ಉಳುವರೆ ಸಂತ್ರಸ್ತರಿಗೆ ದಿನಸಿ ಕಿಟ್ ವಿತರಿಸಿದ ರೂಪಾಲಿ ನಾಯ್ಕ

| Published : Jul 29 2024, 12:50 AM IST

ಉಳುವರೆ ಸಂತ್ರಸ್ತರಿಗೆ ದಿನಸಿ ಕಿಟ್ ವಿತರಿಸಿದ ರೂಪಾಲಿ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಶಿರೂರು ಬಳಿ ಉಂಟಾದ ಭೀಕರ ಗುಡ್ಡ ಕುಸಿತದಿಂದ ಮಣ್ಣು ರಭಸವಾಗಿ ನೀರಿಗೆ ಬಿದ್ದ ಪರಿಣಾಮ ನದಿಯಾಚೆಗಿನ ಉಳುವರೆ ಗ್ರಾಮದ 42 ಕುಟುಂಬಗಳು ತಮ್ಮ ಸೂರುಗಳನ್ನು ಕಳೆದುಕೊಂಡಿದ್ದು, ಅದರಲ್ಲಿಯೂ 7 ಮನೆಗಳು ಸಂಪೂರ್ಣ ನೀರುಪಾಲಾಗಿತ್ತು.

ಅಂಕೋಲಾ: ಶಿರೂರು ಗುಡ್ಡ ಕುಸಿತದಿಂದ ನದಿ ನೀರು ಉಕ್ಕಿ ಮನೆ ಕಳೆದುಕೊಂಡಿದ್ದ ಜನರಿಗೆ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ದೈನಂದಿನ ಜೀವನಕ್ಕೆ ಅಗತ್ಯವಾದ ದಿನಸಿ ಕಿಟ್ ನೀಡಿ ಮಾನವೀಯತೆ ಮೆರೆದರು. ರಾಷ್ಟ್ರೀಯ ಹೆದ್ದಾರಿ 66ರ ಶಿರೂರು ಬಳಿ ಉಂಟಾದ ಭೀಕರ ಗುಡ್ಡ ಕುಸಿತದಿಂದ ಮಣ್ಣು ರಭಸವಾಗಿ ನೀರಿಗೆ ಬಿದ್ದ ಪರಿಣಾಮ ನದಿಯಾಚೆಗಿನ ಉಳುವರೆ ಗ್ರಾಮದ 42 ಕುಟುಂಬಗಳು ತಮ್ಮ ಸೂರುಗಳನ್ನು ಕಳೆದುಕೊಂಡಿದ್ದು, ಅದರಲ್ಲಿಯೂ 7 ಮನೆಗಳು ಸಂಪೂರ್ಣ ನೀರುಪಾಲಾಗಿತ್ತು. ಮನೆ ಕಳೆದುಕೊಂಡ ಸಂತ್ರಸ್ತರು ಉಳವರೆಯ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು.ಈ ಸಂದರ್ಭದಲ್ಲಿ ಭೇಟಿ ನೀಡಿದ ಮಾಜಿ ಶಾಸಕಿ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ಭೇಟಿ ನೀಡಿ ಅವರಿಗೆ ಅವಶ್ಯವಿರುವ ದಿನ ಬಳಕೆಯ ವಸ್ತುಗಳಾದ ಅಕ್ಕಿ, ಬೇಳೆ, ಸಾಂಬಾರ ಪದಾರ್ಥಗಳು, ಚಾಪೆ, ಬೆಡ್‌ಶೀಟ್ ಮುಂತಾದ ಸಾಮಗ್ರಿಗಳನ್ನು ನೀಡಿ ತಮ್ಮ ಸಹಾಯವನ್ನು ಮೆರೆದರು.ಈ ಸಂದರ್ಭದಲ್ಲಿ ರೂಪಾಲಿ ನಾಯ್ಕರ ಪುತ್ರ ಪ್ರಭತ್, ಬಿಜೆಪಿ ಮುಖಂಡರಾದ ಸಂಜಯ್ ನಾಯ್ಕ, ನಿಲೇಶ ನಾಯ್ಕ, ಚಂದ್ರಕಾಂತ ಸೇರಿದಂತೆ ಇತರ ಪ್ರಮುಖರು ಇದ್ದರು.ಸಹಕಾರ: ಗುಡ್ಡ ಕುಸಿತವಾಗಿ ಇಂದಿಗೆ 13 ದಿನ ಕಳೆದಿದೆ. ಸರ್ಕಾರ, ಜಿಲ್ಲಾಡಳಿತ ಹಾಗೂ ಇತರ ರಕ್ಷಣಾ ತಂಡಗಳು ಸತತ ಕಾರ್ಯಾಚರಣೆ ನಡೆಸುತ್ತಿವೆ. ಈಗಾಗಲೆ ದುರಂತದಲ್ಲಿ ಸಾವಿಗಿಡಾದ 8 ಜನರ ಶವ ದೊರೆತಿದ್ದು 3 ಇನ್ನು ಮೂರು ಜನರ ಪತ್ತೆಯಾಗಬೇಕಿದೆ. ಆದಷ್ಟು ಬೇಗ ಕಾರ್ಯಾಚರಣೆ ಯಶಸ್ವಿಗೊಳ್ಳಲಿದೆ ಎಂಬ ವಿಶ್ವಾಸವಿದೆ. ದುರಂತದಿಂದ ಸಂತ್ರಸ್ತರಾದ ಗ್ರಾಮಸ್ಥರಿಗೆ ನನ್ನ ಕಡೆಯಿಂದ ಒಂದು ಸಣ್ಣ ಸಹಕಾರ ಮಾಡಿದ್ದೇನೆ ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ತಿಳಿಸಿದರು.