ಶ್ರೀರಂಗಪಟ್ಟಣದಿಂದ ಬೆಂಗಳೂರಿಗೆ ತಡೆರಹಿತ ಬಸ್ ಸೌಕರ್ಯಕ್ಕೆ ಚಾಲನೆ

| Published : Oct 29 2024, 12:54 AM IST

ಶ್ರೀರಂಗಪಟ್ಟಣದಿಂದ ಬೆಂಗಳೂರಿಗೆ ತಡೆರಹಿತ ಬಸ್ ಸೌಕರ್ಯಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀರಂಗಪಟ್ಟಣ-ಬೆಂಗಳೂರು (ತಡೆರಹಿತ) ಶ್ರೀರಂಗಪಟ್ಟಣ-ಚನ್ನರಾಯಪಟ್ಟಣ, ಶ್ರೀರಂಗಪಟ್ಟಣ-ಪಾಂಡವಪುರ-ಕೆ.ಆರ್.ಪೇಟೆ-ಚನ್ನರಾಯಪಟ್ಟಣ ನಡುವೆ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿಯಾಗಿ ಅಶ್ವಮೇಧ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಶ್ರೀರಂಗಪಟ್ಟಣದಿಂದ ಬೆಂಗಳೂರಿಗೆ ತಡೆ ರಹಿತ ಅಶ್ವಮೇಧ ಬಸ್ ಸೌಕರ್ಯಕ್ಕೆ ಶಾಸಕ ರಮೇಶ ಬಂಡಿಸಿದ್ದೇಗೌಡ ಪಟ್ಟಣದ ಸಾರಿಗೆ ನಿಲ್ದಾಣದಲ್ಲಿ ಚಾಲನೆ ನೀಡಿದರು.

ನಂತರ ಮಾತನಾಡಿದ ಶಾಸಕರು, ತ್ವರಿತವಾಗಿ ಶ್ರೀರಂಗಪಟ್ಟಣದಿಂದ ಬೆಂಗಳೂರಿಗೆ ಪ್ರಯಾಣ ನಡೆಸುವರಿಗೆ ತಡೆ ರಹಿತ ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರು ಇದರ ಸೌಲಭ್ಯ ಪಡೆದುಕೊಳ್ಳಬೇಕು. ಶ್ರೀರಂಗಪಟ್ಟಣ-ಬೆಂಗಳೂರು ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಕಡಿಮೆ ಸಮಯದ ಅವಧಿಯಲ್ಲಿ ಬೆಂಗಳೂರಿಗೆ ತಲುಪಲು ಅನುಕೂಲವಾಗುವಂತೆ ತಡೆರಹಿತ ಅಶ್ವಮೇಧ ಸಾರಿಗೆ ಪ್ರಾರಂಭಿಸಲಾಗಿದೆ ಎಂದರು.

ಶ್ರೀರಂಗಪಟ್ಟಣ-ಬೆಂಗಳೂರು (ತಡೆರಹಿತ) ಶ್ರೀರಂಗಪಟ್ಟಣ-ಚನ್ನರಾಯಪಟ್ಟಣ, ಶ್ರೀರಂಗಪಟ್ಟಣ-ಪಾಂಡವಪುರ-ಕೆ.ಆರ್.ಪೇಟೆ-ಚನ್ನರಾಯಪಟ್ಟಣ ನಡುವೆ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿಯಾಗಿ ಅಶ್ವಮೇಧ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಜೊತೆಗೆ ಅರಕೆರೆ-ಮಂಡ್ಯ-ಬೆಂಗಳೂರು ನಡುವೆ ಗ್ರಾಮೀಣ ಭಾಗದಿಂದ ನೇರ ಬೆಂಗಳೂರಿಗೆ ಅಶ್ವಮೇಧ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಅಲ್ಲದೇ ಕೆಆರ್‌ಎಸ್-ಶ್ರೀರಂಗಪಟ್ಟಣ-ಬೆಂಗಳೂರಿಗೆ ಪ್ರಯಾಣಿಸುವ ನೇರ ಪ್ರಯಾಣಿಕರಿಗೆ ಕಡಿಮೆ ಸಮಯದ ಅವಧಿಯಲ್ಲಿ ಬೆಂಗಳೂರಿಗೆ ತಲುಪಲು ಅನುಕೂಲವಾಗುವಂತೆ ಅಶ್ವಮೇಧ ಸಾರಿಗೆ ಪ್ರಾರಂಭಿಸಲಾಗಿದೆ. ಒಟ್ಟು ನಾಲ್ಕು ಮಾರ್ಗವಾಗಿ ಶ್ರೀರಂಗಪಟ್ಟಣ ದಿಂದಲೆ ನೇರವಾಗಿ ತಡೆ ರಹಿತ ಬಸ್‌ಗಳಲ್ಲಿ ಪ್ರಯಾಣಿಸಬಹುದು ಎಂದರು.

ಈ ವೇಳೆ ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಾಧಿಕಾರಿ ಎಸ್. ಪಿ. ನಾಗರಾಜು, ವಿಭಾಗೀಯ ಸಂಚರಣಾಧಿಕಾರಿ ಎಸ್.ಎಸ್ ಪರಮೇಶ್ವರಪ್ಪ, ಹರ್ಷಿತಾ ಸೇರಿದಂತೆ ಇತರರು ಇದ್ದರು.