ಸಾರಾಂಶ
ರಾಷ್ಟ್ರೀಯ ಸ್ವಯಂ ಸೇವಕ ಸಂಘವು ದೇಶಪ್ರೇಮ ರಾಷ್ಟ್ರಭಕ್ತಿಯ ಮೂಲಕ ದೇಶಕ್ಕಾಗಿ ಮಿಡಿಯುವ ಬೃಹತ್ ಸಂಘಟನೆಯಾಗಿ ಹಲವಾರು ಏಳು ಬೀಳುಗಳ ಮೂಲಕ ಶತಮಾನೋತ್ಸವವನ್ನು ಕಂಡು ಮುನ್ನಡೆಯುತ್ತಿದೆ ಎಂದು ದಕ್ಷಿಣ ಪ್ರಾಂತದ ವಕ್ತಾರ ಬೆಂಗಳೂರಿನ ಶ್ರೀಧರಸ್ವಾಮಿ ಹೇಳಿದರು.
ರಾಣಿಬೆನ್ನೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘವು ದೇಶಪ್ರೇಮ ರಾಷ್ಟ್ರಭಕ್ತಿಯ ಮೂಲಕ ದೇಶಕ್ಕಾಗಿ ಮಿಡಿಯುವ ಬೃಹತ್ ಸಂಘಟನೆಯಾಗಿ ಹಲವಾರು ಏಳು ಬೀಳುಗಳ ಮೂಲಕ ಶತಮಾನೋತ್ಸವವನ್ನು ಕಂಡು ಮುನ್ನಡೆಯುತ್ತಿದೆ ಎಂದು ದಕ್ಷಿಣ ಪ್ರಾಂತದ ವಕ್ತಾರ ಬೆಂಗಳೂರಿನ ಶ್ರೀಧರಸ್ವಾಮಿ ಹೇಳಿದರು. ಇಲ್ಲಿನ ನಗರಸಭೆ ಕ್ರೀಡಾಂಗಣದಲ್ಲಿ ಭಾನುವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಸಂಘದ ಶತಮಾನೋತ್ಸವ ಪ್ರಯುಕ್ತ ಜರುಗಿದ ಪಥಸಂಚಲನದ ನಂತರ ಏರ್ಪಡಿಸಲಾಗಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಹೆಡಗೇವಾರ ದೇಶದ ಹಿತದೃಷ್ಟಿಯಿಂದ ತಮ್ಮನ್ನು ತಾವು ತೊಡಗಿಸಿಕೊಂಡು ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಸಂಘ ಕಟ್ಟಿದರು. ಅದರ ಪರಿಣಾಮವಾಗಿ ಆರ್‌ಎಸ್‌ಎಸ್ ಈಗ ದೊಡ್ಡ ಶಕ್ತಿಯಾಗಿ ಬೆಳೆದಿದೆ ಎಂದರು.ಬಿಸಿಎಂ ಇಲಾಖೆಯ ನಿವೃತ್ತ ಅಧಿಕಾರಿ ಕೆಂಜೊಡೆಪ್ಪ ಭಜಂತ್ರಿ ಮಾತನಾಡಿ, ಆರ್‌ಎಸ್‌ಎಸ್ ಸಂಘವು ದೇಶಕ್ಕೆ ಅಪಾರವಾದ ಕೊಡುಗೆ ನೀಡಿದೆ. ಇಂತಹ ಶಿಸ್ತಿನ ಸಂಘದಿಂದ ದೇಶದ ಸಂಸ್ಕೃತಿ ಸಂಸ್ಕಾರ ಉಳಿದಿದೆ. ಮುಂದೆ ನಡೆಯುವ ಅನೇಕ ಭಾಗಗಳಲ್ಲಿ ಪಥ ಸಂಚಲನಕ್ಕೆ ಗ್ರಾಮೀಣ ಭಾಗದ ಯುವಕರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿ ದೇಶದ ಸೇವೆಗೆ ಮುಂದಾಗಬೇಕು ಎಂದರು.ಶ್ರೀಕಾಂತ ಹುಲ್ಮನಿ, ಯುವರಾಜ ಬ್ಯಾಡಗಿ, ಸುರೇಶ ಜ್ಯೋತಿ, ಶಿವಪ್ಪ ಗುರಿಕಾರ, ಕರಿಬಸಪ್ಪ ಕಡ್ಲಿಹಾಳ, ಮೈಲಪ್ಪ ದಾಸಪ್ಪನವರ, ಕುಮಾರ ಕಲಾಲ, ಲಕ್ಷ್ಮಣ ಸಾಲಿ, ಸಂತೋಷ ಡಿ., ಪ್ರಕಾಶ ಜೈನ್, ಹನುಮಂತಪ್ಪ ಮುಕ್ತೇನಹಳ್ಳಿ, ದತ್ತಾತ್ರೆಯ ನಾಡಿಗೇರ, ಜಯರಾಮಶೆಟ್ಟಿ ಉಪಸ್ಥಿತರಿದ್ದರು.;Resize=(128,128))
;Resize=(128,128))