ರುದ್ರಭೂಮಿ ಅಭಿವೃದ್ಧಿ ಹೆಮ್ಮೆಯ ಸಂಗತಿ: ಶಾಸಕ ಬಣಕಾರ

| Published : Feb 26 2024, 01:33 AM IST

ಸಾರಾಂಶ

ಸ್ನೇಹ ಬಳಗದ ಹಳೆ ಸ್ನೇಹಿತರು ಲಕ್ಷಾಂತರ ಖರ್ಚು ಮಾಡಿ ಹಿಂದೂ ರುದ್ರಭೂಮಿ ಅಭಿವೃದ್ಧಿ ಪಡಿಸಿದ್ದು ಹೆಮ್ಮೆಯ ಸಂಗತಿ.

ಕನ್ನಡಪ್ರಭ ವಾರ್ತೆ ರಟ್ಟೀಹಳ್ಳಿ

ಪ್ರಸ್ತುತ ದಿನಗಳಲ್ಲಿ ಕೆಲ ಸಂಘ-ಸಂಸ್ಥೆಗಳು ಪಾರ್ಟಿ, ಟ್ರೀಪ್‌ಗಳಿಗೆ ಸೀಮಿತವಾಗಿದ್ದು, ನಮ್ಮೂರು ನಮ್ಮವರ ಸ್ನೇಹ ಬಳಗದ ಹಳೆ ಸ್ನೇಹಿತರು ಲಕ್ಷಾಂತರ ಖರ್ಚು ಮಾಡಿ ಹಿಂದೂ ರುದ್ರಭೂಮಿ ಅಭಿವೃದ್ಧಿ ಪಡಿಸಿದ್ದು ಹೆಮ್ಮೆಯ ಸಂಗತಿ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಪಟ್ಟಣದ ಹಿಂದೂ ರುದ್ರಭೂಮಿಯಲ್ಲಿ ವಿಶ್ರಾಂತಿಧಾಮದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಅನೇಕ ಅಭಿವೃದ್ಧಿ ಕಾರ್ಯ ನೋಡಿದ್ದೇವೆ. ವಿಶೇಷವಾಗಿ ರುದ್ರಭೂಮಿ ಆಯ್ಕೆ ಮಾಡಿ ಸಮಗ್ರ ಅಭಿವೃದ್ಧಿ ಕಾರ್ಯ ಮಾಡುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ. ಮುಂಬರುವ ದಿನಗಳಲ್ಲಿ ಶಾಸಕರ ಅನುದಾನದಲ್ಲಿ ಸಹಾಯ, ಸಹಕಾರ ನೀಡಲಾಗುವುದು ಎಂದರು.

ರಟ್ಟಿಹಳ್ಳಿ ತಾಲೂಕು ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗೆ ಮನವಿ ಮಾಡಿದ್ದು, ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅದಷ್ಟು ಬೇಗ ಕಾರ್ಯಕ್ರಮ ರೂಪಿಸಲಾಗುವುದು. ₹ ೫೨.ಕೋಟಿ ವೆಚ್ಚದಲ್ಲಿ ತುಂಗಭದ್ರಾ ನದಿಯಿಂದ ಶಾಶ್ವತ ಕುಡಿವ ನೀರಿನ ಯೋಜನೆ ಕೈಗೊಳ್ಳಲಾಗುವುದು, ಮುಜರಾಯಿ ಇಲಾಖೆಯಿಂದ ತಾಲೂಕಿನ ವಿವಿಧ ದೇವಸ್ಥಾನದ ಅಭಿವೃದ್ಧಿಗೆ ₹ ೬.೬೦ ಕೋಟಿ ಮಂಜೂರಾಗಿದ್ದು, ರಟ್ಟೀಹಳ್ಳಿ ಆರಾಧ್ಯ ದೈವ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಅಭಿವೃದ್ದಿಗೆ ₹೨೫ ಲಕ್ಷ, ಮಹಾಲಕ್ಷ್ಮೀ ದೇವಸ್ಥಾನ, ಬೀರಲಿಂಗೇಶ್ವರ ದೇವಸ್ಥಾನ, ಸಣ್ಣಗಿಬ್ಬಿ ಗ್ರಾಮದ ಯೋಗಿ ನಾರಾಯಣಸ್ವಾಮಿ ದೇವಸ್ಥಾನಕ್ಕೆ ತಲಾ ₹ ೧೦ ಲಕ್ಷ ಹಾಗೂ ತಾಲೂಕಿನ ವಿವಿಧ ದೇವಸ್ಥಾನದ ಅಭಿವೃದ್ಧಿಗೆ ಹಣ ಮಂಜೂರಾಗಿದ್ದು ಆದಷ್ಟು ಬೇಗ ಬಿಡುಗಡೆಗೊಳಿಸಲಾಗುವುದು ಎಂದರು.

