ಸಾರಾಂಶ
ಹೊಸಕೋಟೆ: ತಾಲೂಕಿನ ನಂದಗುಡಿ ಹೋಬಳಿಯ ಇಟ್ಟಸಂದ್ರ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷೆಯಾಗಿ ಇಟ್ಟಸಂದ್ರದ ರೂಪ ಚನ್ನಕೇಶವ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಗೀತಾ ಚವಾಣ್ ತಿಳಿಸಿದರು.
ಹೊಸಕೋಟೆ: ತಾಲೂಕಿನ ನಂದಗುಡಿ ಹೋಬಳಿಯ ಇಟ್ಟಸಂದ್ರ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷೆಯಾಗಿ ಇಟ್ಟಸಂದ್ರದ ರೂಪ ಚನ್ನಕೇಶವ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಗೀತಾ ಚವಾಣ್ ತಿಳಿಸಿದರು.
ಈ ಹಿಂದೆ ಅಧ್ಯಕ್ಷೆಯಾಗಿದ್ದ ಚಾಂದ್ ಸುಲ್ತಾನ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರಿಂದ ಚುನಾವಣೆ ನಿಗದಿಯಾಗಿತ್ತು. ಚುನಾಯಿತ 21 ಸದಸ್ಯರು ಒಮ್ಮತದಿಂದ ಅಧ್ಯಕ್ಷೆ ಸ್ಥಾನಕ್ಕೆ ರೂಪ ಚನ್ನಕೇಶವ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.ನೂತನ ಅಧ್ಯಕ್ಷೆಯನ್ನು ಕೆಪಿಸಿಸಿ ಕಾರ್ಯದರ್ಶಿ ಇಟ್ಟಸಂದ್ರ ಬಿ.ಗೋಪಾಲ್ ಅಭಿನಂದಿಸಿ ಮಾತನಾಡಿ, ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಮೂಲ ಸಮಸ್ಯೆಗಳಾದ ಕುಡಿಯುವ ನೀರು, ಬೀದಿದೀಪ, ಚರಂಡಿಗಳ ಸ್ವಚ್ಛತೆ ಸೇರಿದಂತೆ ಕಸ ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ, ಮಾದರಿ ಗ್ರಾಪಂಯನ್ನಾಗಿ ಮಾಡುವತ್ತ ಶ್ರಮಿಸಬೇಕು. ಸರಕಾರದ ಅನುದಾನಗಳನ್ನು ಪ್ರಾಮಾಣಿಕವಾಗಿ ಜನರಿಗೆ ತಲುಪಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಜಶೇಖರಗೌಡ, ಮುಖಂಡರಾದ ಐಎ ಮುನಿಶಾಮೇಗೌಡ, ಎಸ್‌ಎಫ್‌ಸಿಎಸ್ ಅಧ್ಯಕ್ಷ ಶಂಕರ್ ನಾರಾಯಣ್, ಪಿಡಿಒ ಪುಷ್ಪಲತಾ, ಉಪಾಧ್ಯಕ್ಷೆ ನಂದಿನಿ ರವಿ, ಎಂಪಿಸಿಎಸ್ ಅಧ್ಯಕ್ಷ ರಾಳಕುಂಟೆ ಆರ್.ಕೆ. ಮುನಿಶಾಮಗೌಡ, ಗ್ರಾಪಂ ಸದಸ್ಯರಾದ ಎಂ.ರಮೇಶ್, ಬಿಂದು ದೇವೇಗೌಡ, ರಾಮಾಂಜಿನಪ್ಪ, ಸಿ. ಮುರುಳಿ ಮೋಹನ್, ಡಿ. ತಾರಾ, ಹೆಚ್.ಎಂ.ಜಯರಾಮ್, ನಾರಾಯಣಮ್ಮ, ಹೆಚ್.ಎಂ. ಮೂರ್ತಿ, ಸರೋಜಮ್ಮ ಜಯರಾಮ್, ಹೆಚ್.ಡಿ.ಮಧು, ಚಾಂದ್ ಸುಲ್ತಾನಾ, ಮಹಮದ್ ಸಲೀಂ, ಕರಗೇಗೌಡ, ಲಕ್ಷಿö್ಮÃನಾರಾಯಣ, ಅಸ್ಮತಾಜ್, ಶಬ್ರೀನ್ ಉನ್ನಿಸಾ, ನೀಲಾವತಿ ಚಂದ್ರಶೇಖರ್, ನಾಗವೇಣಮ್ಮ, ಎ.ಸಿ.ಗೋವರ್ಧನ್ ಹಾಗೂ ಮುಖಂಡರು ಇದ್ದರು.ಫೋಟೋ: 6 ಹೆಚ್‌ಎಸ್‌ಕೆ 3
ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಇಟ್ಟಸಂದ್ರ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷೆಯಾಗಿ ಇಟ್ಟಸಂದ್ರದ ರೂಪ ಚನ್ನಕೇಶವ ಅವಿರೋಧವಾಗಿ ಆಯ್ಕೆಯಾಗಿದ್ದು ಕೆಪಿಸಿಸಿ ಕಾರ್ಯದರ್ಶಿ ಇಟ್ಟಸಂದ್ರ ಬಿ.ಗೋಪಾಲ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಅಭಿನಂದಿಸಿದರು.