ಪ್ರಸುತ್ತ ಈಗಿನ ದಿನಮಾನದಲ್ಲಿ ವಿದೇಶಿ ಸಂಸ್ಕೃತಿ ಪ್ರಭಾವ ಹಾಗೂ ವಿಪರೀತ ಮೊಬೈಲ್ ಗೀಳಿನಿಂದ ಸಾಕಷ್ಟು ದೇಶೀಯ ಕಲೆಗಳು, ಹಂತಿ ಪದ ಸೇರಿದಂತೆ ಹಲವು ಕಲೆಗಳು ಅಳುವಿನಂಚಲನಲ್ಲಿವೆ.

ಕುಕನೂರು: ಪ್ರತಿಭಾ ಕಾರಂಜಿಯಿಂದ ಗ್ರಾಮೀಣ ಕಲೆಗಳ ಅನಾವರಣವಾಗುತ್ತದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಮಹೇಶ ಸಬರದ ಹೇಳಿದರು.

ತಾಲೂಕಿನ ಅರಕೇರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಜರುಗಿದ ಯಡಿಯಾಪುರ ಕ್ಲಸ್ಟರ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ವಿದೇಶಿ ಸಂಸ್ಕೃತಿಯಿಂದ ದೇಶಿಯ ಕಲೆಗಳು ನಶಿಸಿ ಹೋಗುತ್ತಿವೆ. ಗ್ರಾಮೀಣ ಪ್ರದೇಶದ ಕಲೆಗಳು ಬದುಕಿಗೆ ದಾರಿದೀಪವಾಗಿವೆ. ಗ್ರಾಮೀಣ ಪ್ರದೇಶದಲ್ಲಿ ಕಲೆ ಸಂಸ್ಕೃತಿ ಸಾಹಿತ್ಯ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಪ್ರಸುತ್ತ ಈಗಿನ ದಿನಮಾನದಲ್ಲಿ ವಿದೇಶಿ ಸಂಸ್ಕೃತಿ ಪ್ರಭಾವ ಹಾಗೂ ವಿಪರೀತ ಮೊಬೈಲ್ ಗೀಳಿನಿಂದ ಸಾಕಷ್ಟು ದೇಶೀಯ ಕಲೆಗಳು, ಹಂತಿ ಪದ ಸೇರಿದಂತೆ ಹಲವು ಕಲೆಗಳು ಅಳುವಿನಂಚಲನಲ್ಲಿವೆ. ಹಾಗಾಗಿ ದೇಶೀಯ ಕಲೆಗಳು ಉಳಿಯಬೇಕಾದರೆ ಶಾಲೆಗಳಲ್ಲಿ ಇಂತಹ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮ ಮಾಡಬೇಕಾಗುತ್ತದೆ ಎಂದರು.

ಶಿರೂರು ಗ್ರಾಪಂ ಅಧ್ಯಕ್ಷ ಮಲ್ಲಪ್ಪ ಬಂಗಾರಿ,ಉಪಾಧ್ಯಕ್ಷೇ ಶಾರದಾ ಗಿರೆಡ್ಡಿ, ಸದಸ್ಯರಾದ ವಿರುಪಾಕ್ಷಪ್ಪ ತಳಕಲ್, ನಿಂಗಪ್ಪ ಕುರಿ, ಈರಪ್ಪ ಬಾಡಿ, ಮುಖಂಡ ದೇವಪ್ಪ ಅರಕೇರಿ, ಶಿಕ್ಷಣ ಇಲಾಖೆಯ ಜಿ.ಆರ್ ಬೆಣಕಲ್ಲಮಠ, ಮಾರುತೇಶ ತಳವಾರ, ಬಸವರಾಜ ಮೇಟಿ, ಶಂಕರಗೌಡ ವಣಗೇರಿ, ಎಸ್‌ಡಿಎಂಸಿ ಅಧ್ಯಕ್ಷ ಲಕ್ಷ್ಮವ್ವ ಮ್ಯಾಗಳಕೆರಿ, ಉಪಾಧ್ಯಕ್ಷೆ ನೇತ್ರಾ ಮ್ಯಾಗಳಕೆರಿ, ಸದಸ್ಯ ಶರಣಪ್ಪ ಗಿರಡ್ಡಿ, ಮುತ್ತಪ್ಪ ಹರಿಜನ, ಶಿಕ್ಷಕರಾದ ಶಿವಪ್ಪ ಈಬೇರಿ, ಶಿವಕುಮಾರ ಮುತ್ತಾಳ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ ಕಂಬಳಿ, ಸುರೇಶ ಅಬ್ಬಿಗೇರಿ, ಮಹಾಂತೇಶ, ಸಿ.ಆರ್.ಪಿ ಪಿರಸಾಬ್ ದಪೇದಾರ್ ಇತರರಿದ್ದರು.