ಹಿಂದೂ ವೀರಶೈವ ಮುಕ್ತಿಧಾಮ ಸಮಿತಿ ಕಾರ್ಯದರ್ಶಿ ನಿಂಗನಗೌಡ ಪ್ಯಾಟಿಗೌಡ್ರ ಮಾತನಾಡಿ, ನಮ್ಮೂರ ನಮ್ಮವರು ಸ್ನೇಹ ಬಳಗ ಹಾಗೂ ಸಮಾಜದಲ್ಲಿನ ಕೊಡುಗೈ ದಾನಿಗಳಿಂದ ಈಗಾಗಲೇ ₹೪.೫ ಲಕ್ಷ ವೆಚ್ಚದಲ್ಲಿ ವಿಶ್ರಾಂತಿ ಧಾಮ ನಿರ್ಮಾಣ, ₹೨ ಲಕ್ಷ ವೆಚ್ಚದಲ್ಲಿ ಬೋರವೆಲ್, ಪ್ರಾಂಗಣ ನಿರ್ಮಾಣ, ಶಿವ ಮತ್ತು ಬಸವಣ್ಣ ದೇವರ ಮೂರ್ತಿ ಪ್ರತಿಷ್ಠಾಪನೆ, ರುದ್ರಭೂಮಿ ಸಮತಟ್ಟು ಮಾಡಲಾಗಿದೆ. ಮಾಲತೇಶ ಬೆಣ್ಣಿ, ನಾಗರಾಜ ಪವಾರ, ಸಿದ್ದು ಗೌಡರ, ವಿನಾಯಕ ಪಾಟೀಲ್, ಪಂಚಾಕ್ಷರಿ ಕಬ್ಬಿಣಕಂತಿಮಠ, ಉಮೇಶ ಬಣಕಾರ, ಬಿ.ಎನ್. ಪಾಟೀಲ್ ಸೇರಿದಂತೆ ಅನೇಕ ಸ್ನೇಹಿತರು ಅಭಿವೃದ್ದಿ ಕಾರ್ಯಕ್ಕಾಗಿ ಹಗಲಿರಳು ಶ್ರಮ ವಹಿಸಿದ ಫಲವಾಗಿ ಇಂದು ಸುಂದರವಾದ ರುದ್ರಭೂಮಿ ನಿರ್ಮಾಣ ಮಾಡಲು ಸಾಧ್ಯವಾಯಿತು ಎಂದರು.

ಈ ಸಂದರ್ಭದಲ್ಲಿ ರಟ್ಟೀಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ನಾಗವಂದ ಗ್ರಾಮದ ಶಿವಯೋಗಿ ಶಿವಾನಂದ ಹೊರಗಿನ ಮಠದ ಶ್ರೀಗಳು ಆಶೀರ್ವಚನ ನೀಡಿದರು, ಪಂಪಂ ಮುಖ್ಯಾಧಿಕಾರಿ ಸಂತೋಷ ಚಂದ್ರಕೇರ, ಪಿ.ಡಿ. ಬಸನಗೌಡ್ರ, ವಸಂತ ದ್ಯಾವಕ್ಕಳವರ, ಈರಣ್ಣ ತೊಗರ್ಸಿ, ಶಂಭಣ್ಣ ಗೂಳಪ್ಪನವರ, ಮೃತ್ಯುಂಜಯ ಬಸವನಾಳಮಠ, ಗಣೇಶ ವೆರ್ಣೆಕರ್, ಮಹೇಶ ಗುಬ್ಬಿ, ರವಿ ಮುದಿಯಪ್ಪನವರ, ಮಂಜುನಾಥ ಎಂ., ಗಂಗಾಧರ ಬೆನ್ನೂರ, ರುದ್ರೇಶ ಬೆಣ್ಣಿ, ಸದಾಶಿವಯೋಗಿ ಎಸ್.ಕೆ. ಹಾಗೂ ಕಂಪು ಸಹಪಾಠಿ ಬಳಗದ ಸ್ನೇಹಿತರು ಇದ್ದರು.