ಆರೆಸ್ಸೆಸ್‌ ಕಾರ್ಯ ನಿಷೇಧ, ಖರ್ಗೆ ಪತ್ರ ಹಾಸ್ಯಾಸ್ಪದ: ಶಾಂತಗೌಡ ಪಾಟೀಲ

| Published : Oct 15 2025, 02:08 AM IST

ಆರೆಸ್ಸೆಸ್‌ ಕಾರ್ಯ ನಿಷೇಧ, ಖರ್ಗೆ ಪತ್ರ ಹಾಸ್ಯಾಸ್ಪದ: ಶಾಂತಗೌಡ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಜಾಗೆಗಳಲ್ಲಿ ಆರ್‌ಎಸ್ಎಸ್ ಕಾರ್ಯ ನಿಷೇಧಿಸಬೇಕು ಎಂದು ಸಚಿವ ಪ್ರಿಯಾಂಕ ಖರ್ಗೆ ಪತ್ರ ಸಿಎಂಗೆ ಬರೆದಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸರ್ಕಾರಿ ಜಾಗೆಗಳಲ್ಲಿ ಆರ್ಎಸ್ಎಸ್ ಕಾರ್ಯ ನಿಷೇಧಿಸಬೇಕು ಎಂದು ಸಚಿವ ಪ್ರಿಯಾಂಕ ಖರ್ಗೆ ಪತ್ರ ಸಿಎಂಗೆ ಬರೆದಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಚಿವ ಪ್ರಿಯಾಂಕ ಖರ್ಗೆಗೆ ಕುಕ್ಕರ್‌ ನಂತಹ ಬಾಂಬ್ ಬ್ಲಾಸ್ಟ್ ಆದಾಗ, ಹಾದಿಬೀದಿ ಹಿಡಿದು ವಿಧಾನಸೌಧದವರೆಗೆ ಪಾಕಿಸ್ತಾನದ ಪರ ಘೋಷಣೆ ಕೂಗಿದಾಗ ಅವರು ಹಾಗೆ ಕೂಗಲೇ ಇಲ್ಲ ಅನ್ನುವ ಗೋಸುಂಬೆ. ಪ್ಯಾಲೆಸ್ತೀನ್, ಲೆಬಿನಾನ್ ನಂತಹ ಉಗ್ರವಾದಿಗಳ ಭಾವಚಿತ್ರ ಹಾಗೂ ಧ್ವಜ ಹಿಡಿದು ಉಗ್ರವಾದಿಗಳ ಪರ ಘೋಷಣೆ ಕೂಗಿದಾಗ ಮುಖ್ಯಮಂತ್ರಿಗಳಿಗೆ ತನಿಖೆ ಮಾಡಿ ಎಂದು ಪತ್ರ ಬರೆಯೋಕೆ ಭಯ ಇದೆ. ದೇಶವಿರೋಧಿ ಹೇಳಿಕೆ ನೀಡುವ ಎಸ್ಡಿಪಿಐ ಬ್ಯಾನ್ ಮಾಡೋಕೆ ಅಸಮರ್ಥತೆ ಹಾಗೂ ಭಯ ಕಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಜಗತ್ತಿನ 156 ರಾಷ್ಟ್ರಗಳಲ್ಲಿ 3289 ಶಾಖೆ ಗಳೊಂದಿಗೆ ಆರ್ ಎಸ್ ಎಸ್ ಹಿಂದೂ ಸ್ವಯಂ ಸೇವಕ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಜಗತ್ತಿನ 7 ಖಂಡಗಳ ಪೈಕಿ 5 ಖಂಡಗಳಲ್ಲಿ ಸಂಘ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.

ದೇಶದಲ್ಲಿ 240 ಸಂಸದರು, 102 ರಾಜ್ಯ ಸಭಾ ಸದಸ್ಯರು, 1656 ಎಂಎಲ್ಎಗಳು, 165 ಎಂಎಲ್ಸಿಗಳನ್ನು ಹೊಂದಿರುವ ಸಂಘ ಪ್ರೇರಿತ ಬಿಜೆಪಿ 20 ರಾಜ್ಯಗಳಲ್ಲಿ ಜನರಿಂದ ಅಧಿಕಾರದಲ್ಲಿದೆ ಎಂದು ತಿಳಿಸಿದ್ದಾರೆ.

ತಮ್ಮ ಸ್ವಂತ ಜಿಲ್ಲೆಯಾದ ಕಲಬುಗಿರಿಯಲ್ಲಿ ಶೈಕ್ಷಣಿಕ ರಂಗದಲ್ಲಿ, ಮೂಲ ಸೌಕರ್ಯ, ಅಭಿವೃದ್ಧಿ ವಿಚಾರ ಸಂಪೂರ್ಣ ಹಿಂದಿರುವ ಜಿಲ್ಲೆಯಾಗಿದ್ದು, ರೈತರು ಬರಗಾಲ ಪರಿಹಾರಕ್ಕೆ ಬೀದಿ ಮೇಲೆ ಹೋರಾಟ ಮಾಡುತ್ತಿದ್ದಾರೆ. ಭಾಗ್ಯವತಿ ಅಗ್ಗಿಮಠ ಎನ್ನುವ ಗ್ರಂಥಪಾಲಕಿ 8 ತಿಂಗಳಿಂದ ಸಂಬಳ ಬಂದಿಲ್ಲ. ಕುಟುಂಬ ನಿರ್ವಹಣೆ ಆಗುತ್ತಿಲ್ಲ ಎಂದು ಮರಣಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭ್ರಷ್ಟ ವ್ಯವಸ್ಥೆಗೆ ಸಚಿವ ಪಾಂಚಾಳ ಎಂಬ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾನೂನು ಸುವ್ಯವಸ್ಥೆ ಜಿಲ್ಲೆಯಲ್ಲಿ ಸತ್ತು ಹೋಗಿದೆ ಎಂದು ಟೀಕಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿರಾಜು ನಾಯ್ಕರ್, ಸತ್ಯನಾರಾಯಣ ಹೇಮಾದ್ರಿ, ಮಲ್ಲಯ್ಯ ಮೂಗನೂರಮಠ, ಮಲ್ಲಿಕಾರ್ಜುನ ಕಾಂಬಳೆ ಮತ್ತಿತರರು ಇದ್ದರು.