ಶಿಕ್ಷಣ ಕ್ಷೇತ್ರಕ್ಕೆ ಬಲ ತುಂಬಿದ ರುದ್ರಮುನಿಶ್ರೀ

| Published : Aug 19 2025, 01:00 AM IST

ಶಿಕ್ಷಣ ಕ್ಷೇತ್ರಕ್ಕೆ ಬಲ ತುಂಬಿದ ರುದ್ರಮುನಿಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಈ ಭಾಗದ ಜನರು ಶಿಕ್ಷಣ, ಉದ್ಯೋಗದಲ್ಲಿ ಹಿಂದುಳಿದಿರುವುದನ್ನು ಅರಿತು ರುದ್ರಮುನಿ ಶ್ರೀಗಳು ಮಕ್ಕಳಿಗೆ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ೧೯೮೭ರಲ್ಲಿ ಶಿಕ್ಷಣ ಸಂಸ್ಥೆ ತೆರೆದರು. ಮೊದಲಿಗೆ ಪ್ರಾಥಮಿಕ, ನಂತರ ಪ್ರೌಢಶಾಲೆ ಆರಂಭಿಸಿದ್ದರು.

ಕನಕಗಿರಿ:

ಬಡ ಹಾಗೂ ಹಿಂದುಳಿದವರು ಶಿಕ್ಷಣದಿಂದ ವಂಚಿತರಾಗಬಾರದೆಂದು ಲಿಂ. ರುದ್ರಮುನಿ ಮಹಾಸ್ವಾಮಿಗಳು ಶಾಲೆ ತೆರೆದು ಶಿಕ್ಷಣ ಕ್ಷೇತ್ರಕ್ಕೆ ಬಲತುಂಬಿದ್ದಾರೆ ಎಂದು ಸುವರ್ಣಗಿರಿ ಸಂಸ್ಥಾನ ವಿರಕ್ತಮಠದ ಪೀಠಾಧಿಪತಿ ಡಾ. ಚನ್ನಮಲ್ಲ ಸ್ವಾಮೀಜಿ ಹೇಳಿದರು.

ಪಟ್ಟಣದ ಸುವರ್ಣಗಿರಿ ಸಂಸ್ಥಾನ ವಿರಕ್ತ ಮಠದಲ್ಲಿ ಲಿಂ. ರುದ್ರಮುನಿ ಸ್ವಾಮೀಜಿ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಸೋಮವಾರ ಮಾತನಾಡಿದರು.

ಈ ಭಾಗದ ಜನರು ಶಿಕ್ಷಣ, ಉದ್ಯೋಗದಲ್ಲಿ ಹಿಂದುಳಿದಿರುವುದನ್ನು ಅರಿತು ರುದ್ರಮುನಿ ಶ್ರೀಗಳು ಮಕ್ಕಳಿಗೆ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ೧೯೮೭ರಲ್ಲಿ ಶಿಕ್ಷಣ ಸಂಸ್ಥೆ ತೆರೆದರು. ಮೊದಲಿಗೆ ಪ್ರಾಥಮಿಕ, ನಂತರ ಪ್ರೌಢಶಾಲೆ ಆರಂಭಿಸಿದ್ದರು. ಇದೀಗ ಪಿಯು ಕಾಲೇಜಿನ ವರೆಗೆ ಬೆಳೆದಿದೆ. ಶ್ರೀಮಠದ ಸಂಸ್ಥೆಯಲ್ಲಿ ಕಲಿತವರು ರಾಜ್ಯ ನೆರೆಯ ರಾಜ್ಯಗಳಲ್ಲಿಯೂ ದೊಡ್ಡ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸ್ಮರಿಸಿದರು. ಲಿಂ. ರುದ್ರಮುನಿ ಸ್ವಾಮೀಜಿ ಪುಣ್ಯಸ್ಮರಣೆ ನಿಮಿತ್ತ ಬೆಳಗ್ಗೆ ಕರ್ತೃ ಗದ್ದುಗೆಗೆ ಅಭಿಷೇಕ, ಪೂಜೆ, ಅಲಂಕಾರ ನಡೆಯಿತು. ನಂತರ ರುದ್ರಮುನಿ ಶ್ರೀಗಳ ಮೂರ್ತಿಯನ್ನು ಪಟ್ಟಣದಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಮುಕ್ತಾಯದ ಬಳಿಕ ಭಕ್ತರಿಗೆ ಅನ್ನಪ್ರಸಾದ ನಡೆಯಿತು.ಮಾಜಿ ಶಾಸಕ ವೀರಪ್ಪ ಕೇಸರಹಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸುಗೂರು, ತಹಸೀಲ್ದಾರ್ ವಿಶ್ವನಾಥ ಮುರುಡಿ, ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಸದಸ್ಯರಾದ ಅನಿಲ್ ಬಿಜ್ಜಳ, ಹನುಮಂತ ಬಸರಿಗಿಡದ, ಜಿಪಂ ಮಾಜಿ ಸದಸ್ಯ ವೀರೇಶ ಸಮಗಂಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ, ಬಸವರಾಜ ಗುಗ್ಗಳಶೆಟ್ರ, ಪ್ರಶಾಂತ ಪ್ರಭುಶೆಟ್ಟರ್, ವಾಗೇಶ ಹಿರೇಮಠ, ಮೃತ್ಯುಂಜಯಸ್ವಾಮಿ, ಮದರಸಾಬ್‌ ಸಂತ್ರಾಸ್, ಚಂದ್ರಶೇಖರ ಗಂಗಾಧರಮಠ ಸೇರಿದಂತೆ ಇತರರಿದ್ದರು.ಸ್ಮರಣೆ ನಿಮಿತ್ತ ಮೂರ್ತಿ ಮೆರವಣಿಗೆಗೆ ಗಣ್ಯರು ಚಾಲನೆ ನೀಡಿದರು.