19ಕ್ಕೆ ಶಿಡ್ಲಘಟ್ಟದಲ್ಲಿ ಆರ್ ಎಸ್ಎಸ್ ಪಥ ಸಂಚಲನ

| Published : Oct 17 2025, 01:00 AM IST

ಸಾರಾಂಶ

ವಿಧಾನ ಸಭೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದಾಗ ಇದೇ ಕಾಂಗ್ರೆಸ್ ದೊಣ್ಣೆ ನಾಯಕರು ಎಲ್ಲಿದ್ದರು? ಹಿಂದುತ್ವದ ವಿಷಯ ಬಂದಾಗ ಮಾತ್ರ ಮಾತನಾಡುವ ಇವರು ದೇಶಪ್ರೇಮಿಗಳೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ನಿಂದ ಅಲ್ಪಸಂಖ್ಯಾತರ ತುಷ್ಠೀಕರಣ: ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಟೀಕೆ

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆಯಾಗಿ ನೂರು ವರ್ಷ ಪೂರ್ಣಗೊಂಡ ಹಿನ್ನೆಲೆ ದೇಶದಾದ್ಯಂತ ಸಂಭ್ರಮಾಚರಣೆಗಳು ನಡೆಯುತ್ತಿದ್ದು, ಶಿಡ್ಲಘಟ್ಟದಲ್ಲಿಯೂ ಅ. 19ರಂದು ಸಂಜೆ 4 ಗಂಟೆಗೆ ಪಥಸಂಚಲನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.

ನಗರದಲ್ಲಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ ಎಸ್ಎಸ್ ಶತಮಾನೋತ್ಸವದ ಹಿನ್ನೆಲೆಯಲ್ಲಿ ದೇಶದಾದ್ಯಂತ ಸಾವಿರಾರು ಯುವಕರು, ವಿದ್ಯಾರ್ಥಿಗಳು, ದೇಶಭಕ್ತರು ಸಂಘದ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.

ಆರ್ ಎಸ್ಎಸ್ ದೇಶಭಕ್ತಿ, ಶಿಸ್ತು ಮತ್ತು ಸೇವಾಭಾವನೆಯ ಸಂಕೇತವಾಗಿದೆ.ರಾಷ್ಟ್ರದ ನಿಷ್ಠೆ ಮತ್ತು ಏಕತೆಗೆ ಬದ್ಧವಾದ ಸಂಸ್ಥೆಯಾಗಿದೆ. ಇಂತಹ ಸಂಘದ ಬಗ್ಗೆ ತಪ್ಪು ಪ್ರಚಾರ ಮಾಡುವವರು ರಾಷ್ಟ್ರಹಿತ ಶತ್ರುಗಳು ಎಂದು ಅವರು ಹೇಳಿದರು.

ವಿಧಾನ ಸಭೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದಾಗ ಇದೇ ಕಾಂಗ್ರೆಸ್ ದೊಣ್ಣೆ ನಾಯಕರು ಎಲ್ಲಿದ್ದರು? ಹಿಂದುತ್ವದ ವಿಷಯ ಬಂದಾಗ ಮಾತ್ರ ಮಾತನಾಡುವ ಇವರು ದೇಶಪ್ರೇಮಿಗಳೇ ಎಂದು ಪ್ರಶ್ನಿಸಿದರು.

ಮದ್ದೂರಿನಲ್ಲಿ ಗಣೇಶನ ಮೆರವಣಿಗೆಯ ವೇಳೆ ದೇವರ ಮೂರ್ತಿಗೆ ಕಲ್ಲು ಹೊಡೆದಾಗ ಈ ನಾಯಕರು ಕಾಣಿಸಿಕೊಂಡಿರಲಿಲ್ಲ. ಆದರೆ ಹಿಂದೂತ್ವದ ಹೆಸರಿನಲ್ಲಿ ಬಿಜೆಪಿ ವಿರುದ್ಧ ವಿಷಪ್ರಚಾರ ಮಾಡುವ ಧೈರ್ಯವಿದೆ. ಇಂತಹ ಜನರು ಮತಬ್ಯಾಂಕ್ ರಾಜಕಾರಣಕ್ಕೆ ಒತ್ತು ನೀಡುತ್ತಾ ಜನರನ್ನು ವಿಭಜಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರುಳಿಧರ್, ಕಾರ್ಯದರ್ಶಿ ಅಶ್ವತ್ಥ್, ನಗರ ಮಂಡಲ ಅಧ್ಯಕ್ಷ ನರೇಶ್ ಕುಮಾರ್, ಕನಕ ಪ್ರಸಾದ್, ಡಾ.ಸತ್ಯನಾರಾಯಣ್ ರಾವ್ ಉಪಸ್ಥಿತರಿದ್ದರು.