ಸಾರಾಂಶ
ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಮೀಣ ಅಂಚೆ ನೌಕರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದ ಅಂಚೆ ಕಚೇರಿಯ ಮುಂಭಾಗ ಅನಿರ್ದಿಷ್ಟ ಕಾಲ ಮುಷ್ಕರವನ್ನು ನಡೆಸಿದರು.ಬುಧವಾರ ಬೆಳಿಗ್ಗೆ ಗ್ರಾಮೀಣ ಭಾಗದ ಅಂಚೆ ನೌಕರರು ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ವತಿಯಿಂದ ಧರಣಿಯನ್ನು ನಡೆಸಿದರು,ಸಂಘದ ತಾಲೂಕು ಉಪಾಧ್ಯಕ್ಷ ಗೋವಿಂದರಾಜು ಮಾತನಾಡಿ, ಅಂಚೆ ಇಲಾಖೆಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನೌಕರರ ಜೀವನೋಪಾಯಕ್ಕೆ ತೊಂದರೆಯಾಗಿದ್ದು, ಈಗ ನಾವು 5 ಗಂಟೆಗಳ ಕಾಲ ಕರ್ತವ್ಯವನ್ನು ನಿರ್ವಹಿಸುವ ಪದ್ದತಿ ಇದೆ. ಅದನ್ನು 8 ಗಂಟೆಗಳ ಕಾಲ ಪರಿಗಣಿಸಿ ವೇತನವನ್ನು ಹೆಚ್ಚಿಸಬೇಕೆಂದು ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಕನಕಪುರ

ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನೌಕರರಿಗೂ ಹಾಗೂ ಹೊಸ ನೇಮಕಾತಿಯಲ್ಲಿ ಆಯ್ಕೆಯಾದ ನೌಕರರಿಗೂ ಒಂದೇ ರೀತಿ ವೇತನ ನೀಡಲಾಗುತ್ತಿದ್ದು, ಹಿರಿತನದ ಆಧಾರದ ಮೇಲೆ ಹೆಚ್ಚಿನ ವೇತನವನ್ನು ನೀಡುವುದು, ಈಗಾಗಲೇ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾಯಂ ನೌಕರರಂತೆ ಇತರೆ ನೌಕರರಿಗೂ ಸಹ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.ಸಂಘಟನೆ ಕಾರ್ಯದರ್ಶಿ ಮಹೇಶ್, ಸದಸ್ಯರಾದ ವಿಶ್ವನಾಥ್, ಶಿವರಾಮು, ನವೀನ, ಶ್ರೀಧರ್ ಶೆಟ್ಟಿ ಸೇರಿದಂತೆ ಹಲವರು ಧರಣಿಯಲ್ಲಿ ಭಾಗವಹಿಸಿದ್ದರು.
---ಕನಕಪುರ ಅಂಚೆ ಕಚೇರಿಯ ಮುಂಭಾಗ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ವತಿಯಿಂದ ವಿವಿಧ ಬೇಡಿಕೆಗೆ ಒತ್ತಾಯಿಸಿ ಧರಣಿ ನಡೆಸ ಲಾಯಿತು,ಗೋವಿಂದರಾಜು, ಮಹೇಶ್, ವಿಶ್ವನಾಥ್, ಶಿವರಾಮು, ನವೀನ ಉಪಸ್ಥಿತರಿದ್ದರು.