ಗೃಹಲಕ್ಷ್ಮಿ, ಸ್ತ್ರೀ ಶಕ್ತಿ, ಅನ್ನಭಾಗ್ಯ, ಯುವನಿಧಿ ಹಾಗೂ ಗೃಹಜ್ಯೋತಿ ಯೋಜನೆಗಳಿಗೆ ರಾಜ್ಯ ಸರ್ಕಾರ ವರ್ಷಕ್ಕೆ ₹56 ಸಾವಿರ ಕೋಟಿ ವಿನಿಯೋಗಿಸುತ್ತಿದೆ.
ಡಂಬಳ: ರಾಜ್ಯ ಸೇರಿದಂತೆ ಕಾಂಗ್ರೆಸ್ ಪಕ್ಷ ಮಾತ್ರ ದೇಶದಲ್ಲಿ ಎಲ್ಲ ಜನರ ಪರವಾಗಿದೆ. ದೇಶದಲ್ಲಿಯೇ ಎಲ್ಲ ಧರ್ಮದ ಮತ್ತು ಯುವಕರ ಪರವಾಗಿರುವ ಏಕೈಕ ಪಕ್ಷ ಅಂದರೆ ಅದು ಕಾಂಗ್ರೆಸ್ ಪಕ್ಷ ಆಗಿದೆ ಎಂದು ರೋಣ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ್ ಜಿ. ಪಾಟೀಲ ಹೇಳಿದರು.
ಡಂಬಳ ಹೋಬಳಿಯ ಬರದೂರು ಗ್ರಾಮದ ಕಾಶಿಲಿಂಗೇಶ್ವರ ದೇವಸ್ಥಾನ ಹತ್ತಿರದಲ್ಲಿರುವ ಬೆಳಗಟ್ಟಿಗೆ ಹೋಗುವ ರಸ್ತೆ ಹಾಗೂ ಎಸ್‌ಸಿ ಕಾಲನಿ ಸಿಸಿ ರಸ್ತೆ ಹಾಗೂ ಗಟಾರ್ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮತ್ತು ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಡೆಸ್ಕ್ ಮತ್ತು ಶಾಲಾ ಬ್ಯಾಗ್ ಮತ್ತು ನೋಟ್ ಬುಕ್ ವಿತರಿಸಿ ಮಾತನಾಡಿ, ಗೃಹಲಕ್ಷ್ಮಿ, ಸ್ತ್ರೀ ಶಕ್ತಿ, ಅನ್ನಭಾಗ್ಯ, ಯುವನಿಧಿ ಹಾಗೂ ಗೃಹಜ್ಯೋತಿ ಯೋಜನೆಗಳಿಗೆ ರಾಜ್ಯ ಸರ್ಕಾರ ವರ್ಷಕ್ಕೆ ₹56 ಸಾವಿರ ಕೋಟಿ ವಿನಿಯೋಗಿಸುತ್ತಿದೆ ಎಂದರು.ಗ್ಯಾರಂಟಿ ಸಮಿತಿ ಅಧ್ಯಕ್ಷ ಡಿ.ಡಿ. ಮೋರನಾಳ ಮಾತನಾಡಿ, ರಾಜೀವ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ವಿಕೇಂದ್ರೀಕರಣ ವ್ಯವಸ್ಥೆಯನ್ನು ಜಾರಿಗೆ ತಂದರು. ಗ್ರಾಮಗಳು ಸಬಲೀಕರಣಗೊಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಅವರು ಬಲವಾಗಿ ನಂಬಿದ್ದರು. ಅದೇ ರೀತಿ ಪ್ರಧಾನಿಯಾಗಿದ್ದ ಡಾ. ಮನಮೋಹನ ಸಿಂಗ್ ಅವರ ಅಧಿಕಾರಾವಧಿಯಲ್ಲಿ ಸಹ ಪಂಚಾಯತ್ ವ್ಯವಸ್ಥೆಗೆ ಬಲ ತುಂಬಲಾಯಿತು. ನರೇಗಾ ಯೋಜನೆ ಬಂದ ನಂತರ ಗ್ರಾಮ ಪಂಚಾಯಿತಿಗಳ ಬಲವರ್ಧನೆಯಾಗಿ ರೈತರ, ಕಾರ್ಮಿಕರ ಹಿತ ಕಾಪಾಡುವಲ್ಲಿ ಸಫಲವಾಗಿತ್ತು. ಆದರೆ ಅಂತಹ ಯೋಜನೆಗಳನ್ನು ತೆಗೆದುಹಾಕಿರುವುದು ಗ್ರಾಮ ಪಂಚಾಯತಿಗಳು ಅಭಿವೃದ್ಧಿ ಕುಂಠಿತಹೊಂದುವಂತೆ ಮಾಡಿವೆ ಎಂದರು.
