ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡಲಗಿ
ಗ್ರಾಮೀಣ ಭಾಗದ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು. ಕ್ರೀಡಾಪಟುಗಳ ಮೂಲಭೂತ ಸೌಕರ್ಯಗಳಿಗಾಗಿ ಸರ್ಕಾರ ಹಾಗೂ ಸಂಘ-ಸಂಸ್ಥೆಗಳು ಸಹಾಯ ಸಹಕಾರ ನೀಡಬೇಕು ಎಂದು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.ತಾಲೂಕಿನ ನಾಗನೂರು ಪಟ್ಟಣದಲ್ಲಿ ಬೆಳಗಾವಿ ಜಿಲ್ಲಾ ಪಂಚಾಯತಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಾರ್ಯಾಲಯ ಚಿಕ್ಕೋಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮೂಡಲಗಿ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆ ನಾಗನೂರು ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಬೆಳಗಾವಿ ವಿಭಾಗಮಟ್ಟದ ಮತ್ತು 14 -17 ವರ್ಷದೊಳಗಿನ ಬಾಲಕ ಬಾಲಕಿಯರ ರಾಜ್ಯಮಟ್ಟದ ಇಲಾಖೆಯ ಖೋ ಖೋ ಪಂದ್ಯಾವಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಕ್ರೀಡಾಪಟುಗಳು ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ, ಮಾನಸಿಕ ಹಾಗೂ ಶಾರೀರಿಕ ಸದೃಢರಾಗಿ ದೇಶ-ವಿದೇಶದಲ್ಲಿ ನಡೆಯುವ ಖೇಲೋ ಇಂಡಿಯಾ, ಒಲಂಪಿಕ್ಸ್ ಹಾಗೂ ಇತರೆ ಕ್ರೀಡೆಗಳಲ್ಲಿ ಪಾಲ್ಗೊಂಡು ವಿಜೇತರಿಗೆ ಶಿಷ್ಯವೇತನ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಲ್ಲಿ ನೌಕರಿ ಇತರೆ ಅವಕಾಶಗಳು ಲಭಿಸಲಿವೆ ಎಂದರು.ಧಾರವಾಡ ಬಾಲವಿಕಾಸ ಅಕಾಡೆಮಿಯ ನಿರ್ದೇಶಕ ಹಾಗೂ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ರಾಜ್ಯ ಉಪಾಧ್ಯಕ್ಷ ಗಜಾನನ ಮನ್ನಿಕೇರಿ ಮಾತನಾಡಿ, ನಾಗನೂರು ಖೋಖೋ ಕ್ರೀಡಾಪಟುಗಳ ತವರೂರಾಗಿದೆ. ಈ ಭಾಗದಲ್ಲಿ ಖೋ ಖೋ ಹಾಗೂ ಕ್ರೀಡಾಪಟುಗಳನ್ನು ಉಳಿಸಿ, ಬೆಳೆಸಿಕೊಂಡು ಹೋಗುತ್ತಿರುವ ತರಬೇತುದಾರ ಈರಣ್ಣ ಹಳಿಗೌಡರ ಅವರಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಗಳು ಲಭಿಸಲಿ ಎಂದು ಶುಭಹಾರೈಸಿದರು.ಚಿಕ್ಕೋಡಿ ಡಿಡಿಪಿಐ ಸೀತಾರಾಮ ಮಾತನಾಡಿ, ಕ್ರೀಡೆ ಹಾಗೂ ಕ್ರೀಡಾಪಟುಗಳು ನಿರ್ಣಾಯಕರು ನೀಡುವ ತೀರ್ಪನ್ನು ಸ್ವಾಗತಿಸಿ ಕ್ರೀಡಾ ಮೌಲ್ಯವನ್ನು ಹೆಚ್ಚಿಸಬೇಕು ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ಕ್ರೀಡಾಪಟುಗಳು ತಮ್ಮ ಶಾಲೆ ಶಿಕ್ಷಕರ ಹಾಗೂ ಊರಿನ ಘನತೆಯನ್ನು ಹೆಚ್ಚಿಸಬೇಕು ಎಂದರು.ಕ್ರೀಡಾಪಟುಗಳಿಗೆ ಮಾಲೆಯನ್ನು ಹಾಕಿ ಕ್ರೀಡಾ ಜ್ಯೋತಿಯನ್ನು ಬರಮಾಡಿಕೊಂಡರು. ಭಗೀರಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪರಸಪ್ಪ ಬಬಲಿ ಮಾತನಾಡಿದರು. ಮೂಡಲಗಿ ಬಿಇಒ ಪ್ರಕಾಶ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನಾಗನೂರಿನ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ ಹಾಗೂ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಡಿಡಿಪಿಐ ಶಾಂತರಾಮು, ನಿವೃತ್ತ ಡಿಡಿಪಿಐ ಗಜಾನನ ಮನ್ನಿಕೇರಿ, ಬಿಇಒ ಪ್ರಕಾಶ ಹಿರೇಮಠ, ತರಬೇತಿದಾರ ಈರಣ್ಣ ಹಳಿಗೌಡರ, ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತ ಎಂ ಬಿ ದೇಸಾಯಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಕೆ.ಸಿ.ಇಟ್ಟಿಗುಡಿ ಇವರನ್ನು ಸಂಸ್ಥೆ ವತಿಯಿಂದ ಮುಖ್ಯಶಿಕ್ಷಕ ಎಸ್.ಬಿ.ಕೇದಾರಿ ಹಾಗೂ ಸಂಘಟಕರು ಸತ್ಕರಿಸಿದರು.
