ಸಾರಾಂಶ
ಮಹಾಸಂಕಲ್ಪ, ಗಣಪತಿ ಪೂಜೆ, ಪುಣ್ಯಾಹ ಮತ್ತು ಅಲಂಕೃತ ಪಂಚಾಮೃತ ಅಭಿಷೇಕ, ಸಹಸ್ರ ಶಂಖ ಸ್ಥಾಪನೆ, ಶತರುದ್ರ ಪಾರಾಯಣ ಹಾಗೂ ಸಾಯಿ ಅತಿರುದ್ರ ಭದ್ರೇಶ್ವರ ಲಿಂಗಕ್ಕೆ ಸಹಸ್ರ ಶಂಖದಿಂದ ಅಭಿಷೇಕ, ಏಕಾದಶ ರುದ್ರ ಹೋಮ, ಮಹಾಪೂರ್ಣಾಹುತಿ ಸೇರಿ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
ಕನ್ನಡಪ್ರಭ ವಾರ್ತೆ ಭದ್ರಾವತಿನಗರದ ನ್ಯೂಟೌನ್ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆ ವತಿಯಿಂದ ಭಾನುವಾರ ಸತ್ಯ ಸಾಯಿ ಸೇವಾ ಸಂಸ್ಥೆಗಳು, ಕರ್ನಾಟಕ(ಉತ್ತರ) ಹಾಗೂ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು(ಯುವ ವಿಭಾಗ), ಕರ್ನಾಟಕ(ಉತ್ತರ) ಸಹಯೋಗದೊಂದಿಗೆ "ಸಾಯಿ ಅತಿರುದ್ರ ಭದ್ರೇಶ್ವರ ಲಿಂಗಕ್ಕೆ'''''''' ಸಹಸ್ರ ಶಂಖದಿಂದ ರುದ್ರಾಭಿಷೇಕ ಮತ್ತು ಏಕಾದಶ ರುದ್ರ ಹೋಮ ನಡೆಯಿತು.
ಮಹಾಸಂಕಲ್ಪ, ಗಣಪತಿ ಪೂಜೆ, ಪುಣ್ಯಾಹ ಮತ್ತು ಅಲಂಕೃತ ಪಂಚಾಮೃತ ಅಭಿಷೇಕ, ಸಹಸ್ರ ಶಂಖ ಸ್ಥಾಪನೆ, ಶತರುದ್ರ ಪಾರಾಯಣ ಹಾಗೂ ಸಾಯಿ ಅತಿರುದ್ರ ಭದ್ರೇಶ್ವರ ಲಿಂಗಕ್ಕೆ ಸಹಸ್ರ ಶಂಖದಿಂದ ಅಭಿಷೇಕ, ಏಕಾದಶ ರುದ್ರ ಹೋಮ, ಮಹಾಪೂರ್ಣಾಹುತಿ ಸೇರಿ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. ಮಧ್ಯಾಹ್ನ ಮಹಾಮಂಗಳಾರತಿ, ಮಹಾಪ್ರಸಾದ ವಿನಿಯೋಗ ನಡೆಯಿತು.ವಿಶೇಷವಾಗಿ ನುರಿತ ೨೦೦ ಸಾಯಿ ಯುವಕರಿಂದ ರುದ್ರ ಪಠಣ ನಡೆಯಿತು. ಪ್ರಧಾನ ಆಚಾರ್ಯ ಬೆಂಗಳೂರಿನ ಸುಬ್ರಹ್ಮಣಂ ಮತ್ತು ತಂಡದವರಿಂದ ಧಾರ್ಮಿಕ ಆಚರಣೆಗಳು ನೆರವೇರಿದವು. ಈ ಸಂಬಂಧ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯಾಧ್ಯಕ್ಷ ಪದ್ಮನಾಭ ಪೈ, ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ(ಸೇವೆ) ಡಿ. ಪ್ರಭಾಕರ ಬೀರಯ್ಯ, ರಾಜ್ಯ ಸಂಯೋಜಕ(ಆಧ್ಯಾತ್ಮಿಕ ವಿಭಾಗ) ಆದರ್ಶ ಪಡಿಯಾರ್, ರಾಜ್ಯ ಸಂಯೋಜಕ (ಯುವ ವಿಭಾಗ) ವೆಂಕಟೇಶ್ ಬಡಿಗೇರ್, ಜಿಲ್ಲಾಧ್ಯಕ್ಷ ಗೋಪಾಲ್ ಸೇರಿ ಇನ್ನಿತರರಿದ್ದರು.
ಶಾಸಕ ಬಿ.ಕೆ ಸಂಗಮೇಶ್ವರ್, ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆ ಪ್ರಮುಖರು, ಸೇವಾಕರ್ತರು, ಸಾಯಿ ಭಕ್ತರು ಪಾಲ್ಗೊಂಡಿದ್ದರು.