ಮುಖಂಡ ಪ್ರಕಾಶ ಸಜ್ಜನ ಮಾತನಾಡಿ, ಬರದೂರ ಗ್ರಾಮದ ಕಾಶಿಲಿಂಗೇಶ್ವರ ದೇವಾಸ್ಥಾನಕ್ಕೆ ವಿಶೇಷ ಅನುದಾನ ಮತ್ತು ಈ ಭಾಗದಲ್ಲಿ ಸಿಸಿ ರಸ್ತೆ ನಿರ್ಮಿಸಲು ಮತ್ತು ತಾಮ್ರಗುಂಡಿ ಕೆರೆ ಒಡೆದ ಸಂದರ್ಭದಲ್ಲಿ ಅದನ್ನು ಮರು ನಿರ್ಮಾಣ ಕಾರ್ಯ ಮಾಡಿ ಈ ಭಾಗದ ರೈತರು ಆರ್ಥಿಕ ಶಕ್ತಿ ಹೊಂದುವಂತೆ ಹಿತ ಕಾಪಾಡಿದ ಶ್ರೇಯಸ್ಸು ಶಾಸಕರಾದ ಜಿ.ಎಸ್. ಪಾಟೀಲರಿಗೆ ಸಲ್ಲುತ್ತದೆ ಎಂದರು.ಕಾರ್ಯಕ್ರಮದಲ್ಲಿ ಇಒ ವಿಜಯಕುಮಾರ ಬೆಣ್ಣಿ, ಅಭಿಯಂತರರು ನಾಗರಾಜ, ನಿಂಗಪ್ಪ ತೋಟಪ್ಪನವರ, ಗೌಸುಸಾಬ ದೋಟಿಹಾಳ, ಶರಣಪ್ಪ ಕಲ್ಲಹಳ್ಳಿ, ಮಂಜಪ್ಪ ಬೆಳಗಟ್ಟಿ, ಯಮನಪ್ಪ ಚುಂಗಿನ, ಸೋಮು ಹೈತಾಪುರ, ಪ್ರಕಾಶ ನಾಡಗೌಡರ, ಈಶಪ್ಪ ಗೋಡಿ, ಅಮರೇಶ ಹಿರೇಮಠ, ನಾಗರಾಜ ಸಜ್ಜನ, ಯಮನಪ್ಪ ಹಳ್ಳಿಕೇರಿ, ದುರಗವ್ವ ತಳಗೇರಿ, ಮಂಜಪ್ಪ ಕುರಿ, ಶಂಕ್ರಪ್ಪ ಮ್ಯಾಗೇರಿ, ದೇವಪ್ಪ ಶಿರೂರ, ಬಸಪ್ಪ ಮೇಟಿ, ಪ್ರಥಮದರ್ಜೆ ಗುತ್ತಿಗೆದಾರ ಮಲ್ಲೇಶ ಕಟ್ಟಿಮನಿ, ಶ್ರೀಕಾಂತ ಜನಸೂರ, ನಿಂಗಪ್ಪ ಗೋಡಿ, ನೀಲಪ್ಪ ಶಿರೋಳ, ವೀರೇಶ ರೋಣದ, ಹಂಚಾಳಪ್ಪ ಉಪ್ಪಾರ, ನಿಂಗಪ್ಪ ತಳಗೇರ, ಬಸವರಾಜ ಬಾರಕೇರ ಇದ್ದರು.