ಯೂರಿಯಾ ಗೊಬ್ಬರಕ್ಕಾಗಿ ನೂಕುನುಗ್ಗಲು

| Published : Sep 10 2025, 01:03 AM IST

ಸಾರಾಂಶ

ರೈತರು ಗೊಬ್ಬರಕ್ಕಾಗಿ ಬೆಳಗ್ಗೆಯಿಂದಲೇ ಸರದಿಯಲ್ಲಿ ನಿಂತಿದ್ದರು. ೨೫೦ ಚೀಲ ಗೊಬ್ಬರ ತರಿಸಲಾಗಿದ್ದು, ರೈತರಿಗೆ ತಲಾ ೨ ಚೀಲ ಯೂರಿಯಾ ವಿತರಿಸಲಾಯಿತು. ಗೊಬ್ಬರ ಪಡೆಯಲು ರೈತರು ಹರಸಾಹಸ ಪಟ್ಟರು. ಸಮರ್ಪಕವಾಗಿ ಗೊಬ್ಬರ ಸಿಗದ ಕಾರಣ ಕೆಲ ರೈತರು ಬರಿಗೈಯಿಂದ ಮನೆಗೆ ತೆರಳಿದರು.

ಯಲಬುರ್ಗಾ:

ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿನ ಮುಂದೆ ಯೂರಿಯಾ ರಸಗೊಬ್ಬರಕ್ಕಾಗಿ ರೈತರಿಂದ ನೂಕುನುಗ್ಗಲು ಏರ್ಪಟ್ಟಿತು.ರೈತರು ಗೊಬ್ಬರಕ್ಕಾಗಿ ಬೆಳಗ್ಗೆಯಿಂದಲೇ ಸರದಿಯಲ್ಲಿ ನಿಂತಿದ್ದರು. ೨೫೦ ಚೀಲ ಗೊಬ್ಬರ ತರಿಸಲಾಗಿದ್ದು, ರೈತರಿಗೆ ತಲಾ ೨ ಚೀಲ ಯೂರಿಯಾ ವಿತರಿಸಲಾಯಿತು. ಗೊಬ್ಬರ ಪಡೆಯಲು ರೈತರು ಹರಸಾಹಸ ಪಟ್ಟರು. ಸಮರ್ಪಕವಾಗಿ ಗೊಬ್ಬರ ಸಿಗದ ಕಾರಣ ಕೆಲ ರೈತರು ಬರಿಗೈಯಿಂದ ಮನೆಗೆ ತೆರಳಿದರು.ಮಸಾರಿ ಭಾಗದಲ್ಲಿ ರೈತರು ಹೆಚ್ಚು ಮಕ್ಕೆಜೋಳ ಬಿತ್ತನೆ ಮಾಡಿದ್ದು, ಯೂರಿಯಾ ರಸಗೊಬ್ಬರ ಅವಶ್ಯಕತೆ ಇದೆ. ಸರಿಯಾದ ವೇಳೆಗೆ ಯೂರಿಯಾ ದೊರೆಯದ ಕಾರಣ ಬೆಳೆ ಕುಂಠಿತಗೊಳ್ಳುತ್ತಿವೆ. ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ರೈತರಿಗೆ ಸಮರ್ಪಕವಾಗಿ ಯೂರಿಯಾ ಗೊಬ್ಬರ ವಿತರಿಸಲು ಕ್ರಮ ವಹಿಸಬೇಕು ಎಂದು ರೈತರು ಒತ್ತಾಯಿಸಿದರು.ಹಿರೇವಂಕಲಕುಂಟಾ ಪಿಕೆಪಿಎಸ್‌ಎಸ್‌ಎನ್‌ಗೆ ಕೇವಲ ೨೫೦ ಚೀಲ ಯೂರಿಯಾ ರಸಗೊಬ್ಬರ ಬಂದಿದೆ. ಅವಶ್ಯಕತೆಗೆ ತಕ್ಕಷ್ಟು ಗೊಬ್ಬರ ಪೂರೈಕೆ ಮಾಡುವಂತೆ ರೈತ ಸಂಘದಿಂದ ಕೃಷಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಹಂತ-ಹಂತವಾಗಿ ರೈತರಿಗೆ ಗೊಬ್ಬರ ವಿತರಿಸಲು ಪ್ರಯತ್ನಿಸಲಾಗುವುದು.

ವೆಂಕಟೇಶ ಗುತ್ತೇದಾರ, ಜಿಲ್ಲಾ ಉಪಾಧ್ಯಕ್ಷ, ಭಾರತೀಯ ಕ್ರಾಂತಿ ಕಿಸಾನ್ ಸೇನೆ