ಮಹಿಳಾ ಜ್ಞಾನ ವಿಕಾಸ ಕೇಂದ್ರ ಮಹಿಳೆಯರಿಗೆ ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಸ್ವಯಂ ಉದ್ಯೋಗ ಸೇರಿದಂತೆ ವಿವಿಧ ಸಾಮಾಜಿಕ ಜ್ಞಾನದ ಮಾಹಿತಿ ನೀಡಿ ಜಾಗೃತಿಗೊಳಿಸಿ, ನಿರ್ಗತಿಕರರಿಗೆ ಮನೆ ರಚನೆಯ ವಾತ್ಸಲ್ಯ ಕಾರ್ಯಕ್ರಮ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಮ್ಮ ಸಮಾಜಕ್ಕೆ ಮಾದರಿ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜ್ಞಾನ ವಿಕಾಸ ಕೇಂದ್ರದ ಕಾರ್ಯಕ್ರಮಗಳು ಮಹಿಳೆಯರ ಸ್ವಾವಲಂಬಿ ಜೀವನ ಮತ್ತು ಬದುಕಿಗೆ ಸಹಕಾರಿ ಎಂದು ಶ್ರೀಕ್ಷೇತ್ರದ ಚನ್ನರಾಯಪಟ್ಟಣ ವಿಭಾಗದ ಜಿಲ್ಲಾ ನಿರ್ದೇಶಕ ಡಾ.ಯೋಗೇಶ್ ತಿಳಿಸಿದರು.ತಾಲೂಕಿನ ಬಿಬಿ ಕಾವಲು ಗ್ರಾಮದಲ್ಲಿ ಕಿಕ್ಕೇರಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹರಿಹರಪುರ ವಲಯ ವತಿಯಿಂದ ಜ್ಞಾನವಿಕಾಸ ಸಂಯುಕ್ತ ಆಶ್ರಯದಲ್ಲಿ ನೂತನ ಮಹಿಳಾ ಜ್ಞಾನ ವಿಕಾಸ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಮಹಿಳೆ ನಿಶ್ಚಿಂತೆಯಿಂದ ತನ್ನ ಬದುಕು ಕಟ್ಟಿಕೊಳ್ಳಲು ಲೋಕ ಜ್ಞಾನ ಹೊಂದಿರಬೇಕು. ಹೀಗಾಗಿ ಮಹಿಳಾ ಜ್ಞಾನ ವಿಕಾಸ ಕೇಂದ್ರ ಮಹಿಳೆಯರಿಗೆ ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಸ್ವಯಂ ಉದ್ಯೋಗ ಸೇರಿದಂತೆ ವಿವಿಧ ಸಾಮಾಜಿಕ ಜ್ಞಾನದ ಮಾಹಿತಿ ನೀಡಿ ಜಾಗೃತಿಗೊಳಿಸಿ, ನಿರ್ಗತಿಕರರಿಗೆ ಮನೆ ರಚನೆಯ ವಾತ್ಸಲ್ಯ ಕಾರ್ಯಕ್ರಮ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಮ್ಮ ಸಮಾಜಕ್ಕೆ ಮಾದರಿ ಎಂದರು.ಗ್ರಾಪಂ ಸದಸ್ಯ ಮೋಹನ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪೋಕ್ಸೊ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿದ್ದು, ಹೆಣ್ಣು ಮಕ್ಕಳು ವಯಸ್ಸಿಗೆ ಬಾರದೆ ವಿವಾಹ ಮಾಡುವುದು ಅಪರಾಧ. ಇಂದಿನ ಮಕ್ಕಳು ಮೊಬೈಲ್ ಗಳ ಬಳಕೆ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆ ಬಗ್ಗೆ ಎಚ್ಚರ ವಹಿಸಬೇಕು ಎಂದರು.
