ಓಟ ಸ್ಪರ್ಧೆ: ಗೌತಮ್ ಎಸ್. ರಾಜ್ಯಮಟ್ಟಕ್ಕೆ ಆಯ್ಕೆ

| Published : Aug 30 2025, 01:01 AM IST

ಸಾರಾಂಶ

ರೆಡ್ ರಿಬ್ಬನ್, ಹೆಲ್ತ್ ಡಿಪಾರ್ಟ್ಮೆಂಟ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಮಡಿಕೇರಿಯಲ್ಲಿ ನಡೆದ ರನ್ನಿಂಗ್ ಇವೆಂಟ್ (5 ಕಿ.ಮೀ. ಓಟ)ನಲ್ಲಿ ಭಾಗವಹಿಸಿದ್ದ ನಾಪೋಕ್ಲು ಸರ್ಕಾರಿ ಪದವಿ ಕಾಲೇಜಿನ ಗೌತಮ್ ಎಸ್. ಮೊದಲನೇ ಸ್ಥಾನ ಪಡೆದುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ರೆಡ್ ರಿಬ್ಬನ್, ಹೆಲ್ತ್ ಡಿಪಾರ್ಟ್ಮೆಂಟ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಮಡಿಕೇರಿಯಲ್ಲಿ ನಡೆದ ರನ್ನಿಂಗ್ ಇವೆಂಟ್ (5 ಕಿ.ಮೀ. ಓಟ)ನಲ್ಲಿ ಭಾಗವಹಿಸಿದ್ದ ನಾಪೋಕ್ಲು ಸರ್ಕಾರಿ ಪದವಿ ಕಾಲೇಜಿನ ಗೌತಮ್ ಎಸ್. ಮೊದಲನೇ ಸ್ಥಾನ ಪಡೆದುಕೊಂಡಿದ್ದಾರೆ.

ಈ ಸಾಧನೆಯ ಮೂಲಕ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತರಾದ ಅವರಿಗೆ 5000 ರು. ನಗದು ಬಹುಮಾನ, ಪ್ರಮಾಣ ಪತ್ರ ಮತ್ತು ಪದಕ ಲಭಿಸಿದೆ. ವಿಕಾಸ್ ಶ್ರೀನಿವಾಸ್ ತರಬೇತಿ ನೀಡಿದ್ದು, ವಿದ್ಯಾರ್ಥಿಯ ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ. ಗೌತಮ್ ಎಸ್., ವಿರಾಜಪೇಟೆ ನಿವಾಸಿ ಶೇಖರ್ ಕೆ. ಮತ್ತು ಶೋಭಾ ಎಸ್. ದಂಪತಿಯ ಪುತ್ರ.