ಬೆಳಗಾವಿ ಜಿಲ್ಲಾ ಖೋಖೋ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಗಜಾನನ ಯರಗಣವಿ, ಚಿಕ್ಕೋಡಿ ಜಿಲ್ಲಾ ಡಿಪಿಒ ಜುನೇದಿ ಪಟೇಲ, ನಿವೃತ್ತ ಡಿಪಿಒ ಶಾಂತರಾಮ ಜೋಗುಳೆ, ಟಿಪಿಒ ಎಸ್.ಬಿ.ಹಳಿಗೌಡರ, ರಾಯಬಾಗ ಟಿಪಿಒ ಮಹಾವೀರ ಜೀರಗ್ಯಾಳ, ಗೋಕಾಕ ಟಿಪಿಒ ಎಲ್.ಕೆ.ತೋರಣಗಟ್ಟಿ ಖೋಖೋ ಕ್ರೀಡಾಕೂಟದ ತರಬೇತಿದಾರ ಯತಿರಾಜ, ಬೆಳಗಾವಿ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಾಜು ಹಿರೇಮಠ, ಚಿಕ್ಕೋಡಿ ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ.ಲೋಕಣ್ಣವರ, ರಾಜ್ಯ ಪ್ರಾಥಮಿಕ ಶಾಲಾ ಸಂಘಟನಾ ಕಾರ್ಯದರ್ಶಿ ಮಾಲತೇಶ ಸಣ್ಣಕ್ಕಿ, ಚಿಕ್ಕೋಡಿ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜಿನೇಂದ್ರ ನೀಲಜಿಗಿ, ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಎಸ್. ಎಲ್.ಹೊಸಮನಿ, ಸಂಸ್ಥೆಯ ಕಾರ್ಯದರ್ಶಿ ಎಸ್.ಬಿ.ಹೊಸಮನಿ, ನಿರ್ದೇಶಕರಾದ ಬಿ.ಬಿ.ಪಾಟೀಲ, ಎಲ್.ಬಿ.ಸಕ್ರೆಪ್ಪಗೋಳ, ಬಿ.ಬಿ.ಗಿಡ್ಡಗೌಡ್ರ , ಬಿ.ಎಂ.ಬಂಡಿ, ಎಸ್.ಕೆ.ಸಕರೆಪ್ಪಗೋಳ, ಸಿ.ಎ.ಸಕ್ರೆಪ್ಪಗೋಳ, ಟಿ.ಎಸ್.ಸಗರಿ, ಎ.ಪಿ.ಪರಸನ್ನವರ, ಎಂ.ಎಂ.ಮಾವಿನಗಿಡದ, ಮಹೇಶ ಕಟ್ಟಿಮನಿ, ಎಸ್.ಎಂ.ನಾಗನೂರ, ಎಸ್.ಎ.ಹಮ್ಮನವರ, ಮುಖ್ಯಶಿಕ್ಷಕ ಎಸ್.ಬಿ.ಕೇದಾರಿ, ಬಿ.ಎಂ.ಬಂಡಿ ಇದ್ದರು.ಕುಮಾರಿ ಸಾನ್ವಿ, ವಸಂತ ನಾಯಕವಾಡಿ ಭರತನಾಟ್ಯ ಮಾಡುವ ಮೂಲಕ ಪ್ರಾರ್ಥಿಸಿದರು. ಚೈತ್ರಾ ವಸ್ತ್ರದ ಹಾಗೂ ಸಹನಾ ಬೆಳಕೂಡ ವಿದ್ಯಾರ್ಥಿಗಳು ಸ್ವಾಗತಗೀತೆ ಹಾಡಿದರು. ಶಿಕ್ಷಕ ಆರ್.ಎಂ.ಗೂಡಸಿ ನಿರೂಪಿಸಿದರು. ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಎಸ್ ಆರ್ ಬಾಗಡೆ ವಂದಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))