ಶ್ರೀಮಲ್ಲಿಕಾರ್ಜುನ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ಗಂಜಿಗೆರೆ ಮಹೇಶ್ ಮಾತನಾಡಿ, ಮಹಿಳೆಯರು ಜ್ಞಾನ-ವಿಜ್ಞಾನ, ಕಾರ್ಮಿಕ ಕ್ಷೇತ್ರ, ಸೇವಾ ಕ್ಷೇತ್ರ, ಉದ್ಯಮ ಸೇರಿ ಎಲ್ಲಾ ವೃತ್ತಿಗಳಲ್ಲೂ ತಮ್ಮ ಸ್ಥಾನವನ್ನು ನಿರ್ಮಿಸಿ ಕೊಂಡಿದ್ದಾರೆ ಎಂದು ಶ್ಲಾಘಿಸಿದರು.ಕಾರ್ಯಕ್ರಮದಲ್ಲಿ ಕಿಕ್ಕೇರಿ ಶ್ರೀಧರ್ಮಸ್ಥಳ ಯೋಜನಧಿಕಾರಿ ಪ್ರಸಾದ್, ಗ್ರಾಪಂ ಮಾಜಿ ಅಧ್ಯಕ್ಷ ಡೊಂಕಯ್ಯ, ಹಿರಿಯ ಮುಖಂಡ ಸಿಂಗಯ್ಯ, ಸಂಸ್ಥೆ ಮೇಲ್ವಿಚಾರಕಿ ಸಂಗೀತ ದಿನೇಶ್, ಸಮನ್ವಯ ಅಧಿಕಾರಿ ನಂದಿನಿ, ಸೇವಾಪ್ರತಿನಿಧಿ ವೀಣಾ, ಮಂಜುಳ, ಶ್ರುತಿ, ಪೂರ್ಣಿಮಾ, ಗೀತಾ, ರೇಖಾ, ಸೇರಿದಂತೆ ಗ್ರಾಮಸ್ಥರು ಇದ್ದರು.ಶ್ರೀಕಾಳಿಕಾಂಬ ದೇಗುಲದಲ್ಲಿ ನವಚಂಡಿಕಾ ಮಹಾಯಾಗ
ಮಂಡ್ಯ: ಶ್ರೀಕಾಳಿಕಾಂಬ ಸೇವಾ ಸಮಿತಿ ವತಿಯಿಂದ ಜ.೩೧ ಮತ್ತು ಫೆ.೧ರಂದು ದೇವಾಲಯದ ಆವರಣದಲ್ಲಿ ೨೦ನೇ ವರ್ಷದ ನವ ಚಂಡಿಕಾ ಮಹಾಯಾಗ ನಡೆಯಲಿದೆ. ನಗರದ ಗುತ್ತಲು ಬಡಾವಣೆಯ ಬಲಮುರಿ ಗಣಪತಿ ದೇವಾಲಯದ ಅರ್ಚಕ ಅರ್ಜುನ್ ಎಸ್.ರಾವ್ ಅವರು ಶಾಸ್ತ್ರೋಕ್ತ ವಿಧಿ-ವಿಧಾನಗಳಿಂದ ನವಚಂಡಿಕಾ ಮಹಾಯಾಗ ನೆರವೇರಿಸುವರು. ಜ.೩೧ರಂದು ಸಂಜೆ ೫.೩೦ಕ್ಕೆ ಸಾಮೂಹಿಕ ದೇವತಾ ಪ್ರಾರ್ಥನೆ, ಗುರು ಗಣಪತಿ ಪೂಜೆ, ಪುಣ್ಯಾಹ ವಾಚನ, ಋತ್ವಿಕ್ ವರ್ಣನೆ, ನವಚಂಡಿಕಾ ಪಾರಾಯಣ, ರಾತ್ರಿ ೮ಕ್ಕೆ ಮಹಾಸುದರ್ಶನ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಫೆ.೧ರಂದು ಬೆಳಗ್ಗೆ ೬ಕ್ಕೆ ಶ್ರೀಕಾಳಿಕಾಂಬ ದೇವಿ ಸನ್ನಿಧಿಯಲ್ಲಿ ಫಲಪಂಚಾಮೃತ ಸಹಿತ ನವ ಕಳಶಾಭಿಷೇಕ, ೮.೩೦ಕ್ಕೆ ನವಚಂಡಿಕಾ ಮಹಾಯಾಗ ಪ್ರಾರಂಭ, ೧೨ಕ್ಕೆ ಮಹಾಪೂಜೆ, ಮಹಾಮಂಗಳಾರತಿ, ಪೂರ್ಣಾಹುತಿ, ಸುಹಾಸಿನಿ, ಕನ್ನಿಕಾ ಪೂಜೆ, ಶ್ರೀದೇವಿ ಮೂಲ ಸನ್ನಿಧಿಯಲ್ಲಿ ಮಹಾ ನೈವೇದ್ಯ ಸಮರ್ಪಣೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.