜ್, ಇತರರು ಇದ್ದರು.