ಸಾರಾಂಶ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಅಲಂಕೃತ ವಾಹನದಲ್ಲಿ ಭಾರತ ಮಾತೆ, ಆರ್‌ಎಸ್ಎಸ್ ಸಂಸ್ಥಾಪಕರ ಭಾವಚಿತ್ರಗಳ ಮೆರವಣಿಗೆ ನಗರದ ವಿದ್ಯಾನಿಧಿ ಪಬ್ಲಿಕ್ ಶಾಲೆಯ ಮುಂಬಾಗದಿಂದ ಪ್ರಾರಂಭವಾಯಿತು. ಮಹರ್ಷಿ ವಾಲ್ಮೀಕಿ ವೃತ್ತ, ರೈಲ್ವೇ ಸ್ಟೇಷನ್ ರಸ್ತೆ, ಎನ್ ಸಿ ನಾಗಯ್ಯ ರೆಡ್ಡಿ ವೃತ್ತ, ಡಾಕ್ಟರ್ ಬಿ ಆರ್ ಅಂಬೇಡ್ಕರ್ ವೃತ್ತ, ಮಹಾತ್ಮ ಗಾಂಧಿ ವೃತ, ಬಜಾರ್ ರಸ್ತೆ ಮೂಲಕ ಪಥ ಸಂಚಲನ ಸಂಚರಿಸಿ ಶ್ರೀ ಶನಿಮಹಾತ್ಮ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಮುಕ್ತಾಯಗೊಂಡಿತು.ಪಥ ಸಂಚಲನದ ಮಾರ್ಗವನ್ನು ಕೇಸರಿ ಧ್ವಜ, ಬಂಟಿಂಗ್ಸ್, ತಳಿರು, ತೋರಣಗಳಿಂದ ಅಲಂಕರಿಸಲಾಗಿತ್ತು. ಗಣ್ಯರು, ಸಾರ್ವಜನಿಕರು ಗಣವೇಷಧಾರಿಗಳ ಮೇಲೆ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಪುಷ್ಪಾರ್ಚನೆ ಮಾಡಿದರು. ಮೆರವಣಿಗೆಯುದ್ದಕ್ಕೂ ಭಾರತ್ ಮಾತಾ ಕೀ ಜೈ, ನಾವೆಲ್ಲ ಹಿಂದೂ ನಾವೆಲ್ಲ ಬಂಧು, ನಾವೆಲ್ಲ ಒಂದು. ಘೋಷಣೆ ಮೊಳಗಿತು.ಸಮಾದಲ್ಲಿನ ನ್ಯೂನತೆ ಸರಿಯಾಗಲಿವಿದ್ಯಾನಿಧಿ ಪಬ್ಲಿಕ್ ಶಾಲೆಯ ಮುಂಬಾಗ ಸಮಾರೋಪ ಕಾರ್ಯಕ್ರಮ ಜರುಗಿತು. ಆರ್.ಎಸ್.ಎಸ್. ನಗರ ಕಾರ್ಯನಿರ್ವಾಹಕ ನಾಗರಾಜು ಮಾತನಾಡಿ, ಆಕ್ರಮಣಗಳಿಂದ ಜಗತ್ತಿನ ನಾಗರಿಕತೆಗಳು ನಾಶವಾಗಿದ್ದರೆ ಹಿಂದೂ ಸಮಾಜ ಆಕ್ರಮಣಗಳನ್ನು ಮೀರಿ ಗಟ್ಟಿಯಾಗಿ ನಿಂತಿದೆ. ಇದರ ಬೇರುಗಳು ಆಳವಾಗಿರುವುದರಿಂದ ಯಾರ ವಿರೋಧಕ್ಕೂ ಜಗ್ಗುವುದಿಲ್ಲ, ಕುಗ್ಗುವುದಿಲ್ಲ. ಎಲ್ಲರೂ ಒಗಟ್ಟಿನಿಂದ ಈ ಸಮಾಜವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು. ಮುಸ್ಲಿಂ, ಕ್ರಿಶ್ಚಿಯನ್ನರನ್ನು ವಿರೋಧಿಸಲು ಆರ್ ಎಸ್ಎಸ್ ಹುಟ್ಟಿಲ್ಲ. ಹಿಂದೂ ಸಮಾಜದ ನ್ಯೂನತೆ ಸರಿಪಡಿಸಲು ಸಂಘ ಹುಟ್ಟಿದೆ ಎಂದು ಹೇಳಿದರುರಾಷ್ಟ್ರೀಯ ಸ್ವಯಂ ಸೇವಕ ಸಂಘ ಮೂಲ ಉದ್ದೇಶ ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ಉನ್ನತೀಕರಣಕ್ಕಾಗಿ ಕಾರ್ಯ ನಿರ್ವಹಿಸುತ್ತಿದೆ. 1925 ರಲ್ಲಿ ಆರ್.ಎಸ್ ಎಸ್. ಸ್ಥಾಪನೆಯಾಗಿ ಇಂದಿಗೆ ಈ ವಿಜಯದಶಮಿ ಉತ್ಸವಕ್ಕೆ 100ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಸಂಘ ಅನೇಕ ಆಯಾಮಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ, ಶತಾಬ್ದಿ ವರ್ಷದ ಮೂಲ ಉದ್ದೇಶ ಸಂಘ ಕಾರ್ಯಪ್ರತಿ ನಗರದ ವಸತಿ ಉಪ ವಸತಿಗಳು ಹಾಗೂ ಮಂಡಲಗಳ ಪ್ರತಿಯೊಂದು ಹಳ್ಳಿಗೆ ತಲುಪಬೇಕೆಂಬುದೇ ಆರ್.ಎಸ್.ಎಸ್.ನ ಮೂಲ ಉದ್ದೇಶವಾಗಿದೆ ಎಂದರು.
ಆರೆಸ್ಸೆಸ್‌ಗೆ 100 ವರ್ಷಈ ವರ್ಷ ವಿಜಯ ದಶಮಿ ಸಂಗಕ್ಕೆ 100 ವರ್ಷ ಪೂರೈಸಿ ಮುಂದಿನ ವಿಜಯದಶಮಿ ಇನ್ನು ಅನೇಕ ರೀತಿಯ ಯುವ ಸಮಾವೇಶ, ಮನೆ ಮನೆ ಸಂಪರ್ಕ, ಸದ್ಭಾವನಾ ಬೈಠಕ್ ಗಳ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪರಿಚಯ ವಾಗಬೇಕೆಂದು ಕಾರ್ಯ ನಿರ್ವಹಿಸುತ್ತಿದೆ ಎಂದರು. ವೇಣುಗೋಪಾಲ್, ದಯಾನಂದ ಎ.ಬಿ.ವಿ.ಪಿ. ಚಂದ್ರಣ್ಣ, ವಿ.ಹಿ.ಪ. ಚಂದ್ರಶೇಖರಯ್ಯ, ಎಂ.ಎಸ್. ರಾಮಮೋಹನ್ ಉಪೇಂದ್ರ ಗುಪ್ತ, ಹಿಂದೂ ಜಾಗರಣ ವೇದಿಕೆ ಬೈಪಾಸ್ ರವಿಕುಮಾರ್, ಸ್ವಯಂ ಸೇವಕರು, ಇತರೆ ಪ್ರಮುಖರು ಗಣವೇಷಧಾರಿಗಳಾಗಿ ಪಥ ಸಂಚಲನದಲ್ಲಿ ಭಾಗವಹಿಸಿದ್ದರು..