ಸಾರಾಂಶ
ಡಾ. ಭೀಮ್ ರಾವ್ ಯೂಥ್ಸ್ ಕೋ ಅಪರೇಟಿವ್ ಸೊಸೈಟಿ ಆರಂಭಿಸಿರುವುದು ಉತ್ತಮ ಬೆಳವಣಿಗೆ, ಈ ಸಂಘಟನೆ ಮುಂದಿನ ದಿನಗಳಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಯುವಕರ ಪಾಲಿಗೆ ಆಶಾಕಿರಣವಾಗಬೇಕು.
ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ
ಗ್ರಾಮೀಣ ಭಾಗದ ಯುವಕರು ಬಲಾಢ್ಯರಾಗಬೇಕು, ಅವರು ಅಕ್ಷರ ಕಲಿತು ಬಾಬಾ ಸಾಹೇಬರಂತೆ ಉತ್ತಮ ಜ್ಞಾನಿಗಳಾಗಬೇಕು, ಆದರೆ ಈಗಿನ ಯುವ ಸಮೂಹ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಮದ್ಯದ ಗೀಳಿಗೆ ಬಿದ್ದು ಮದ್ಯವ್ಯಸನಿಗಳಾಗುತ್ತಿದ್ದಾರೆ. ಇದಕ್ಕೆ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಮದ್ಯ ಮಾರಾಟವೂ ಕಾರಣವಾಗುತ್ತಿದೆ ಎಂದು ಜೇತವನದ ಮನೋರಖ್ಖಿತ ಬಂತೇಜಿ ವಿಷಾದಿಸಿದರು.ಅವರು ತಾಲೂಕಿನ ಗುಂಡೇಗಾಲ ಗ್ರಾಮದಲ್ಲಿ ಡಾ.ಭೀಮ್ ರಾವ್ ಯೂಥ್ಸ್ ಕೋ ಅಪರೇಟಿವ್ ಸೊಸೈಟಿಯ ನಾಮಫಲಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಯುವಕರು ಮದ್ಯದ ಗೀಳಿಗೆ ದಾಸರಾದರೆ ಯಾವ ಸಾಧನೆಯನ್ನು ಮಾಡಲಾಗಲ್ಲ, ಯುವ ಪೀಳಿಗೆ ಸನ್ಮಾರ್ಗದತ್ತ ಸಾಗಿ, ಉನ್ನತ ವ್ಯಾಸಂಗದ ಮೂಲಕ ಉತ್ತಮ ಪ್ರಜೆಗಳಾಗಬೇಕು,
ಡಾ. ಭೀಮ್ ರಾವ್ ಯೂಥ್ಸ್ ಕೋ ಅಪರೇಟಿವ್ ಸೊಸೈಟಿ ಆರಂಭಿಸಿರುವುದು ಉತ್ತಮ ಬೆಳವಣಿಗೆ, ಈ ಸಂಘಟನೆ ಮುಂದಿನ ದಿನಗಳಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಯುವಕರ ಪಾಲಿಗೆ ಆಶಾಕಿರಣವಾಗಬೇಕು ಎಂದರು.ವಿಚಾರವಾದಿ ಮಹದೇವಕುಮಾರ್ ಮಾತನಾಡಿ, ಬಾಬಾ ಸಾಹೇಬರು ಹೇಳಿಕೊಟ್ಟ ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಮನೋಭಾವವನ್ನು ಯುವಕರು ಬೆಳೆಸಿ ಕೊಳ್ಳಬೇಕು. ಅಂಬೇಡ್ಕರ್ ಅವರ ಸಂವಿಧಾನದಿಂದ ಎಲ್ಲರೂ ದೇಶದಲ್ಲಿ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ಅಂಬೇಡ್ಕರ್ ಒಂದು ಜಾತಿಗೆ ಸಿಮೀತವಾದರಲ್ಲ, ಅವರು ಎಲ್ಲರ ಆಸ್ತಿ ಆಗಿದ್ದಾರೆ. ಇಡೀ ವಿಶ್ವಕ್ಕೆ ಜ್ಞಾನ ಬೆಳಕನ್ನು ನೀಡಿದವರು ಬಾಬಾ ಸಾಹೇಬರು, ಅವರ ಆದರ್ಶ, ಚಿಂತನೆಯಡಿ ಈ ಸಂಸ್ಥೆ ಯುವಕರ ಬಾಳಿಗೆ ಬೆಳಕಾಗುವ ನಿಟ್ಟಿನಲ್ಲಿ ಮುಂದಾಗಬೇಕು ಎಂದರು.
ಈ ವೇಳೆ ಮೈಸೂರು ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಎಸ್. ನಾಗರಾಜು, ವಕೀಲಕರ ಸಂಘದ ಮಾಜಿ ಅಧ್ಯಕ್ಷ ಡಿ.ಎಸ್. ಬಸವರಾಜು, ಗ್ರಾ.ಪಂ ಸದಸ್ಯ ನಂಜುಂಡ, ನಯನ, ಅಶ್ವಿನಿ, ಗ್ರಾಮದ ಯಜಮಾನರಾದ ರಾಜಪ್ಪ, ಮರಿಸ್ವಾಮಿ, ಪುಟ್ಟಮಾದ, ಕುಮಾರ್, ರಾಜೇಂದ್ರ, ಸುಂದರ್, ಪ್ರದೀಪ ಇನ್ನಿತರರಿದ್ದರು.