ರಡ್ಡಿ ಸಮಾಜ ಸಂಘಟಿತವಾಗಲಿ

| Published : May 10 2024, 11:45 PM IST

ಸಾರಾಂಶ

ಕಾಯಕದಲ್ಲಿ ದೇವರು ಕಾಣುವ ಸಮಾಜದ ಬಂಧುಗಳು ವಿವಿಧ ಸಮಾಜಗಳೊಂದಿಗೆ ಸಮನ್ವಯದ ಬಾಳು ನಡೆಸುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಜನರಿಗೆ ಉದ್ಯೋಗ ನೀಡಿ ಆ ಕುಟುಂಬಗಳಿಗೆ ಆಸರೆಯಾಗಿದ್ದಾರೆ.

ನರಗುಂದ:

ಸ್ವಾಭಿಮಾನದಿಂದ ಬದುಕುವ ರಡ್ಡಿ ಸಮಾಜದ ಬಂಧುಗಳು ರಾಷ್ಟ್ರ ಕಾರ್ಯ ಮಾಡುವಲ್ಲಿ ಎತ್ತಿದ ಕೈ ಎಂದು ಹೇಮರಡ್ಡಿ ಮಲ್ಲಮ್ಮ ರಡ್ಡಿ ಗುರುಪೀಠದ ಶ್ರೀ ಮಹಾಯೋಗಿ ವೇಮನ ಸಂಸ್ಥಾನಮಠದ ವೇಮನಾನಂದ ಶ್ರೀ ಹೇಳಿದರು.

ಪಟ್ಟಣದ ಶ್ರೀ ಆರೂಢ ಭವನದಲ್ಲಿ ಶುಕ್ರವಾರ ತಾಲೂಕು ರಡ್ಡಿ ಕ್ಷೇಮಾಭಿವೃದ್ಧಿ ಸಂಘದಿಂದ ನಡೆದ ಶಿವಶರಣೆ ಹೇಮರಡ್ಡಿ ಮಲ್ಲಮ್ಮಳ 602ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾಯಕದಲ್ಲಿ ದೇವರು ಕಾಣುವ ಸಮಾಜದ ಬಂಧುಗಳು ವಿವಿಧ ಸಮಾಜಗಳೊಂದಿಗೆ ಸಮನ್ವಯದ ಬಾಳು ನಡೆಸುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಜನರಿಗೆ ಉದ್ಯೋಗ ನೀಡಿ ಆ ಕುಟುಂಬಗಳಿಗೆ ಆಸರೆಯಾಗಿದ್ದಾರೆ ಎಂದರು.

ಮಾಜಿ ಶಾಸಕ ಬಿ.ಆರ್. ಯಾವಗಲ್ಲ ಮಾತನಾಡಿ, ಸಣ್ಣ ಸಮಾಜವಾಗಿರುವ ರಡ್ಡಿ ಸಮಾಜವು ವಿವಿಧ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆ ಮಾಡಲು ಸಂಘಟಿಕರಾಗಬೇಕಾಗಿದೆ ಎಂದು ಹೇಳಿದರು.

ಸಮಾಜದ ತಾಲೂಕಾಧ್ಯಕ್ಷ ಬಿ.ಆರ್. ಪಾಟೀಲ, ಉಪನ್ಯಾಸಕ ಲಿಂಗಾರಡ್ಡಿ ಆಲೂರ ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕ ಮಾತನಾಡಿದರು. ಇದೇ ವೇಳೆ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ರಡ್ಡಿ ಸಮಾಜದ ತಾಲೂಕಿನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಶಿವಶರಣಿ ಹೇಮರಡ್ಡಿ ಮಲ್ಲಮ್ಮರ ಹಾಗೂ ಮಹಾಯೋಗಿ ಶ್ರೀವೇಮನರ ಭಾವಚಿತ್ರಗಳ ಮೆರವಣಿಗೆಯನ್ನು ವಿವಿಧ ವಾದ್ಯಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠ ಶಾಂತಲಿಂಗ ಶ್ರೀ, ರಾಜುಗೌಡ ಕೆಂಚನಗೌಡ್ರ, ಡಾ. ವ್ಹಿ.ಎಸ್. ಪಾಟೀಲ, ಡಾ. ಪ್ರವೀಣ ಮೇಟಿ, ಡಾ. ಶ್ರೀನಿವಾಸ ಪಾಟೀಲ, ಡಾ. ಪ್ರವೀಣ ಸಾಲಿಗೌಡ್ರ, ಡಾ. ಸಚಿನ ಕಲ್ಲೂರ, ಡಾ. ಶ್ರೀನಿವಾಸರೆಡ್ಡಿ ವೆಂಕರಡ್ಡಿಯವರ, ಸತೀಶ ನಾಗನೂರ, ನಾರಾಯಣ ತಿಮ್ಮರಡ್ಡಿ, ಡಾ. ವೀರನಗೌಡ ಪಾಟೀಲ, ಅಶೋಕ ಕೊಪ್ಪಳ, ಎಸ್ .ಎಸ್. ಮಲ್ಲನಗೌಡ್ರ, ಗಿರೀಶ ನೀಲರಡ್ಡಿ, ಆನಂದ ಮೇಟಿ, ಮುತ್ತಪ್ಪ ಲಿಂಗದಾಳ, ಅಶೋಕ ಪಾಟೀಲ, ವಿಜ ಮಾದನೂತ, ಶಿವರಡ್ಡಿ ಪೆಟ್ಲೂರ, ದೇವರಡ್ಡಿ ವೆಂಕರಡ್ಡಿಯವರ, ಎಸ್.ಆರ್. ಮೇಟಿ, ಶಿಕ್ಷಕ ಡಿ.ಎಚ್. ಅಜ್ಜಿ, ಸೇರಿದಂತೆ ಇತರರು ಇದ್ದರು.