ಸಾರಾಂಶ
ಪಟ್ಟಣದ ಕುವೆಂಪು ವೃತ್ತದಿಂದ ಮುಖ್ಯ ರಸ್ತೆ ಮೂಲಕ ತಾಲೂಕು ಕಚೇರಿವರೆಗೆ ಬಳಿಕ, ಬಂಡಿಕೇರಿ ಬೀದಿ, ಪೂರ್ಣಯ್ಯ ಬೀದಿ, ಎ.ರಾಮಣ್ಣ ಬೀದಿ, ದರ್ಜಿ ಬೀದಿ ಸೇರಿ ರಾಜ ಬೀದಿಗಳಲ್ಲಿ ಗಣವೇಷಧಾರಿಗಳಾಗಿ ಪಥಸಂಚಲನ ನಡೆಸಿ, ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಬಳಿ ಪೂರ್ಣಗೊಳಿಸಿದರು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಆರ್‌ಎಸ್‌ಎಸ್‌ಗೆ ನೂರು ವರ್ಷದ ತುಂಬಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರು ಪಥಸಂಚಲನ ನಡೆಸಿದರು.ಪಟ್ಟಣದ ಕುವೆಂಪು ವೃತ್ತದಿಂದ ಮುಖ್ಯ ರಸ್ತೆ ಮೂಲಕ ತಾಲೂಕು ಕಚೇರಿವರೆಗೆ ಬಳಿಕ, ಬಂಡಿಕೇರಿ ಬೀದಿ, ಪೂರ್ಣಯ್ಯ ಬೀದಿ, ಎ.ರಾಮಣ್ಣ ಬೀದಿ, ದರ್ಜಿ ಬೀದಿ ಸೇರಿ ರಾಜ ಬೀದಿಗಳಲ್ಲಿ ಗಣವೇಷಧಾರಿಗಳಾಗಿ ಪಥಸಂಚಲನ ನಡೆಸಿ, ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಬಳಿ ಪೂರ್ಣಗೊಳಿಸಿದರು. ಸಾರ್ವಜನಿಕರು ಪಥಸಂಚಲನದ ಉದ್ದಕ್ಕೂ ಅಂಗಡಿ ಮುಂಗಟ್ಟು ಹಾಗೂ ತಮ್ಮ ಮನೆ ಮೇಲೆ ನಿಂತು ಪಥಸಂಚಲನದಲ್ಲಿ ಪಾಲ್ಗೊಂಡಿದ್ದ ಗಣವೇ಼ಧಾರಿಗಳ ಮೇಲೆ ಪುಷ್ಪವೃಷ್ಟಿಗೈದು ಶುಭಕೋರಿದರು. ಆರ್‌ಎಸ್‌ಎಸ್ ಮುಖ್ಯಸ್ಥ ರಂಗಣ್ಣ, ಬಿಜೆಪಿ ತಾಲೂಕು ಅಧ್ಯಕ್ಷ ಪಿ. ಹಳ್ಳಿ ರಮೇಶ್, ಉಮೇಶ್‌ಕುಮಾರ್, ವಕೀಲರಾದ ಬಾಲರಾಜ್, ಎ.ಟಿ ಜಯಕುಮಾರ್, ಚಂದನ್ ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಪಥಸಂಚಲನದಲ್ಲಿ ಭಾಗವಹಿಸಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನ ನಿಯೋಜಿಸಿ, ಬಿಗಿ ಬದ್ರತೆ ಒದಗಿಸಲಾಗಿತ್ತು.