ಸಾರಾಂಶ
ಅಸಂಘಟಿತವಾದ ಹಿಂದು ಸಮಾಜವನ್ನು ಸಂಘಟನೆ ಮಾಡುವುದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೊದಲ ಗುರಿಯಾಗಿದೆ. ಅಲ್ಲದೆ ಹಿಂದುಗಳಲ್ಲಿ ಸಾಭಿಮಾನ ಮೂಡುವಂತೆ ಮಾಡುವುದಲ್ಲದೆ ಹಿಂದೂ ಸಮಾಜ ಜಾಗೃತಗೊಳಿಸಬೇಕು ಎಂಬ ಧನಾತ್ಮಕ ಚಿಂತನೆಯೊಂದಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ೧೯೨೫ರ ವಿಜಯ ದಶಮಿಯಂದು ಸ್ಥಾಪನೆಗೊಂಡಿತು ಎಂದು ಉತ್ತರ ಕರ್ನಾಟಕ ಪ್ರಾಂತ ಕಾರ್ಯವಾಹ ವಕ್ತಾರ ರಾಘವೇಂದ್ರ ಕಾಗವಾಡ ಹೇಳಿದರು.
ಕನ್ನಡಪ್ರಭ ವಾರ್ತೆ ಇಳಕಲ್ಲ
ಅಸಂಘಟಿತವಾದ ಹಿಂದು ಸಮಾಜವನ್ನು ಸಂಘಟನೆ ಮಾಡುವುದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೊದಲ ಗುರಿಯಾಗಿದೆ. ಅಲ್ಲದೆ ಹಿಂದುಗಳಲ್ಲಿ ಸಾಭಿಮಾನ ಮೂಡುವಂತೆ ಮಾಡುವುದಲ್ಲದೆ ಹಿಂದೂ ಸಮಾಜ ಜಾಗೃತಗೊಳಿಸಬೇಕು ಎಂಬ ಧನಾತ್ಮಕ ಚಿಂತನೆಯೊಂದಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ೧೯೨೫ರ ವಿಜಯ ದಶಮಿಯಂದು ಸ್ಥಾಪನೆಗೊಂಡಿತು ಎಂದು ಉತ್ತರ ಕರ್ನಾಟಕ ಪ್ರಾಂತ ಕಾರ್ಯವಾಹ ವಕ್ತಾರ ರಾಘವೇಂದ್ರ ಕಾಗವಾಡ ಹೇಳಿದರು.ಇಲ್ಲಿಯ ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಆರ್.ವೀರಮಣಿ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಗರ ಘಟಕದ ವಾರ್ಷಿಕೋತ್ಸವ ಹಾಗೂ ವಿಜಯದಶಮಿ ನಿಮಿತ್ತ ಹಮ್ಮಿಕೊಂಡಿದ್ದ ಸಾರ್ವಜನಿಕ ಸಮಾಂಭದ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು.
ಇಂದಿನ ನಮ್ಮ ಇತಿಹಾಸದ ಪಠ್ಯಪುಸ್ತಕಗಳನ್ನು ಓದಿದರೆ ಸೋಲಿನ ಇತಿಹಾಸ ನಮ್ಮದೆಂಬ ಭ್ರಮೆಗೆ ಒಳಗಾಗುತ್ತಿದ್ದೇವೆ. ನಮ್ಮದು ಸೋಲಿನ ಇತಿಹಾಸವಲ್ಲ ಸಂಘರ್ಷದ ಇತಿಹಾಸ. ಪ್ರಪಂಚದ ಇತಿಹಾಸವನ್ನು ನೋಡಿದಾಗ ೧೯೦ಕ್ಕೂ ಹೆಚ್ಚಿನ ದೇಶಗಳು ಎರಡು ಅಸುರ ಶಕ್ತಿಗಳ ಆಕ್ರಮಣದಿಂದ ತಮ್ಮ ಮೂಲ ಸಂಸ್ಕೃತಿ ಬಿಟ್ಟು ಕ್ರೈಸ್ತ, ಇಲ್ಲವೆ ಇಸ್ಲಾಂ ಸಂಸ್ಕೃತಿ ಅಳವಡಿಸಿಕೊಂಡವು. ಸಾಕಷ್ಟು ಅಸುರ ಶಕ್ತಿಗಳು ಅತಿಕ್ರಮಣ ಮಾಡಿದರೂ ಸಮರ್ಥವಾಗಿ ಎದುರಿಸಿದ ದೇಶ ಯಾವುದಾದರೂ ಇದ್ದರೆ ಅದು ಭಾರತ ಮಾತ್ರ. ಯುಕವರ ವ್ಯಕ್ತಿತ್ವ ನಿರ್ಮಾಣ ಮಾಡುವ ಮೂಲಕ ಶ್ರೇಷ್ಠ ವ್ಯಕ್ತಿಗಳನ್ನು ತಯಾರು ಮಾಡುವ ಧ್ಯೇಯ ಹೊಂದಿದೆ. ಹಿಂದುತ್ವ, ಹಿಂದು ಧರ್ಮ, ಹಿಂದು ಸಮಾಜ, ಹಿಂದು ಸಂಸ್ಕೃತಿಯ ರಕ್ಷಣೆ ಮಾಡುವ ಕೆಲಸ ಸಂಘದ ಸ್ವಯಂ ಸೇವಕರು ಇಡೀ ದೇಶದ ಉದ್ದಗಲಕ್ಕೂ ಮಾಡುತ್ತಿದ್ದಾರೆ ಎಂದು ಹೇಳಿದರು.ಚಳಗೇರಿ ಸುಕ್ಷೇತ್ರದ ವೀರಸಂಗಮೇಶ್ವ ಶಿವಾಚಾರ‍್ಯರು ಸಾನಿಧ್ಯ ವಹಿಸಿದ್ದರು. ವೇದಿಕೆ ಮೇಲೆ ಇಳಕಲ್ಲ ಸಹಕಾರಿ ಬ್ಯಾಂಕಿನ ನಿರ್ದೇಶಕ ಗೌತಮಜೀ ಬೋರಾ, ಬಾಗಲಕೋಟೆಯ ಸಂಘ ಪರಿವಾರದ ಚಂದ್ರಶೇಖರ ಇದ್ದರು.