ಆರ್‌ಎಸ್‌ಎಸ್‌ ಸಮಯಕ್ಕೆ ಬೆಲೆ ಕೊಡುವ ಸಂಘಟನೆ: ರವೀಂದ್ರಜಿ

| Published : Oct 12 2025, 01:01 AM IST

ಸಾರಾಂಶ

ಆರ್‌ಎಸ್ಎಸ್ ಸಂಘಟನೆ ಸಮಯಕ್ಕೆ ಬೆಲೆ ಕೊಡುವಂತದ್ದು. ಯಾವುದೇ ಪ್ರಚಾರ ಬಯಸುವುದಿಲ್ಲ. ಕೆಲಸ ಯಾರು ಮಾಡುತ್ತಿರಿ ಎಂದಾಗ ನಾನು ಮಾಡುತ್ತೇನೆ ಎನ್ನಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರದ ಪ್ರಾಂತದ ಕಾರ್ಯಕಾರಿಣಿ ಸದಸ್ಯ ರವೀಂದ್ರಜಿ ತಿಳಿಸಿದರು.

ಮುಂಡರಗಿ: ಹಿಂದುತ್ವ ಎನ್ನುವುದು ದೇಶದ ಹೆಸರು, ರಾಷ್ಟ್ರೀಯತೆಯ ಹೆಸರು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರದ ಪ್ರಾಂತದ ಕಾರ್ಯಕಾರಿಣಿ ಸದಸ್ಯ ರವೀಂದ್ರಜಿ ತಿಳಿಸಿದರು.

ಶನಿವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘ ತಾಲೂಕು ಸಂಘ ಶತಾಬ್ದಿ ಹಾಗೂ ವಿಜಯದಶಮಿ ಅಂಗವಾಗಿ ಆಯೋಜಿಸಿದ್ದ ಪಥಸಂಚಲನ ಕಾರ್ಯಕ್ರಮದ ನಂತರ ಜರುಗಿದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದರು. ಹಿಂದುತ್ವದ ಹೆಸರಿನಲ್ಲಿ ಸಂಘಟಿತರಾಗೋಣ. ಅನೇಕರು ಇಂಡಿಯಾ, ಭಾರತ ಶಬ್ದವನ್ನು ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುತ್ತಾರೆ. ಹಾಗೆ ನಾವು ಸಂಘದವರು ಹಿಂದು ಎನ್ನುವ ಶಬ್ದವನ್ನು ಬಳಸುತ್ತೇವೆ ಎಂದರು.

ಆರ್‌ಎಸ್ಎಸ್ ಸಂಘಟನೆ ಸಮಯಕ್ಕೆ ಬೆಲೆ ಕೊಡುವಂತದ್ದು. ಯಾವುದೇ ಪ್ರಚಾರ ಬಯಸುವುದಿಲ್ಲ. ಕೆಲಸ ಯಾರು ಮಾಡುತ್ತಿರಿ ಎಂದಾಗ ನಾನು ಮಾಡುತ್ತೇನೆ ಎನ್ನಬೇಕು. ಕೆಲಸ ಆದಮೇಲೆ ಯಾರು ಮಾಡಿದರು ಎಂದರೆ ನಾವು ಮಾಡಿದೆವು ಎನ್ನಬೇಕು ಎನ್ನುವುದನ್ನು ಸಂಘ ನಮಗೆ ಕಲಿಸಿಕೊಟ್ಟಿದೆ. ಒಳ್ಳೆಯದನ್ನು ಇತರರೆಲ್ಲರಿಗೂ ಹೇಳಬೇಕು ಎನ್ನುವುದನ್ನು ಸಂಘ ನಮಗೆ ಕಲಿಸಿದೆ. ಇಲ್ಲಿ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಎಲ್ಲರೂ ಸರಿಸಮಾನರು ಎನ್ನುವುದನ್ನು ಸಂಘ ಹೇಳಿಕೊಟ್ಟಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿಶ್ರಾಂತ ಅಧಿಕಾರಿ ಅವಿನಾಶಲಿಂಗ ಗೋಟಕಿಂಡಿ ಮಾತನಾಡಿ, ರಾಷ್ಟ್ರೀಯ ಸ್ವಯಂಸೇವಕ ಸಂಘ ನಾವು ಚಿಕ್ಕವರಿದ್ದಾಗಿನಿಂದಲೂ ಶಿಸ್ತಿಗೆ ಹೆಸರಾದ ಸಂಘಟನೆ. ಇಂದು ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆ ತಂದಿದೆ ಎಂದರು.

ತಾಲೂಕು ಸಂಘ ಚಾಲಕ ಸಂಜೀವ ರಿತ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದರಿಂದ ವರ್ಷಪೂರ್ತಿ ವಿವಿಧ ವಿಶೇಷ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ಎಂದರು.

ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಶ್ರೀನಿವಾಸ ಕಟ್ಟಿಮನಿ ಸ್ವಾಗತಿಸಿ, ಮಂಜುನಾಥ ಇಟಗಿ ನಿರೂಪಿಸಿ, ಪ್ರವೀಣ ಅಕ್ಕಸಾಲಿ ವಂದಿಸಿದರು.ಮುಂಡರಗಿಯಲ್ಲಿ ಆರ್‌ಎಸ್ಎಸ್ ಪಥಸಂಚಲನ

ಮುಂಡರಗಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಸಂಘ ಶತಾಬ್ಧಿ ವರ್ಷ ಹಾಗೂ ವಿಜಯದಶಮಿ ಅಂಗವಾಗಿ ಶನಿವಾರ ಪಟ್ಟಣದಲ್ಲಿ ಅದ್ಧೂರಿಯಾಗಿ ಪಥಸಂಚಲನ ಜರುಗಿತು.

ಪಟ್ಟಣದ ಅನ್ನದಾನೀಶ್ವರ ಮಠದಿಂದ ಪ್ರಾರಂಭವಾದ ಪಥಸಂಚಲನ ಕಡ್ಲಿಪೇಟೆ ರಸ್ತೆ, ಚಾವಡಿ ರಸ್ತೆ, ವಿಠಲ ಮಂದಿರ, ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಅಂಬಾಭವಾನಿ ದೇವಸ್ಥಾನ, ಹೊಸ ಬಸ್ ನಿಲ್ದಾಣ, ರಾಮೇನಹಳ್ಳಿ ಕ್ರಾಸ್, ಕಾಲೇಜು ರಸ್ತೆ, ಹೇಮರಡ್ಡಿ ಮಲ್ಲಮ್ಮ ವೃತ್ತ, ಭಜಂತ್ರಿ ಓಣಿ, ಸ್ವಾತಂತ್ರ ಸೇನಾನಿ ಭೀಮರಾವ್‌ ವೃತ್ತ ಸೇರಿದಂತೆ ವಿವಿಧೆಡೆ ಸಂಚರಿಸಿ ಬಳಿಕ ಜಗದ್ಗುರು ಅನ್ನದಾನೀಶ್ವರ ಕಾಲೇಜು ಮೈದಾನ ತಲುಪಿತು.

ಈ ವೇಳೆ ಎಸ್.ಆರ್. ರಿತ್ತಿ, ಶಾಸಕ ಡಾ. ಚಂದ್ರು ಲಮಾಣಿ, ಆನಂದಗೌಡ ಪಾಟೀಲ, ಕರಬಸಪ್ಪ ಹಂಚಿನಾಳ, ಎಸ್.ವಿ. ಪಾಟೀಲ, ಲಿಂಗರಾಜಗೌಡ ಪಾಟೀಲ, ಹೇಮಗಿರೀಶ ಹಾವಿನಾಳ, ಶ್ರೀನಿವಾಸ ಉಪ್ಪಿನಬೆಟಗೇರಿ, ಅವಿನಾಶ ಗೋಟಕಿಂಡಿ, ಮಂಜುನಾಥ ಇಟಗಿ, ನಾಗೇಶ ಹುಬ್ಬಳ್ಳಿ, ವೀರಣ್ಣ ತುಪ್ಪದ, ಗುರುರಾಜ ಜೋಶಿ, ಅನುಪಕುಮಾರ ಹಂಚಿನಾಳ, ರವಿಗೌಡ ಪಾಟೀಲ, ಪ್ರಶಾಂತ ಗುಡದಪ್ಪನವರ, ಶ್ರೀನಿವಾಸ ಕಟ್ಟೀಮನಿ, ಯಲ್ಲಪ್ಪ ಗಣಾಚಾರಿ, ಗುಡದೀರಪ್ಪ ಲಿಂಬಿಕಾಯಿ, ಪವನ ಮೇಟಿ, ಎಸ್.ಎಸ್. ಗಡ್ಡದ, ವೀರೇಂದ್ರ ಅಂಗಡಿ, ಅಂದಪ್ಪ ಹಾರೋಗೇರಿ, ಶರಣಪ್ಪ ತೋಟದ, ಈರಣ್ಣ ವಾಲಿ, ಸುನಿಲರಡ್ಡಿ ನೀರಲಗಿ, ಮಹಾಂತೇಶ ನಾಗರಳ್ಳಿ, ವಿಜಯಕುಮಾರ ತಟ್ಟಿ, ಪರಶುರಾಮ ಕರಡಿಕೊಳ್ಳ, ವಿಶ್ವನಾಥ ಕಾಲವಾಡ, ಕುಮಾರ ಡೊಳ್ಳಿನ, ಶಿವು ನವಲಗುಂದ, ಅನಂತ ಚಿತ್ರಗಾರ, ರವಿ ಕುಂಬಾರ, ನಾಗರಾಜ ಹೊಸಮನಿ, ಸೋಮಶೇಖರ ಹಕ್ಕಂಡಿ, ಮುತ್ತು ಅಳವಂಡಿ, ರಮೇಶ ಹುಳಕಣ್ಣವರ, ಮಂಜುನಾಥ ಮುಧೋಳ ಸೇರಿದಂತೆ ಅನೇಕರು ಗಣವೇಷ ಧರಿಸಿ ಪಾಲ್ಗೊಂಡಿದ್ದರು.